ದಿನದ ಅಪರಾಧಗಳ ಪಕ್ಷಿನೋಟ 26 ನೇ ಅಕ್ಟೋಬರ್‍ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:25.10.2016ರಂದು ಸಂಜೆ 05.00 ಗಂಟೆಯಿಂದ ದಿನಾಂಕ 26.10.2016 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ : ಇಲ್ಲ

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮರಳ ದಂಧೆಯ ಮೇಲೆ ದಾಳಿ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:25.10.2016  ರಂದು  ದೂರುದಾರರಾದ ಶ್ರೀ. ಶಿವಕುಮಾರ್‌. ಡಿಸಿಬಿ ಪೊಲೀಸ್‌ ನಿರೀಕ್ಷಕರು, ಕೆ.ಜಿ.ಎಫ್ ರವರಿಗೆ ಬಂದ ಮಾಹಿತಿಯ ಮೇರೆಗೆ ಬಂಗಾರಪೇಟೆ ಪೊಲೀಸ್ ಠಾಣೆ ಸರಹದ್ದು, ಹುನ್ಕುಂದ ಗ್ರಾಮದ ಮುನಿಕ್ರಿಷ್ಣಪ್ಪನ ಜಮೀನಿನಲ್ಲಿ ನೈಸರ್ಗಿಕ ಸಂಪತ್ತಾದ ಮಣ್ಣನ್ನು ಕಳ್ಳತನ ಮಾಡಿ, ಮರಳು ಪಿಲ್ಟರ್ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಪಂಚಾಯ್ತಿದಾರರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ, ಮಣ್ಣನ್ನು ಒಂದು ಹಳ್ಳಕ್ಕೆ ತುಂಬಿ ಕೊಳವೆ ಬಾವಿಯಿಂದ ಹಳ್ಳಗಳಲ್ಲಿ ನೀರನ್ನು ತುಂಬಿಸಿಕೊಂಡು ಒಂದು ಮೋಟಾರ್ ಪಂಪಿನಿಂದ ನೀರನ್ನು ಹಾಯಿಸಿಕೊಂಡು ಮಣ್ಣನ್ನು ತೊಳೆದು, ಮರಳನ್ನು ಬೇರ್ಪಡಿಸಿ, ಟ್ರ್ಯಾಕ್ಟರ್ ಗೆ ತುಂಬಿಸುತ್ತಿದ್ದವರನ್ನು ವಿಚಾರ ಮಾಡಲಾಗಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳನ್ನು ಪಿಲ್ಟರ್ ಮಾಡುತ್ತಿದ್ದ ಆರೋಪಿ ಮಧುಕುಮಾರ್‌ 30 ವರ್ಷ ರವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ.

 

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:25.10.2016 ರಂದು ದೂರುದಾರರಾದ ಶ್ರೀ. ಮುರುಗನ್‌ ಬಿನ್‌ ಶ್ರೀನಿವಾಸ, ಜೈನ್‌ ದೇವಸ್ಥಾನ ರಸ್ತೆ, ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ:22.10.2016 ರಂದು ಬೆಳಿಗ್ಗೆ ಸುಮಾರು 6:00 ಗಂಟೆಯ ಸಮಯದಲ್ಲಿ ದೂರುದಾರರ ಹೆಂಡತಿಯಾದ ಶ್ರೀಮತಿ ಸುಮತಿ 26 ವರ್ಷ ರವರು  ಹಾಗೂ ಮಕ್ಕಳಾದ ತುಳಸಿ 6 ವರ್ಷ,  ಶೃತಿ.04 ವರ್ಷ ರವರನ್ನು ಕರೆದುಕೊಂಡು ಹೋಗಿರುತ್ತಾರೆ. ಸಂಬಂಧಿಕರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.

-ಅಸ್ವಾಭಾವಿಕ ಮರಣ :ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 25.10.2016 ರಂದು ಶ್ರೀ.ಗೋಪಿ ಸಿ.ಹೆಚ್.ಸಿ  ರವರು ಕರಡಗೂರು ಗ್ರಾಮದ ಕೆ.ಆರ್ ಶಿವಕುಮಾರ್ ರವರ ಕೋಳಿಫಾರಂ ಬಳಿ ಸಂಜೆ ಸುಮಾರು 07.30  ಗಂಟೆ ಸಮಯದಲ್ಲಿ ಗ್ರಾಮ ಗಸ್ತು ಮುಗಿಸಿಕೊಂಡು ಬರುತ್ತಿದ್ದಾಗ, ಕತ್ತಲಿನಲ್ಲಿ  ಒಬ್ಬ ಆಸಾಮಿ  ನಿಂತುಕೊಂಡಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸ್‌ ರನ್ನು ನೋಡಿ ಓಡಲು ಪ್ರಯತ್ನಿಸಿದಾಗ ಆತನನ್ನು ಹಿಂಬಾಲಿಸಿ ಹಿಡಿದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಆತನು ತೊದಲುತ್ತ ತನ್ನ ಹೆಸರು  ಕುಮಾರ್.ಬಿ ಬಿನ್ ಭೀಮಣ್ಣ, ವಯಸ್ಸು 20 ವರ್ಷ, ವಾಸ- ಮಾಡ್ರನ್ ಕಾಲೋನಿ, ರಾಮಕುಪ್ಪಂ ಗ್ರಾಮ, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ಎಂತಾ ತಿಳಿಸಿದ್ದು, ಇಲ್ಲಿ ಇರಲು ಕಾರಣ ಕೇಳಲಾಗಿ ಯಾವುದೇ ಸಮಂಜಸವಾದ  ಉತ್ತರ ನೀಡದೆ ಯಾವುದೋ ಅಪರಾದ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿರುವುದಾಗಿ ಸಂಶಯ ಬಂದ ಮೇರೆಗೆ ಕುಮಾರ್.ಬಿ. ರವರ ವಿರುದ್ದ, ಕಾನೂನು ಕ್ರಮ ಜರುಗಿಸಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s