ದಿನದ ಅಪರಾಧಗಳ ಪಕ್ಷಿನೋಟ 1oನೇ ನವೆಂಬರ್‌ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:0‍9.11.2016ರಂದು ಸಂಜೆ 05.00 ಗಂಟೆಯಿಂದ ದಿನಾಂಕ 10.11.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

 -ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ:ಇಲ್ಲ

-ಮನೆ ಕಳ್ಳತನ: ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು :ಇಲ್ಲ

– ದೊಂಬಿ :ಇಲ್ಲ

– ಜೂಜಾಟ ಕಾಯ್ದೆ :01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಜೂಜಾಟ ಆಡುತ್ತಿದ್ದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.11.2016 ರಂದು ಆಂಡ್ರಸನಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವೆಂಕಟಕೃಷ್ಣಪ್ಪ. ರವರಿಗೆ ಬಂದ ಮಾಹಿತಿಯ ಮೇರೆಗೆ ನಂದ್ಯಾಲಗಡ್ಡ ಗ್ರಾಮದ ಚಂಗಾರೆಡ್ಡಿ ರವರ ನೀಲಗಿರಿ ತೋಪಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 10 ಜನರು ಅಂದರ್ ಬಾಹರ್  ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ದೂರುದಾರರು ಚಂಗಾರೆಡ್ಡಿರವರ ನೀಲಗಿರಿ ತೋಪಿನ ಬಳಿ ಹೋಗಿ ನೋಡಿದಾಗ ಸುಮಾರು 10 ಜನ ಗುಂಪು ಕಟ್ಟಿಕೊಂಡು  ನೀಲಿ ಬಣ್ಣದ ಪ್ಲಾಸ್ಟಿಕ್ ಟಾರ್ ಪಾಲ್ ಅನ್ನು ಹಾಸಿಕೊಂಡು ಅಂದರ್‌ ಬಾಹರ್‌ ಆಡುತ್ತಿದ್ದವರನ್ನು ಹಿಡುದು ಹೆಸರು ವಿಳಾಸ ಕೇಳಿದಾಗ  ಕೃಷ್ಣಾರೆಡ್ಡಿ ಸೋಮಶೇಖರ್‌ ರೆಡ್ಡಿ, ಮುನಿಸ್ವಾಮಿರೆಡ್ಡಿ, ಚಲಪತಿ ಮತ್ತು ಇತರರು ಕೈಯ್ಯಲ್ಲಿ ಇಸ್ಪೀಟ್ ಎಲೆಗಳನ್ನು ಹಿಡಿದುಕೊಂಡು ಅಂದರ್ 500 ಎಂದು ಹೇಳುತ್ತಾ ಎಲೆಗಳನ್ನು ಹಾಕುತ್ತಿದ್ದವರನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಅಮಾನತ್ತುಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿರುತ್ತಾರೆ.

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ :01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.11.2016 ರಂದು ದೂರುದಾರರಾದ ಶ್ರೀ. ಮುನಿವೆಂಕಟಪ್ಪ ಬಿನ್‌. ಲಕ್ಷ್ಮಪ್ಪ, ಬೈನೇನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ 08.11.2016 ರಂದು ಸಂಜೆ 6.00 ಗಂಟೆ ಸಮಯದಲ್ಲಿ ದೂರುದಾರರು ಮನೆಯ ಬಳಿ ಕುಳಿತ್ತಿರುವಾಗ ಅದೇ ಗ್ರಾಮದ ವಾಸಿಯಾದ ಈರಪ್ಪ ಬಿನ್ ನಾರಾಯಣಪ್ಪ ಎಂಬುವವರು ಜಮೀನಿನ ವಿಚಾರದಲ್ಲಿ ಏಕಾಏಕಿ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು,  ದೂರುದಾರರಿಗೆ ಪ್ರಾಣ ಬೆದರಿಕೆ ಹಾಕಿ, ಕೆಟ್ಟ ಮಾತುಗಳಿಂದ ಬೈದು ದೊಣ್ಣೆಯಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :02
        ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.11.2016 ರಂದು ದೂರುದಾರರಾದ ಶ್ರೀಮತಿ ಸರೋಜಮ್ಮ ಹಾರೋಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗಳಾದ ಜಿ. ಲಿಖಿತ 19 ವರ್ಷ ರವರು ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಿಪರೀತ ಹೊಟ್ಟೆನೋವು ಬರುತ್ತಿದ್ದ ಕಾರಣ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಗುಣವಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಕೊಂಡು ದಿನಾಂಕ: 08.11.2016 ರಂದು ಮದ್ಯಾಹ್ನ 3-30 ಗಂಟೆಯಲ್ಲಿ  ಮನೆಯ ಬಳಿ ಯಾವುದೋ ಒಂದು ವಿಷವನ್ನು ಸೇವಿಸಿದ್ದು, ಚಿಕಿತ್ಸೆಗಾಗಿ ಕೋಲಾರ ಆರ್ ಎಲ್ ಜಾಲಪ್ಪ ಆಸ್ವತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 09.11.2016 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
        ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ:09.11.2016 ರಂದು ದೂರುದಾರರಾದ ಶ್ರೀ. ಮುನಿವೆಂಕಟಪ್ಪ ಬಿನ್‌. ಉದ್ದರಪ್ಪ, ದೊಡ್ಡನಾಯಕನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:08.11.2016 ರಂದು ದೂರುದಾರರ ಮಗನಾದ ಬಾಬು @ ರಾಜೇಂದ್ರ ಬಾಬು ವಯಸ್ಸು ಸುಮಾರು 45 ವರ್ಷ  ಎಂಬಾತನು  ಗಾರೆಕೆಲಸ ಮಾಡುತ್ತಿದ್ದು  ಮಧ್ಯಾಹ್ನ  ಸುಮಾರು 12-00 ಗಂಟೆಯಲ್ಲಿ ಬಾಬು @ ರಾಜೇಂದ್ರ ಬಾಬು ರವರಿಗೆ ಎದೆ ನೋವು ಕಾಣೆಸಿಕೊಂಡಾಗ ಬಂಗಾರಪೇಟೆ ಸರ್ಕಾರಿ ಆಸ್ಪತ್ರಗೆ ಹೋಗಿ ಚಿಕಿತ್ಸೆ ದಾಖಲಿಸಿದಾಗ ಹೃದಯಾಘಾತದಿಂದ  ಮೃತಪಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s