ದಿನದ ಅರಾಧಗಳ ಪಕ್ಷಿನೋಟ09ನೇ ನವೆಂಬರ್‌ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:0‍8.11.2016ರಂದು ಸಂಜೆ 05.00 ಗಂಟೆಯಿಂದ ದಿನಾಂಕ 09.11.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

 -ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ:ಇಲ್ಲ

-ಮನೆ ಕಳ್ಳತನ: ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 08.11.2016 ರಂದು ದೂರುದಾರರಾದ ಶ್ರೀ. ಸಾಲೋಮಾನ್‌ ಬಿನ್‌. ಸ್ಟ್ಯಾನ್ಲಿ, ಎ. ಟೈಪ್‌, ಬೆಮೆಲ್‌ ನಗರ , ಕೆ.ಜಿ.ಎಫ್‌ ರವರು ನೀಡಿದ ದೂರಿನಲ್ಲಿ. ದಿನಾಂಕ-08.11.2016 ರಂದು ಮಧ್ಯಾಹ್ನ 2.50 ಗಂಟೆಯಲ್ಲಿ ಭಾರತ್ ನಗರಕ್ಕೆ ಹೋಗಲು  ಬೆಮೆಲ್ ಮೈನ್ ಗೇಟ್ ಬಳಿ ಆಟೋವನ್ನು ಹತ್ತಿಕೊಂಡು ಆಲದಮರದ ಬಳಿ ಆಟೋದಿಂದ ಕೆಳಗೆ ಇಳಿದು ನಿಂತಿದ್ದಾಗ ಕೆ.ಜಿ.ಎಫ್ ಕಡೆಯಿಂದ ಬಂಗಾರಪೇಟೆಗೆ ಹೋಗಲು ಒಂದು ಟಾಟಾ ಏಸ್ ಸೂಪರ್ ಎಸ್ ಗಾಡಿ ಸಂಖ್ಯೆ-KA 08 7983 ರ ಚಾಲಕ ಸದರಿ ಗಾಡಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದೂರುದಾರರ ಎಡ ಕಾಲಿಗೆ ಡಿಕ್ಕಿ ಪಡಿಸಿದ್ದರಿಂದ ದೂರುದಾರರಿಗೆ ರಕ್ತ ಗಾಯಗಳಾಗಿರುತ್ತದೆ

-ಮೋಸ/ವಂಚನೆ ಪ್ರಕರಣಗಳು :ಇಲ್ಲ

– ದೊಂಬಿ :ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ :ಇಲ್ಲ

 -ಇತರೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಾಣೆಕೆ ಮಾಡುತ್ತಿದ್ದವರ ವಿರುದ್ದ ಪ್ರಕರಣ ದಾಖಲು ಮಾಡಿರುತ್ತಾರೆ. ದಿನಾಂಕ: 08.11.2016 ರಂದು ಮದ್ಯಾನ  ಬೇತಮಂಗಲ ಪಿಎಸ್‌ಐ ರವರಿಗೆ ಬಂದ ಮಾಹಿತಿ ಏನೆಂದರೆ, ದೊಡ್ಡಕಾರಿ ಗ್ರಾಮದ ಪಾಲಾರ್ ಕಾಲುವೆಯಲ್ಲಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಮೂಲಕ ದೊಡ್ಡಕಾರಿ ಗ್ರಾಮದ ಗೋಪಿನಾಥ್. ಬಿನ್ ಶ್ರೀನಿವಾಸಚಾರಿ ಮತ್ತು ಆತನ ತಮ್ಮ ಸಂತೋಷ್ ಬಿನ್ ಶ್ರೀನಿವಾಸಚಾರಿ ರವರು ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ  ಸ್ಥಳಕ್ಕೆ ಹೋಗಿ ನೋಡಲಾಗಿ ಜೆ.ಸಿ.ಬಿ ಚಾಲಕ ಗೋಪಿನಾಥ್ ಮತ್ತು ಟ್ರಾಕ್ಟರ್ ಚಾಲಕ ಸಂತೋಷ್ ರವರು  ಸ್ಥಳದಿಂದ ಪರಾರಿಯಾಗಿದ್ದು ಕೃತ್ಯ ನಡೆದ ಸ್ಥಳದಲ್ಲಿ ಜೆಸಿಬಿ ಮತ್ತು ಟ್ರಾಕ್ಟರ್ ಮತ್ತು ಟ್ರಾಲಿ ಇದ್ದು ಟ್ರಾಕ್ಟರ್ ಟ್ರಾಲಿಯಲ್ಲಿ ಒಂದು ಲೋಡ್ ಮರಳನ್ನು ಅಕ್ರಮವಾಗಿ ಲೋಡ್ ಮಾಡಿದ್ದ, ಟ್ರಾಕ್ಟರ್  ಜೆ.ಸಿ.ಬಿ ಯಂತ್ರವನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 2.30 ಗಂಟೆ ಸಮಯಕ್ಕೆ ಕೇಸಿನ ಮುಂದಿನ ತನಿಖೆಯ ಸಲುವಾಗಿ ಅಮಾನತ್ತುಪಡಿಸಿಕೊಂಡು ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s