ದಿನದ ಅಪರಾಧಗಳ ಪಕ್ಷಿನೋಟ 23ನೇ ನವೆಂಬರ್‌2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 22.11.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ:23.11.2016 ರಂದು ಬೆಳಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಸಾಧಾರಣ ಕಳ್ಳತನ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:22.11.2016 ರಂದು ಸಂಜೆ 6.10 ಗಂಟೆಯ ಸಮಯದಲ್ಲಿ ದೂರುದಾರರಾದ ಶ್ರೀ. ಸುರೇಶ್‌ ಬಾಬು ಬಿನ್‌. ಚಂದ್ರಪ್ಪ, ಚಲದಿಗಾನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರು ದಿನಾಂಕ:06.11.2016 ರಂದು ರಾತ್ರಿ 7.45 ಗಂಟೆಯಲ್ಲಿ ಪಾರಾಂಡಹಳ್ಳಿಯ ಮಹಾವಿಷ್ಣು ಕಲ್ಯಾಣ ಮಂಟಪದಲ್ಲಿ ಮಧುವೆ ಇದ್ದ ಪ್ರಯುಕ್ತ, ದೂರುದಾರರು ಅವರ ದ್ವಿ ಚಕ್ರ ವಾಹನ ನೊಂದಣಿ ಸಂಖ್ಯೆ: ಕೆ.ಎ.08 ಆರ್.1559 ರ ವಾಹನವನ್ನು ಪಾರಂಡಹಳ್ಳಿಯ ಮಹಾವಿಷ್ಣು ಕಲ್ಯಾಣ ಮಂಟಪದ ಮುಂಭಾಗ ನಿಲ್ಲಿಸಿ, ಮಧುವೆ ಮುಗಿಸಿಕೊಂಡು ರಾತ್ರಿ 9.00 ಗಂಟೆಗೆ ವಾಪಸ್ಸು ಬಂದು ವಾಹನವನ್ನು ನೋಡಲಾಗಿ, ದೂರುದಾರರು ನಿಲ್ಲಿಸಿದ್ದ, ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ವಾಹನದ ಬೆಲೆ ಸುಮಾರು ರೂ 30,000/-ಗಳಾಗಿರುತ್ತದೆ.

-ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:22.11.2016 ರಂದು ಮದ್ಯಾಹ್ನ 3-00 ಗಂಟೆಗೆ ದೂರುದಾರರಾ ಚಂದ್ರಶೇಖರ್ ಬಿನ್‌ ಸುಬ್ರಮಣಿ, ದಾಸಾರಲಪಲ್ಲಿ ಗ್ರಾಮ, ವಿ-ಕೋಟೆ  ರವರು ನೀಡಿದ ದೂರಿನಲ್ಲಿ, ದೂರುದಾರರು ಮತ್ತು ದೂರುದಾರರ ಸ್ನೇಹಿತ ಮೋಹನ್‌ ಕುಮಾರ್‍ ಎಂಬುವರು ಕುಪ್ಪಂ-ವಿ.ಕೋಟೆ ಮುಖ್ಯ ರಸ್ತೆಯ ಪಂತನಹಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದಾಗ, ಕುಪ್ಪಂ ಕಡೆಯಿಂದ ವಿ.ಕೋಟೆ ಕಡೆಗೆ ಟ್ರಕ್ ಲಾರಿ ಸಂಖ್ಯೆ ಟಿ.ಎನ್. 37 ಸಿಜೆ-6970 ರ ಚಾಲಕ ಅವರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ವಿ.ಕೋಟೆ ಕಡೆಯಿಂದ ಬರುತ್ತಿದ್ದ, ಬಜಾಜ್ ಪಲ್ಸರ್ ದ್ವಿಚಕ್ರ ವಾಹನ ಸಂಖ್ಯೆ.ಎ01 ಹೆಚ್.ಎಫ್.1114 ಕ್ಕೆ ಡಿಕ್ಕಿ ಪಡಿಸಿದ್ದರಿಂದ ಹಿಂಬದಿಯಲ್ಲಿ ಕುಳಿತ್ತಿದ್ದ ಮೋಹನ್‌ ಕುಮಾರ್‌ 30 ವರ್ಷ ರವರಿಗೆ ರಕ್ತ ಗಾಯಗಳಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.

-ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ :ಇಲ್ಲ

– ಜೂಜಾಟ ಕಾಯ್ದೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :ಇಲ್ಲ

-ಹಲ್ಲೆ : ಇಲ್ಲ

-ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s