ದಿನದ ಅಪರಾಧಗಳ ಪಕ್ಷಿನೋಟ 10 ನೇ ಆಗಸ್ಟ್‌ 2105

  ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:09.08.2015 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ:10.08.2015   ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. 

-ಕೊಲೆ : ಇಲ್ಲ.

-ಕೊಲೆಗೆ ಪ್ರಯತ್ನ : ಇಲ್ಲ.

-ಡಕಾಯತಿ : ಇಲ್ಲ.

-ಸುಲಿಗೆ : ಇಲ್ಲ.

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ :ಇಲ್ಲ

-ಮೋಸ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ ಪ್ರಕರಣ (ನಿರ್ದಿಷ್ಟ ದಾವೆ) ದಾಖಲಾಗಿರುತ್ತದೆ.  ದಿನಾಂಕ: 09.08.2015 ರಂದು ಮಾನ್ಯ ನ್ಯಾಯಾಲಯದಿಂದ ನಿರ್ಧೇಶಿತವಾಗಿರುವ ದೂರಿನಲ್ಲಿ, ದೂರುದಾರರಾದ ಶ್ರೀ. ಗಿರೀಶ್ ಬಿನ್ ಅರಸಪ್ಪ, ಡಿ.ಕೆ. ಹಳ್ಳಿ ಗ್ರಾಮ ರವರಿಗೆ 2012ನೇ ಸಾಲಿನ ಜನವರಿ ಮಾಹೆಯಲ್ಲಿ ಆರೋಪಿ ಮಧುಕರ್, ಡಿ.ಕೆ. ಹಳ್ಳಿ ರಸ್ತೆ, ಬೆಮೆಲ್ ನಗರ  ಎಂಬಾತನು ಪರಿಚಯವಾಗಿ, ತಾನು ಬೆಲೆ ಬಾಳುವ ಮೊಬೈಲ್ ಪೋನ್, ಲ್ಯಾಪ್ ಟಾಪ್, ಐ-ಪೋನ್  ಗಳ ಡೀಲರ್ ಆಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಯಾವುದೇ ಕಂಪನಿಯ ಲ್ಯಾಪ್  ಟಾಪ್, ಮೊಬೈಲ್ ಗಳನ್ನು ತಂದು ಕೊಡುವುದಾಗಿ ತಿಳಿಸಿದ್ದು,  ದೂರುದಾರರು ಎರಡು ಲ್ಯಾಪ್ ಟಾಪ್ ಗಳನ್ನು ತರಿಸಿಕೊಡುವಂತೆ  ಮಧುಕರ್‍ ರವರಿಗೆ ತಿಳಿಸಿ ಹಣ ನೀಡಿದ್ದು,  ಮಧುಕರ್‍  ರವರು ಎರಡು ಲ್ಯಾಪ್ ಟಾಪ್ ಗಳನ್ನು ನೀಡಿರುತ್ತಾರೆ. ನಂತರ ಆರೋಪಿಗಳಾದ ಮಧುಕರ್‍, ಅನೀಲ್, ನವೀನ್ ಕುಮಾರ್‍, ರವಿ ಕುಮಾರ್‍, ಯುವರಾಜ್, ನವನಂದ, ಸಂಜಯ್ ಕುಮಾರ್‍, ಸ್ವರೂಪ್, ಭಾರ್ಗವ್, ಸುಭಾಷ್, ಪುರುಷೋತ್ತಮ್  ರವರುಗಳು ಜೊತೆಗೂಡಿ ದಿನಾಂಕ 12.09.2012 ರಂದು  ಕಡಿಮೆ ದರದಲ್ಲಿ ಲ್ಯಾಪ್ ಟಾಪ್, ಮೊಬೈಲ್  ಪೋನ್, ಮತ್ತು ಎಲ್.ಇ.ಡಿ ಟಿವಿ ಮತ್ತು ಇತರೆ ತಂತ್ರಾಂಶದ ಸಲಕರಣೆಗಳನ್ನು ಕೊಡುವುದಾಗಿ ದೂರುದಾರರಿಗೆ ನಂಬಿಸಿ 5,00,000/-ರೂ ಗಳನ್ನು ಪಡೆದುಕೊಂಡು ಯಾವುದೇ ವಸ್ತುಗಳನ್ನು ನೀಡದೇ ಮೋಸಮಾಡಿದ್ದು,  ದೂರುದಾರರು ಆರೋಪಿಗಳನ್ನು ಕೇಳಿದಕ್ಕೆ ಆರೋಪಿಗಳು ಅವ್ಯಾಚ್ಚ ಶಬ್ದಗಳಿಂದ  ಬೈದು,  ಪ್ರಾಣ ಬೆದರಿಕೆ  ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

 -ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a comment