ಪತ್ರಿಕಾ ಪ್ರಕಟಣೆ ದಿನಾಂಕ:30.11.2016

  ಪತ್ರಿಕಾ ಪ್ರಕಟಣೆ

ಕೆ.ಜಿ.ಎಫ್‌ ಪೊಲೀಸ್‌ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಕಳವು ಮಾಲುಗಳ ಪ್ರದರ್ಶನ, ವಾರಸುದಾರರಿಗೆ ವಿತರಣೆ ಕಾರ್ಯಕ್ರಮ:

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪತ್ತೆಯಾಗಿರುವ ಕಳವು ಮಾಲುಗಳ ಪ್ರದರ್ಶನ ಹಾಗೂ ವಾರಸುದಾರರಿಗೆ ಸುಮಾರು ರೂ. 50 ಲಕ್ಷ ಮೌಲ್ಯದ ಮಾಲನ್ನು ವಿತರಿಸುವ ಕಾರ್ಯಕ್ರಮವನ್ನು ಬುಧವಾರದಂದು ಏರ್ಪಡಿಸಲಾಗಿತ್ತು.

ಕೆಜಿಎಫ್  ಉಪವಿಭಾಗದ ಡಿವೈಎಸ್ಪಿ ಪುಟ್ಟಮಾದಯ್ಯ ಅವರ ನೇತೃತ್ವದಲ್ಲಿ ನಡೆದ ಪತ್ತೆಯಾಗಿದ್ದ ಕಳವು ಮಾಲುಗಳ ಪ್ರದರ್ಶನದಲ್ಲಿ, ಬಂಗಾರಪೇಟೆ, ರಾಬರ್ಟ್‌ಸನ್‌ಪೇಟೆ, ಉರಿಗಾಂ, ಕಾಮಸಮುದ್ರಂ, ಬೆಮೆಲ್‌ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ, ಇತ್ತಿಚೆಗೆ ಪತ್ತೆಯಾಗಿದ್ದ ಕಳವು ಮಾಲುಗಳ ಪ್ರದರ್ಶನದಲ್ಲಿ ಮಾಲನ್ನು ವಾರಸುದಾರರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ ಅವರು ಮಾತನಾಡಿ, ಕೆಜಿಎಫ್ ಪೊಲೀಸ್ ಜಿಲ್ಲೆಯ 2016-17ನೇ ಸಾಲಿನ ಕಳವು ಪ್ರಕರಣಗಳಲ್ಲಿ ಶೇ.70% ರಷ್ಟು ಪ್ರಗತಿಯನ್ನು ತೋರ್ಪಡಿಸಲಾಗಿದೆ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ, ನಿಯಮಾವಳಿಗಳ ಪ್ರಕಾರ ಯಾವುದೇ ರೀತಿಯಲ್ಲೂ ಮಾನವ ಹಕ್ಕುಗಳ ಉಲ್ಲಂಘನೆಯಾಗದ ರೀತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಶೇ.30% ರಷ್ಟು ಪ್ರಕರಣಗಳಲ್ಲಿ ಪ್ರಗತಿ ತೋರ್ಪಡಿಸಲು ಸಾಧ್ಯವಾಗಿರುವುದಿಲ್ಲ. ಸಾರ್ವಜನಿಕರ ಸಹಕಾರವಿದ್ದಲ್ಲಿ ಅಪರಾಧಗಳನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತೆಂದು ಹಾಗೂ ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋದಾಗ ಮನೆಯ ಮುಖ್ಯ ಬಾಗಿಲಿಗೆ ಹೊರಗಡೆ ಬೀಗವನ್ನು ಹಾಕಬಾರದು, ಬಾಗಿನ ಪಾಟ್‌ ಲಾಕ್‌ ಬೀಗವನ್ನು ಹಾಕಿಕೊಂಡು ಮನೆಯ ಒಳಗೆ ಹಾಗೂ ಹೊರಗೆ ಲೈಟನ್ನುಹಾಕಿರಬೇಕೆಂದು ಡಿವೈಎಸ್ಪಿ ಪುಟ್ಟಮಾದಯ್ಯ ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಎಸ್.ಆರ್.ಜಗದೀಶ್, ಸುಧೀರ್, ಮುಸ್ತಾಕ್‌ಪಾಷ, ಜಿ.ಕೆ. ಮಧುಸೂಧನ್, ಸಿ.ಎ.ನಾರಾಯಣಸ್ವಾಮಿ, ಟಿ.ಎಂ.ಶಿವಕುಮಾರ್, ಆರ್‌ಪಿಐ ವಿ.ಸೋಮಶೇಖರ ಹಾಗೂ ಜಿಲ್ಲೆಯ ಎಲ್ಲಾ ಪಿ.ಎಸ್.ಐ.ಗಳು ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ: ಕೆಜಿಎಫ್ ನಲ್ಲಿ ಪತ್ತೆಯಾಗಿರುವ ಕಳವು ಮಾಲುಗಳನ್ನು ವಾರಸ್ಸುದಾರರಿಗೆ ವಿತರಣೆ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ ಇತರರು

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s