ದಿನದ ಅಪರಾಧಗಳ ಪಕ್ಷಿನೋಟ 05ನೇ ನವೆಂಬರ್‍ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:04.11.2016ರಂದು ಸಂಜೆ 05.00 ಗಂಟೆಯಿಂದ ದಿನಾಂಕ 05.11.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

 -ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಧಾಕರ್‍ ಬಿನ್ ಆದೆಪ್ಪ, ಪಟ್ರಪಲ್ಲಿ ಗ್ರಾಮ, ವಿ.ಕೋಟ ಮಂಡಲ್, ಆಂದ್ರಪ್ರದೇಶ ರವರು ದಿನಾಂಕ. 04.11.2016 ರಂದು ಮಧ್ಯಾಹ್ನ  2.00 ಗಂಟೆಯಲ್ಲಿ  ವಿಕೋಟೆ-ಕುಪ್ಪಂ ಮುಖ್ಯ ರಸ್ತೆ ಪಂತನಹಳ್ಳಿ ಕ್ರಾಸ್ ನಿಂದ ಸ್ವಲ್ಪ ಮುಂದೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ, ಕುಪ್ಪಂ ಕಡೆಯಿಂದ  ದೂರುದಾರರ ಚಿಕ್ಕಪ್ಪನಾದ ಶ್ರೀ. ಸಿ.ಬಿ ರಾಮಕೃಷ್ಣಪ್ಪ, 55 ವರ್ಷ, ಪಟ್ರಪಲ್ಲಿ ಗ್ರಾಮ ರವರು ಆತನ ದ್ವಿಚಕ್ರವಾಹನ ಹಿರೋಹೋಂಡಾ ಸ್ಪೆಲೆಂಡರ್ ಸಂ. ಎಪಿ-03-ಎಎ-8528 ರಲ್ಲಿ ಬರುತ್ತಿದ್ದಾಗ, ವಿಕೋಟೆ  ಕಡೆಯಿಂದ ಕುಪ್ಪಂ ಕಡೆಗೆ ಹೋಗುತ್ತಿದ್ದ ದ್ವಿಚಕ್ರವಾಹನ ಪ್ಯಾಷನ್ ಪ್ರೋ ಸಂ. ಟಿಎನ್-03-ಎಫ್-8505 ರ ಚಾಲಕನು ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ, ರಾಮಕೃಷ್ಣಪ್ಪ ರವರ ಹಿರೋಹೋಂಡಾ ಸ್ಪೆಲೆಂಡರ್ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ರಾಮಕೃಷ್ಣಪ್ಪ ರಸ್ತೆಯ ಮೇಲೆ ಬಿದ್ದು ತಲೆಗೆ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ  ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ. 04.11.2016 ರಂದು ಸಂಜೆ 5.20 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

-ಮೋಸ/ವಂಚನೆ ಪ್ರಕರಣಗಳು :ಇಲ್ಲ

– ದೊಂಬಿ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಹೇಲ್ ಬಿನ್ ಸರ್ದಾರ್‍, ಪಿಚರ್ಡ್ ರಸ್ತೆ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು  ಅರೋಪಿ ಮಗಿ, ಪಾರಾಂಡಹಳ್ಳಿ, ಕೆ.ಜಿ.ಎಫ್ ರವರ ಬಳಿ ಸಾಲವಾಗಿ 20,000/- ರೂಗಳನ್ನು ಪಡೆದುಕೊಂಡಿದ್ದು, ಆ ಪೈಕಿ 15,000/- ರೂಗಳನ್ನು ವಾಪಸ್ಸು ನೀಡಿದ್ದು, ದಿನಾಂಕ: 03/11/2016 ರಂದು ಸಂಜೆ 7.00 ಗಂಟೆಯಲ್ಲಿ ದೂರುದಾರರು ಪಾರಂಡಹಳ್ಳಿಯ ಸುನೀಲ್ ಕುಮಾರ್ ಎಂಬುವವರ ಕ್ಲೀನಿಕ್ ಮುಂಭಾಗ ನಡೆದುಕೊಂಡು ಮನೆಗೆ  ಹೋಗುತ್ತಿದ್ದಾಗ ಆರೋಪಿ ಮಗಿ ರವರು ದೂರುದಾರರ ಬಳಿ ಬಂದು, ಕೆಟ್ಟ ಮಾತುಗಳಿಂದ ಬೈಯ್ದು,  5,000/- ರೂಗಳು ಕೊಡುವಂತೆ ಕೇಳಿದ್ದು, ದೂರುದಾರರು ಸ್ವಲ್ಪ ದಿನ ಸಮಯ ಕೊಡುವಂತೆ ಕೇಳಿದಾಗ, ಮಗಿ  ಪ್ರಾಣ ಬೆದರಿಕೆ ಹಾಕಿ, ತನ್ನ ಮಗನಿಗೆ ಪೋನ್ ಮಾಡಿ, ಮಗ ಮತ್ತು ಇನ್ನು ಮೂರು ಜನರನ್ನು ಕರೆಸಿಕೊಂಡು, ಆರೋಪಿಗಳು ಅಕ್ರಮಕೂಟ ಕಟ್ಟಿಕೊಂಡು, ಮಗಿ ರವರ ಮಗ ಕಬ್ಬಿಣದ ರಾಡಿನಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿದ್ದು, ಉಳಿದ ಅರೋಪಿಗಳು ಕೈಗಳಿಂದ ಹೊಡೆದು ನೋವುಂಟುಪಡಿಸಿರುತ್ತಾರ.

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ :ಇಲ್ಲ

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ 02 ಪ್ರಕರಣಗಳು ದಾಖಲಾಗಿರುತ್ತದೆ.

೧. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ, ಐತಾಂಡಹಳ್ಳಿ ಗ್ರಾಮ ರವರ ಮಗಳಾದ ಕು. ಮೇಘನ, 20 ವರ್ಷ ರವರು  ದಿನಾಂಕ:03.11.2016 ರಂದು  ಬೆಳಿಗ್ಗೆ 9.00 ಗಂಟೆಗೆ ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ಮತ್ತೆ  ಮನೆಗೆ ಬಾರದೆ  ಕಾಣೆಯಾಗಿರುತ್ತಾಳೆ.

೨. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ವೆಂಕಟಪ್ಪ, ನೇರಳಕೆರೆ ಗ್ರಾಮ ರವರ ಹೆಂಡತಿಯಾದ ಶ್ರೀಮತಿ ಪ್ರಭಾವತಿ, 33 ವರ್ಷ ರವರು ದಿನಾಂಕ:31.10.2016 ರಂದು ತನ್ನ ತವರು ಮನೆಯಾದ ಟೇಕಲ್ ಬಳಿ ಇರುವ ಬ್ಯಾಟರಾಯನಹಳ್ಳಿ ಗ್ರಾಮಕ್ಕೆ ಹೋಗಿದ್ದು,   ದಿನಾಂಕ:01.11.2016 ರಂದು ಬೆಳಿಗ್ಗೆ 11.00 ಗಂಟೆಗೆ ಊರಿಗೆ ಹೋಗುವುದಾಗಿ ಹೇಳಿ ತವರು ಮನೆಯಿಂದ ಬಂದಿದ್ದು, ದೂರುದಾರರ ಮನೆಗೆ ಬರದೆ ಕಾಣೆಯಾಗಿರುತ್ತಾಳೆ.

 

-ಅಸ್ವಾಭಾವಿಕ ಮರಣ :ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s