ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ     

           ಕನಕದಾಸರು ಮಹಾನ್ ಚೇತನ : ಕೆಜಿಎಫ್ ಡಿವೈಎಸ್ಪಿ ಪುಟ್ಟಮಾದಯ್ಯ

ದಾಸ ಶ್ರೇಷ್ಠ ಕವಿ ಕನಕದಾಸರು ನಿತ್ಯ ಸ್ಮರಣೀಯರೆಂದು, ಭಾರತೀಯ ದಾಸ ಸಾಹಿತ್ಯದ ಸಂಸ್ಕೃತಿಯನ್ನು ಇಂದಿಗೂ ಉಳಿಸಿ ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್‌ಚೇತನ ಕನಕದಾಸರೆಂದು ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರು ನುಡಿದರು.

ಅವರು ಕೆಜಿಎಫ್‌ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶ್ರದ್ದಾಭಕ್ತಿಯಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಾವಪೂರ್ವ ಗೌರವವನ್ನು ಸಲ್ಲಿಸಿದ ಬಳಿಕ ಮಾತನಾಡಿ, ಕನಕದಾಸರು ನಮ್ಮ ನಡುವಿನ ಶಿಕ್ಷಾಗುರು ಮಾತ್ರವಲ್ಲ ಮೋಕ್ಷಾಗುರುವೂ ಹೌದು, ಮೋಕ್ಷವು ಸತ್ತಮೇಲೆ ಸಿಗುವಂತದ್ದಲ್ಲ, ಅದು ಬದುಕಿರುವಾಗಲೇ ಪಡೆಯುವ ಬಿಡುಗಡೆಯ ಉಪಾದಿ, ನಾನು ನೀನು ಎಂದು ಅಹಂ ತೋರದಿದ್ದರೆ ಅದೇ ಮೋಕ್ಷವೆಂದರು. ಕನಕದಾಸರ ಕನ್ನಡ ಪ್ರಜ್ಞೆ ಅಪಾರವಾದದ್ದು, ಅವರ ಕಾವ್ಯ ಸೂಕ್ಷ್ಮತೆಯನ್ನು ಅರ್ಥೈಸಿಕೊಳ್ಳಲು ಅವರ ಪದ ಪ್ರಯೋಗಗಳ ಜಾಡು ಕಂಡು ಹಿಡಿಯುವುದು ಅಷ್ಟು ಸುಲಭದ ಮಾತಲ್ಲವೆಂದು, ಕನ್ನಡ ಕೀರ್ತನಾ ಪರಂಪರೆಯನ್ನು ಬೆಳಗಿದ ಕನಕದಾಸರು ಆಧ್ಯಾತ್ಮ ಯಾತ್ರೆಯ ಮೂಲಕ ಈ ಜಗತ್ತಿನಲ್ಲಿ ನಿತ್ಯಸ್ಮರಣೀಯರಾಗಿದ್ದಾರೆಂದು ಡಿವೈಎಸ್ಪಿ ಪುಟ್ಟಮಾದಯ್ಯ ಅವರು ವಿವರಿಸಿದರು.

ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ವಿ.ವಿಶ್ವನಾಥ ಅವರು ಮಾತನಾಡಿ, ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾಸರಲ್ಲಿ ಒಬ್ಬರಾಗಿದ್ದು, ಜೀವನಾನುಭವ, ಲೋಕಾನುಭವದ ಸತ್ಯಾಸತ್ಯತೆಗಳನ್ನು ಕಾವ್ಯದ ಮೂಲಕ ಜನಸಾಮಾನ್ಯರಿಗೆ ಸಮರ್ಪಿಸಿ, ಯಾರೂ ಜಾತಿಯ ಹೆಸರಲ್ಲಿ ಹೊಡೆದಾಡದಂತೆ ನೂರಾರು ವರ್ಷಗಳ ಹಿಂದೆಯೇ ಜಾತ್ಯ್ಯತೀತ ಸಮಾಜದ ನಿರ್ಮಾಣಕ್ಕಾಗಿ ಜನಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನಕದಾಸರ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಎಎಓ ವಿ.ವಿಶ್ವನಾಥ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಆರ್. ಜಗದೀಶ್, ಸುಧೀರ್, ಮುಸ್ತಾಕ್‌ಪಾಷ, ಜಿ.ಕೆ.ಮಧುಸೂಧನ್, ನಿಸ್ತಂತು ಇನ್ಸ್‌ಪೆಕ್ಟರ್ ಎನ್.ಉಮಾಶಂಕರ್, ಸಶಸ್ತ್ರ ಮೀಸಲು ಪಡೆಯ ಇನ್ಸ್‌ಪೆಕ್ಟರ್ ವಿ.ಸೋಮಶೇಖರ್, ಜಿಲ್ಲಾ ಪೊಲೀಸ್ ಕಛೇರಿಯ ವಿ.ಮಂಜುನಾಥ, ಎಸ್.ಹರೀಶ್, ಗಣಕ ಕೇಂದ್ರದ ಮೇಲ್ವಿಚಾರಕ ಎನ್.ಆನಂದ್, ಚಂದ್ರು, ಪಿ.ಎಸ್.ಐ. ವಿ.ಭವಾನಿಶಂಕರ್, ವೆಂಕಟಕೃಷ್ಣ, ಪಿ.ಎಸ್.ಶ್ರೀನಿವಾಸ, ಎ.ಎಸ್.ಐ. ಎನ್.ಜಿ.ಚೌಡಪ್ಪ, ಎನ್.ಶೀನಪ್ಪ ಮತ್ತಿತರರು ಉಪಸ್ಥಿತರಿದ್ದರು.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s