ದಿನದ ಅಪರಾಧಗಳ ಪಕ್ಷಿನೋಟ 24ನೇ ನವೆಂಬರ್‌ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 23.11.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ:24.11.2016 ರಂದು ಬೆಳಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು :ಇಲ್ಲ

-ಸಾಧಾರಣ ಕಳ್ಳತನ :ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ :ಇಲ್ಲ

– ಜೂಜಾಟ ಕಾಯ್ದೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :ಇಲ್ಲ

-ಹಲ್ಲೆ : ಇಲ್ಲ

-ಇತರೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮರಳು ಸಾಗಾಣೆಕೆ ಮಾಡುತ್ತಿದ್ದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 23.11.2016 ರಂದು ರಾತ್ರಿ 11.00 ಗಂಟೆಯಲ್ಲಿ ದೂರುದಾರರಾದ ಶ್ರೀ. ಪುಟ್ಟೇಗೌಡ, ಬೇತಮಂಗಲ ಪಿಎಸ್‌ಐ ರವರು ಗಸ್ತಿನಲ್ಲಿದ್ದಾಗ ಬಂದ ಮಾಹಿಯ ಮೇರೆಗೆ ಕನ್ನಂಬಾಡಿ ಕೆರೆಯಲ್ಲಿ ಆಯಿಲ್ ಮೋಟರ್  ಮತ್ತು ಪಂಪ್  ಅಳವಡಿಸಿಕೊಂಡು ಬೇತಮಂಗಲದ ವಾಸಿಯಾದ  ಮುನಿವೆಂಕಟಪ್ಪ ಮತ್ತು ದೂರುದಾರರ ಮಗನಾದ ಸುಬ್ರಮಣಿ,  ಎಂಬುವರು ಮುನಿವೆಂಕಟಪ್ಪ ರವರ ಜಮೀನಿನಲ್ಲಿ  ಅಕ್ರಮವಾಗಿ ಮರಳನ್ನು ಪಿಲ್ಟರ್ ಮಾಡಿ ಮಾರಾಟ ಮಾಡುತ್ತಿದ್ದವರ ವಿರುದ್ದ ಕಾನೂನು ಕ್ರಮ ಜರಿಗಿಸಿರುತ್ತಾರೆ.

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 23.11.2016 ರಂದು ದೂರುದಾರರಾದ ಶ್ರೀಮತಿ ತಬಾಸಮ್‌ ಕೋಂ ಉನಾಯತ್‌ ಷರೀಪ್‌, ಚಾಮರಾಜ್‌ಪೇಟೆ ರವರು ನೀಡಿದ ದೂರಿನಲ್ಲಿ. ದೂರುದಾರರ ಗಂಡನಾದ ಇನಾಯತ್ ಷರೀಪ್ ,24 ವರ್ಷ ರವರು ಬೆಮೆಲ್ ಕಾರ್ಖನೆಯಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ:-14.11.2016 ರಂದು ಬೆಳಿಗ್ಗೆ 9:00 ಗಂಟೆಗೆ ಎಂದಿನಂತೆ ಕೆಲಸಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಮನೆಯಿಂದ ಕೆಲಸಕ್ಕೆ ಹೋದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.

-ಅಸ್ವಾಭಾವಿಕ ಮರಣ : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:23.11.2016 ರಂದು ದೂರುದಾರರಾದ ಶ್ರೀಮತಿ ಹೇಮಾವತಿ ರವರು ನೀಡಿದ ದೂರಿನಲ್ಲಿ. ಸ್ವಾತಿ ರವರ ತಂದೆ ತಾಯಿ 08 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಆಕೆಯನ್ನು ಆಕೆಯ ಸೋದರ ಮಾವ ದೊಡ್ಡೂರು ಕರಪನಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ರವರು ಕರೆತಂದು ಸಾಕಿಕೊಂಡಿದ್ದು,  ಸ್ವಾತಿ 16 ವರ್ಷ ರವರ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೊಠಡಿಯಲ್ಲಿದ್ದ ಫ್ಯಾನ್ ಗೆ ವೇಲ್ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s