ದಿನದ ಅಪರಾಧಗಳ ಪಕ್ಷಿನೋಟ 22ನೇ ನವೆಂಬರ್‌ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 21.11.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ:22.11.2016 ರಂದು ಬೆಳಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ :ಇಲ್ಲ

– ಜೂಜಾಟ ಕಾಯ್ದೆ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಜೂಜಾಟ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 21.11.2016 ರಂದು  ಮದ್ಯಾಹ್ನ ಸುಮಾರು 3.30 ಗಂಟೆಗೆ ಪಿಎಸ್‌‌ಐ ಬಂಗಾರಪೇಟೆ ರವರು ನಗರ ಗಸ್ತಿನಲ್ಲಿರುವಾಗ ಬಂದ ವರ್ತಮಾನದ ಮೇರೆಗೆ  ಆರ್.ಎಂ.ಸಿ ಯಾರ್ಡ್‌ ಸಮೀಪ ಹೊಸ ಕಟ್ಟಡದ ಬಳಿ ಯಾರೋ ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿರುವುದಾಗಿ ಬಂದ ವರ್ತಮಾನದ ಮೇರೆಗೆ ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು ಆರ್.ಎಂ.ಸಿ ಯಾರ್ಡ್  ಬಳಿ ನೋಡಿದಾಗ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳಾದ ಗೋಪಾಲ್‌, ಸಂತೋಷ್‌, ರಮೇಶ್‌, ಮತ್ತು ಗಿರೀಶ್‌ ಎಂಬುವರು ಯಾವುದೇ ಪರವಾನಗಿ ಇಲ್ಲದೆ,  ಅಂದರ್ ಬಾಹರ್ ಎಂದು ಹೇಳಿಕೊಂಡು ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿದ್ದವರನ್ನು ಹಿಡಿದು ಜೂಜಾಟದಲ್ಲಿ ತೊಡಗಿಸಿದ್ದ ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲ, ಸದರಿ ಚೀಲದಲ್ಲಿದ್ದ, ರೂ ಒಟ್ಟು 1,435/-ರೂಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 21.11.2016 ರಂದು ದೂರುದಾರರಾದ ಶ್ರೀ. ಗೌರಮ್ಮ ಕೋಂ ಅಂಬರೀಶ್‌, ದೊಡ್ಡೂರು ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರ ಗಂಡ ಅಂಬರೀಶ್ ರವರು ದೊಡ್ಡೂರು ಗ್ರಾಮದ ಈರಪ್ಪ ಎಂಬುವರಿಂದ ಎರಡು ವರ್ಷಗಳ ಹಿಂದೆ ಮನೆ ಕಟ್ಟುವ ಸಲುವಾಗಿ 80,000/- ರೂಗಳಿಗೆ ಶುದ್ದಕ್ರಯಕ್ಕೆ ತೆಗೆದುಕೊಂಡಿದ್ದು, ಆರೋಪಿ  ನಾಗೇಶ್ ರವರು ಆಗಾಗ ದೂರುದಾರರ ಮನೆಯ ಬಳಿಗೆ ಹೋಗಿ ಮೇಲ್ಕಂಡ ಜಮೀನು ತನಗೆ ಸೇರುತ್ತೆಂದು ತಗಾದೆ ತೆಗೆದು ಗಲಾಟೆ ಮಾಡುತ್ತಿರುತ್ತಾನೆ. ದಿನಾಂಕ 21.11.2016 ರಂದು ಆರೋಪಿಗಳಾದ ನಾಗೇಶ್‌, ಸತ್ತೀಶ್‌, ಚಲಪತಿ, ಸಂಜೀವಪ್ಪ ಎಂಬುವರು ದೂರುದಾರರ ಮನೆಯ ಬಳಿಗೆ ಹೋಗಿ ಗಲಾಟೆ ಮಾಡಿ ದೂರುದಾರರ ಅತ್ತಿಗೆ ಶಶಿಕಳಾ ರವರನ್ನು ಕುರಿತು” ಇದು ನಮ್ಮ ತಾತನ ಸ್ವತ್ತು ನೀವ್ಯಾರು  ಇಲ್ಲಿ ಇರುವುದಕ್ಕೆ ಇದು ನಮ್ಮ ಜಮೀನು ಬಿಟ್ಟುಬಿಡಿ ಎಂದು ಕೆಟ್ಟ ಮಾತುಗಳಿಂದ ಬೈದು ಗಲಾಟೆ ಮಾಡಿ ಸೀರೆಯ ಸೆರಗನ್ನು ಎಳೆದು ಮನಸಿಗೆ ನೋವು ಮಾಡಿರುತ್ತಾರೆ.

-ಹಲ್ಲೆ : ಇಲ್ಲ

-ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s