ದಿನದ ಅಪರಾಧಗಳ ಪಕ್ಷಿನೋಟ 28ನೇ ನವೆಂಬರ್‌ 2016

h

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:27.11.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ:28.11.2016 ರಂದು ಬೆಳಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು :ಇಲ್ಲ

-ಸಾಧಾರಣ ಕಳ್ಳತನ :ಇಲ್ಲ

-ರಸ್ತೆ ಅಪಘಾತಗಳು :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:27.11.2016 ರಂದು ದೂರುದಾರರಾದ ಶ್ರೀ. ಮಂಜುನಾಥ್‌ ಬಿನ್‌ ವೆಂಕಟೇಶ್‌, ಜನತಾ ಕಾಲೋನಿ, ಬೂದಿಕೋಟೆ ಗ್ರಾಮ ರವರು  ನೀಡಿದ ದೂರಿನಲ್ಲಿ. ದೂರುದಾರರ ತಮ್ಮನಾದ ನರೇಶ್ ಕುಮಾರ್ ವಯಸ್ಸು 28 ವರ್ಷ ರವರು ಅತನ ದ್ವಿ ಚಕ್ರ ವಾಹನ ಹಿರೋ ಹೊಂಡಾ ಸ್ಲ್ಪೆಂಡರ್ ಪ್ಲಾಸ್ ಕೆಎ 53 ಕೆ 7231 ವಾಹನವನ್ನು ಬಂಗಾರಪೇಟೆ–ಬೂದಿಕೋಟೆ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಬಂಗಾರಪೇಟೆ ಕಡೆಯಿಂದ ಟಿ ವಿ ಎಸ್ ಅಪ್ಪಾಚಿ ವಾಹನ ಸಂಕ್ಯೆ ಕೆಎ 08 ಯು 7477  ವಾಹನವನ್ನು ಚಾಲಕರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಪಡಿಸಿದ ಪರಿಣಾಮ ನರೇಶ್ ಕುಮಾರ್‍ 28 ವರ್ಷ ಬೂದಿಕೋಟೆ ಮತ್ತು ಚಿದಾನಂದ 23 ವರ್ಷ, ಪಚ್ಚಾರಲಹಳ್ಳಿ  ಗ್ರಾಮ ಬಂಗಾರಪೇಟೆ ತಾ.  ರವರುಗಳು ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾರೆ.

-ಮೋಸ/ವಂಚನೆ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:27.11.2016 ರಂದು ದೂರುದಾರರಾದ ಶ್ರೀ. ತಬ್ರೇಜ್‌ ಬಿನ್‌ ಅಬ್ದುಲ್‌ ರಹಮಾನ್‌, ಸುಂದರಪಾಳ್ಯ ಗ್ರಾಮರವರು ನೀಡಿದ ದೂರಿನಲ್ಲಿ. ದೂರುದಾರರ ತಾತನಾದ ಪವತಿ ಮಿರಾನ್ ಸಾಬ್  ರವರಿಗೆ ಸೇರಿದ ಸುಂದರಪಾಳ್ಯ ಗ್ರಾಮದ ಸರ್ವೆ ನಂ:142, ಮತ್ತು 184 ರಲ್ಲಿ 2 ಎಕರೆ 13 ಗುಂಟೆ  ಜಮೀನನ್ನು ದೂರುದಾರರ ತಂದೆಯಾದ ಅಬ್ದುಲ್ ರೆಹಮಾನ್ ರವರು ದಿನಾಂಕ:20.03.1981 ರಲ್ಲಿ ಹಸ್ನುಖಾನ್ ರವರಿಂದ  ಕ್ರಯದ ನೊಂದಣಿ ಮಾಡಿಸಿಕೊಂಡಿದ್ದು, ಸದರಿ ಜಮೀನಿನ ದಾಖಲಾತಿಗಳು ಪಿರ್ಯಾದಿಯ ತಂದೆಯ  ಹೆಸರಿನಲ್ಲಿದ್ದು ಸ್ವಾದೀನ ಅನುಭವದಲ್ಲಿರುತ್ತದೆ.  ಸದರಿ ಜಮೀನನ್ನು ವಿಭಾಗಗಳು  ಮಾಡಿಕೊಳ್ಳುವ ಸಲುವಾಗಿ ದೂರುದಾರರು ಮತ್ತು ಅವರ ಸಂಬಂದಿಕರು ದಿನಾಂಕ 23.11.2016 ರಂದು ಬಂಗಾರಪೇಟೆ ಉಪನೊಂದಣಿ ಕಚೇರಿಯ ದಾಖಲಾತಿಗಳ ವಿಭಾಗದಲ್ಲಿ ಇ.ಸಿ ಪ್ರತಿಯನ್ನು ನೋಡಲಾಗಿ ದಿನಾಂಕ 22.11.2014 ರಂದು ದೂರುದಾರರ ತಂದೆಯಾದ ಅಬ್ದುಲ್ ರೆಹಮಾನ್ ರವರ ಹೆಸರಿನಲ್ಲಿದ್ದ ದಾಖಲಾತಿಗಳನ್ನು ಆರೋಪಿಗಳಾದ ಶಫೀಉಲ್ಲಾ, ಅಮೀರ್‌ ಜಾನ್‌, ಪಾತಿಮ ರವರುಗಳು ನಕಲಿ  ದಾಖಲೆಗಳನ್ನು ಸೃಷ್ಟಿಸಿ, ದಾಖಲೆಗಳನ್ನು ಮೋಸ ಮಾಡಿದ್ದು ಸದರಿ ವಿಚಾರವನ್ನು ದೂರುದಾರರು ಕೇಳಿದ್ದಕ್ಕೆ ಆರೋಪಿಗಳು ಕೆಟ್ಟ ಮಾತುಗಳಿಂದ ಬೈದು ಕೊಲೆ ಮಾಡಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ದೊಂಬಿ :ಇಲ್ಲ

– ಜೂಜಾಟ ಕಾಯ್ದೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :ಇಲ್ಲ

-ಹಲ್ಲೆ : ಇಲ್ಲ

-ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s