ದಿನದ ಅಪರಾಧಗಳ ಪಕ್ಷಿನೋಟ 23ನೇ ಅಕ್ಟೋಬರ್‌ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 23.10.2016ರಂದು ಬೆಳ್ಳಿಗೆ  10.00 ಗಂಟೆಯಿಂದ ದಿನಾಂಕ 23.10.2016 ರಂದು ಸಂಜೆ 05.00 ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ : 01

ಉರಿಗಾಂ ಪೊಲೀಸ್‌ ಠಾಣೆಲ್ಲಿ ದೊಂಬಿ ಗಲಾಟೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.ಈ ಕೃತ್ಯವು ಉರಿಗಾಂ ಪೊಲೀಸ್‌ ಠಾಣೆ ಸರಹದ್ದಿನ ನಂ. 133, ವೆಜ್ಲಿನ್‌ ಬ್ಲಾಕ್‌ನಲ್ಲಿ ನಡೆದಿರುತ್ತದೆ. ದಿನಾಂಕ 21.10.2016 ರಂದು ರಾತ್ರಿ ಸುಮಾರು 8.15 ಗಂಟೆಯಲ್ಲಿ  ದೂರುದಾರರಾದ  ಶ್ರೀಮತಿ. ಭಾರತಿ ಕೋಂ ಬಾಬು, 40 ವರ್ಷ, ರವರು ಮನೆಯಲ್ಲಿರುವಾಗ  ಆರೋಪಿಗಳಾದ ಶಷ್ಮುಣ, ರಾಜನ್‌, ಅಜಿತ್‌, ಅಕ್ಷಯ್‌, ಸುನೀಲ್‌ ಮತ್ತು ಅಜಯ್‌, ಓರಿಯಂಟಲ್‌ ಲೈನ್‌ ವಾಸಿಗಳು  ಅಕ್ರಮ ಗುಂಪು ಸೇರಿಕೊಂಡು ಕೈಗಳಲ್ಲಿ  ಕತ್ತಿ,ದೊಣ್ಣೆಗಳನ್ನು  ಹಿಡಿದು ಹಳೆಯ ದ್ವೇಷದಿಂದ  ಮನೆಯೊಳಗೆ  ನುಗ್ಗಿ  “ಎಲ್ಲಿ ನಿಮ್ಮ ಮಕ್ಕಳು” ಎಂದು ಕೂಗಾಡಿ ವಿನಾಕಾರಣ  ಜಗಳ ಮಾಡಿ ದೂರುದಾರರಿಗೆ  ಕೈಗಳಿಂದ ಹೊಡೆದು  ಕೆಳಗೆ  ತಳ್ಳಿ ಆಕೆಯ ಹೊಟ್ಟೆಭಾಗಕ್ಕೆ ಕಾಲುಗಳಿಂದ   ಒದ್ದು  ಮೈಕೈನೋವುಂಟು ಮಾಡಿರುತ್ತಾರೆ.

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ : ಇಲ್ಲ

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

ಚಾಂಪಿಯನ್‌ ರೀಫ್ಸ್ ಪೊಲೀಸ್‌ಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯ ಉಪ-ಕಾರಾಗೃಹದಲ್ಲಿ ಸಂಭವಿಸಿರುತ್ತದೆ. ದಿನಾಂಕ: 23-10-2016 ರಂದು ಕೆ.ಜಿ.ಎಫ್ ನ ವಿಶೇಷ ಕಾರಾಗೃಹದಲ್ಲಿನ ವಿಚಾರಣಾಧೀನ ಖೈದಿ 3588 ಚನ್ನಪ್ಪ ಬಿನ್ ವರದಪ್ಪ, 49 ವರ್ಷ ರವರು ಬೆಳಗಿನ ಜಾವ 4-20 ಗಂಟೆಯಲ್ಲಿ ಕಾರಾಗೃಹದ ಬಿ ಕೊಠಡಿಯಲ್ಲಿ ನೀರು ಕುಡಿಯಲು ಎದ್ದು ಕುಸಿದು ಬಿದ್ದಾಗ ಆತನನ್ನು ಚಿಕಿತ್ಸೆ ಸಲುವಾಗಿ ಜನರಲ್ ಆಸ್ಪತ್ರೆ, ರಾಬರ್ಟ್ ಸನ್ ಪೇಟೆಗೆ ಕರೆದುಕೊಂಡು ಹೋಗಿದ್ದು ವೈದ್ಯಾಧಿಕಾರಿಗಳುನ ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಡೀಕರಿಸಿರುತ್ತಾರೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s