ದಿನದ ಅಪರಾಧಗಳ ಪಕ್ಷಿನೋಟ 13 ನೇ ಮಾರ್ಚ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 12.03.2018 ರಂದು ಸಂಜೆ 5.00 ಗಂಟೆಯಿಂದ ದಿನಾಂಕ: 13.03.2018 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : ಇಲ್ಲ

– ಕೊಲೆ  ಪ್ರಯತ್ನ : ಇಲ್ಲ 

– ಡಕಾಯತಿ : ಇಲ್ಲ

– ಸುಲಿಗೆ : ಇಲ್ಲ

– ಕನ್ನ ಕಳುವು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 12.03.2018 ರಂದು ದೂರುದಾರರಾದ ಶ್ರೀ. ರವೀಂದ್ರ ಬಿನ್‌ ನಾರಾಯಣಗೌಡ ಕಾರಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ: 09.03.2018 ರಂದು ಬೆಳಗಿನ ಜಾವ ಸುಮಾರು 5.30 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮಗಳನ್ನು ನೋಡಿಕೊಂಡು ಬರಲು ಬೆಂಗಳೂರಿಗೆ ಹೋಗಿ ಅಲ್ಲಿಯೇ ತಂಗಿದ್ದು,  ದಿನಾಂಕ: 11.03.2018 ರಂದು  ರಾತ್ರಿ 8.30 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ರೂಂನಲ್ಲಿರುವ ಬೀರುವಿನ ಬೀಗವನ್ನು ಮುರಿದು ಅದರಲ್ಲಿದ್ದ ಬಂಗಾರದ ಕತ್ತಿನ ಚೈನುಗಳು ಸುಮಾರು – 22 ಗ್ರಾಂ, ಬಂಗಾರದ ಬಳೆಗಳು ಸುಮಾರು 20 ಗ್ರಾಂ, ಹಾಗೂ ದೇವರ ಮನೆಯಲ್ಲಿದ್ದ ಸುಮಾರು 1 ಕೆ.ಜಿ. ಬೆಳ್ಳಿಯ ಸಾಮಗ್ರಿಗಳು, ಹಾಗೂ ನಗದು ಹಣ 28,000/- ರೂಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಬೆಲೆ ರೂ  1,50,000/- ಬಾಳತಕ್ಕದ್ದಾಗಿರುತ್ತೆ.

– ಸಾಧಾರಣ ಕಳ್ಳತನ : ಇಲ್ಲ

– ರಸ್ತೆ ಅಪಘಾತಗಳು :‍ ‌

– ಮೋಸ/ವಂಚನೆ ಪ್ರಕರಣಗಳು : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

– ಅಪಹರಣ : ಇಲ್ಲ

– ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :ಇಲ್ಲ

– ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

 – ಹಲ್ಲೆ : ಇಲ್ಲ

– ಅಕ್ರಮ ಮದ್ಯ ಮಾರಾಟ :ಇಲ್ಲ

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :ಇಲ್ಲ

-ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.03.2018 ರಂದು ದೂರುದಾರರಾದ ಶ್ರೀ. ನಾಗೇಶ್‌ ಬಿನ್‌ ಚಿನ್ನಪ್ಪ ಬೂದಿಕೋಟೆ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ 02-01-2018 ರಂದು ರಾತ್ರಿ 8-00 ಗಂಟೆಗೆ  ದೂರುದಾರರು ಮನೆಯಲ್ಲಿದ್ದಾಗ ಆರೋಪಿ ನಂದಕುಮಾರ್‌  ಎಂಬುವರು ದೂರುದಾರರ ಮನೆಯೊಳಗೆ ಆಕ್ರಮ ಪ್ರವೆಶ ಮಾಡಿ ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿ ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಅಸ್ವಾಭಾವಿಕ ಮರಣ :01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.03.2018 ರಂದು ದೂರುದಾರರಾದ ಶ್ರೀಮತಿ ಶೀಲಮ್ಮ,  ದೊಡೇರಿ ಗ್ರಾಮ ಕಾಮಸಮುದ್ರಂ ರವರು ನೀಡಿದ ದೂರಿನಲ್ಲಿ ದೂರುದಾರರ ಗಂಡನಾದ ಲಕ್ಷ್ಮಪ್ಪ, 55 ವರ್ಷ ರವರು ದಿನಾಂಕ 12.03.2018 ರಂದು ಸಂಜೆ 6.30 ಗಂಟೆಯಲ್ಲಿ ತಾವರೆಕೆರೆ ಗ್ರಾಮದ ಬಳಿ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಲು ಟ್ಯೂಬ್ ಮುಖಾಂತರ ಇಳಿದಾಗ ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.

 

 

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s