ಪತ್ರಿಕಾ ಪ್ರಕಟಣೆ ನಿವೃತ್ತ ಸಿಬ್ಬಂದಿಯವರಿಗೆ ಬಿಳ್ಕೋಡುಗೆ ಸಮಾರಂಭ

ಪತ್ರಿಕಾ ಪ್ರಕಟಣೆ

ಕೆಜಿಎಫ್ : ನಿವೃತ್ತ ಸಿಬ್ಬಂದಿಯವರಿಗೆ ಬಿಳ್ಕೋಡುಗೆ ಸಮಾರಂಭ

ಸೇವೆಯಲ್ಲಿರುವಾಗ ಪ್ರತಿಯೊಬ್ಬ ಸರ್ಕಾರಿ ನೌಕರರು ಉತ್ತಮವಾದ ಸೇವೆಯನ್ನು ಸಲ್ಲಿಸುವ ಮೂಲಕ, ಅವರ ಸೇವೆಯು ಮುಂದಿನ ಜನಾಂಗಕ್ಕೆ ಆದರ್ಶವಾಗುವ ಮೂಲಕ ಜನಸಾಮಾನ್ಯರ ಮನಗೆಲ್ಲುವ ಕಾರ್ಯ ಮಾಡಬೇಕೆಂದು ಕೆ.ಜಿ.ಎಫ್ ಜಿಲ್ಲಾ ರಕ್ಷಣಾಧಿಕಾರಿ ಡಾ|| ದಿವ್ಯಾ ವಿ ಗೋಪಿನಾಥ್ ಅವರು ಕರೆ ನೀಡಿದರು.

ಅವರು ಬುಧವಾರದಂದು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಇಬ್ಬರು ವಯೋ ನಿವೃತ್ತಿಹೊಂದಿರುತ್ತಾರೆ. ಬೇತಮಂಗಲ ಪೊಲೀಸ್ ಠಾಣೆಯ ಮುಖ್ಯಪೇದೆ ಬಿ.ವಿ. ರಾಮಚಂದ್ರಪ್ರಸಾದ್ ಮತ್ತು ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಮುಖ್ಯಪೇದೆ ಬಿ.ಎಂ. ರಾಮರೆಡ್ಡಿ ಅವರು ನವೆಂಬರ್ ೩೦ ರಂದು ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಏರ್ಪಡಿಸಿದ್ದ, ಬಿಳ್ಕೋಡುಗೆ ಸಮಾರಂಭದಲ್ಲಿ ಕೆ.ಜಿ.ಎಫ್ ಜಿಲ್ಲಾ ರಕ್ಷಣಾಧಿಕಾರಿ ಡಾ|| ದಿವ್ಯಾ ವಿ ಗೋಪಿನಾಥ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿವೃತ್ತ ಸಿಬ್ಬಂದಿಗಳು ಸುಮಾರು ೩೦ ವರ್ಷಗಳ ಕಾಲ ಪೊಲೀಸ್ ಇಲಾಖೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸುವ ಮೂಲಕ ಯಶಸ್ವಿಯಾಗಿರುತ್ತಾರೆ. ಇವರ ಸೇವೆ, ಅನುಭವವು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು. ಪ್ರತಿಯೊಬ್ಬ ಉದ್ಯೋಗಿಗಳಿಗೆ ನಿವೃತ್ತಿಯು ಇದ್ದೇ ಇರುತ್ತದೆ, ಇರುವುದರೊಳಗೆ ಉತ್ತಮವಾದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂದರು. ನೈತಿಕ ಬೆಂಬಲದೊಂದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ಸರ್ಕಾರಿ ಸೇವೆಯನ್ನು ದಕ್ಷ ಹಾಗೂ ಪ್ರಾಮಾಣಿಕವಾಗಿ ಸಲ್ಲಿಸುವ ನಿಷ್ಠೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ|| ದಿವ್ಯಾ ವಿ ಗೋಪಿನಾಥ್ ಅವರು ಕರೆ ನೀಡಿದರು.

ನಿವೃತ್ತರಾದ ಬಿ.ವಿ. ರಾಮಚಂದ್ರಪ್ರಸಾದ್ ಮತ್ತು ಬಿ.ಎಂ ರಾಮರೆಡ್ಡಿ ಮುಖ್ಯ ಪೇದೆ ಅವರುಗಳಿಗೆ ಶಾಲು ಹೊದಿಸಿ, ಆತ್ಮಿಯವಾಗಿ ಸನ್ಮಾನಿಸಿ, ಹಣ್ಣುಹಂಪಲು, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಎಸ್.ಆರ್. ಜಗದೀಶ್, ಸಿ.ಎ. ನಾರಾಯಣಸ್ವಾಮಿ, ಮುಸ್ತಾಕ್‌ಪಾಷ, ಜಿ.ಕೆ.ಮಧುಸೂಧನ್, ಟಿ.ಎಂ.ಶಿವಕುಮಾರ್, ಸುದೀರ್, ನಿಸ್ತಂತು ಪಿ.ಐ. ಎನ್.ಉಮಾಶಂಕರ್, ಆರ್.ಪಿ.ಐ. ವಿ. ಸೋಮಶೇಖರ್, ಪಿಎಸ್‌ಐಗಳಾದ ವೆಂಕಟಕೃಷ್ಣ, ಪುಟ್ಟೇಗೌಡ, ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ವಿ.ವಿಶ್ವನಾಥ, ಶಾಖಾಧೀಕ್ಷಕ ಎಂ.ಮೂರ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಚಿತ್ರಶೀರ್ಷಿಕೆ: ೩೦ಕೆಜಿಎಫ್೦೨: ನಿವೃತ್ತರಾದ ರಾಮಚಂದ್ರಪ್ರಸಾದ್, ರಾಮರೆಡ್ಡಿ ಅವರನ್ನು ಸನ್ಮಾನಿಸಿದ ಎಸ್ಪಿ ಡಾ|| ದಿವ್ಯಾ ವಿ ಗೋಪಿನಾಥ್, ಡಿವೈಎಸ್ಪಿ ಪುಟ್ಟಮಾದಯ್ಯ ಇತರರು.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s