ದಿನದ ಅಪರಾದಗಳ ಪಕ್ಷಿನೋಟ 11ನೇ ನವೆಂಬರ್‌2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 10.11.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 11.11.2016 ರಂದು ಬೆಳಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು : 03

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ 03 ಮೋಸದ ಪ್ರಕರಣ ದಾಖಲಾಗಿರುತ್ತದೆ.

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 10.11.2016 ರಂದು ಬೆಳಿಗ್ಗೆ 10.45 ಗಂಟೆಗೆ ದೂರುದಾರರಾದ ಶ್ರೀ.ಸುಧಾಕರ್, ಆಹಾರ ನಿರೀಕ್ಷಕರು, ಸಹಾಯಕ ನಿರ್ದೇಶಕರ ಕಛೇರಿ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕೆ.ಜಿ.ಎಫ್. ನಗರ ರವರು ನೀಡಿದ ದೂರಿನಲ್ಲಿ ಕೆ.ಜಿ.ಎಫ್. ನಗರದ ಮಿನಿ ಇಬ್ರಾಹಿಂ ರಸ್ತೆ, ಉರಿಗಾಂಪೇಟೆ ಪ್ರದೇಶದಲ್ಲಿ ೧. ವಿಮಲ್‌ ಕುಮಾರ್‌ , ವಿನಿ ಇಬ್ರಾಹಿಂ ರಸ್ತೆ ೨. ಶಿವಕುಮಾರ್‌ ರಾಬರ್ಟ್‌‌ಸನ್‌ಪೇಟೆ ಮತ್ತು  ೩. ಕುಮಾರ್‌, 1ನೇ ಅಡ್ಡ ರಸ್ತೆ, ರಾಬರ್ಟ್‌‌ಸನ್‌‌ಪೇಟೆ ರವರುಗಳು ನೆಟ್ ಕಮ್ಯೂನಿಕೇಷನ್ ಮಾಲೀಕರು ಇವರಿಗೆ, ಆಹಾರ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಕೂಪನ್ ಗಳನ್ನು ಆಧಾರ್ ಆಧಾರಿತ ಬಯೋ ಮೆಟ್ರಿಕ್ ಹೊಂದಾಣಿಕೆಯಂತೆ ಪಡಿತರ ಚೀಟಿದಾರರ ಬಯೋ ಮೆಟ್ರಿಕ್ ಪಡೆದು ಕೂಪನ್ ವಿತರಿಸಲು ಸೇವಾ ಕೇಂದ್ರವನ್ನು ಮಂಜೂರು ಮಾಡಲಾಗಿತ್ತು. ಆದರೆ ಸೆಪ್ಟೆಂಬರ್ 2016 ರ ಮಾಹೆಯಲ್ಲಿ ಒಂದೇ ಆಧಾರ್ ಸಂಖ್ಯೆಯಡಿ ಬಹಳಷ್ಟು ಪಡಿತರ ಚೀಟಿಗಳಿಗೆ ಆಹಾರ ಧಾನ್ಯ/ಸೀಮೆಎಣ್ಣೆ ಕೂಪನ್ ಗಳನ್ನು ನ್ಯಾಯ ಬೆಲೆ ಅಂಗಡಿಗಳೊಂದಿಗೆ ಶಾಮೀಲಾಗಿ ವಿತರಣೆ ಮಾಡಿರುತ್ತಾರೆ. ಆ ಮೂಲಕ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ  ಈ ಮೂರು ಜನ ಆರೋಪಿಗಳು ಮೋಸ ಮಾಡಿರುತ್ತಾರೆ.

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ :ಇಲ್ಲ

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:10.11.2016 ರಂದು ಮಧ್ಯಾಹ್ನ 13-45 ಗಂಟೆಗೆ ದೂರುದಾರರಾದ ಶ್ರೀ. ಲಕ್ಷ್ಮಿನಾರಾಯಣ ಬಿನ್‌ ಪಿಳ್ಳಪ್ಪ, ಅಗ್ರಹಾರ ಮುಳಬಾಗಿಲು ರವರು ನೀಡಿದ ದೂರಿನಲ್ಲಿ  ದೂರುದಾರರ ತಂಗಿಯಾದ ಚನ್ನಲತಾ ಎಂಬುವರನ್ನು ಸುಮಾರು 10 ವರ್ಷಗಳ ಹಿಂದೆ ದೊಡ್ಡಚಿನ್ನಹಳ್ಳಿ ಗ್ರಾಮದ ವಾಸಿ ಬತ್ತೆಪ್ಪ ರವರ ಮಗನಾದ ನಾರಾಯಣಮೂರ್ತಿ ಎಂಬುವರಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ಚನ್ನಲತಾ ರವರಿಗೆ ಆಗಾಗ ಹೊಟ್ಟೆ ನೋವು ಬರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹಾ ವಾಸಿಯಾಗದೆ ಇದ್ದುರಿಂದ ಜೀವನದಲ್ಲಿ ಜಿಗುಪ್ಸೆ ಹೋದಿ ದಿನಾಂಕ:10.11.2016 ರಂದು ಬೆಳಗ್ಗೆ 6-00 ರಿಂದ 6-30 ಗಂಟೆಯ ಸಮಯದಲ್ಲಿ ಪ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s