ಪತ್ರಿಕಾ ಪ್ರಕಟಣೆ 22.10.2016

ಪತ್ರಿಕಾ ಪ್ರಕಟಣೆ
ವಿದ್ಯಾರ್ಥಿ ದಿಸೆಯಿಂದಲೇ ದೇಶಾಭಿಮಾನ ರೂಢಿಸಿಕೊಳ್ಳಬೇಕು : ಡಾ|| ಕೃಷ್ಣ ಕುಮಾರ್

ರಾಷ್ಟ್ರಾಭಿಮಾನವನ್ನು ವಿದ್ಯಾರ್ಥಿ ದಿಸೆಯಿಂದಲೇ ರೂಢಿಸಿಕೊಂಡು, ದೇಶ ಸೇವೆಗೆ ಮುಂದಾಗಬೇಕೆಂದು ಕೆಜಿಎಫ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ|| ಸಿ. ಕೃಷ್ಣಕುಮಾರ್ ಅವರು ಕರೆ ನೀಡಿದರು.

ಅವರು ಕೆಜಿಎಫ್ ಉರಿಗಾಂನಲ್ಲಿನ ಜಿವಿಇಟಿ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ೨೦೦೩ ನೇ ಸಾಲಿನಲ್ಲಿ ಸಿಆರ್‌ಪಿಎಫ್ ಪೇದೆ ಕೆಜಿಎಫ್‌ನ ಜಗದೀಶನ್ ಜಮ್ಮು-ಕಾಶ್ಮೀರ ಗಡಿಯಲ್ಲಿ ಹುತಾತ್ಮರಾದದ್ದನ್ನು ಸ್ಮರಿಸಿ, ಹುತಾತ್ಮರ ಕುಟುಂಬದವರನ್ನು ಸನ್ಮಾನಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಎನ್.ಸಿ.ಸಿ. ಮೊದಲಾದ ಸಂಸ್ಥೆಗಳ ಸೇವೆಯಲ್ಲಿ ತೊಡಗುವ ಮೂಲಕ ಶಿಸ್ತನ್ನು ರೂಢಿಸಿಕೊಂಡು ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಪ್ರಾಂಶುಪಾಲ ಡಾ|| ಸಿ. ಕೃಷ್ಣಕುಮಾರ್ ಅವರು ನುಡಿದರು.

ದೇಶ ಸೇವೆಯಲ್ಲಿ ಸೈನಿಕರು, ಪೊಲೀಸರು, ಯೋಧರ ಪಾತ್ರವು ಮಹತ್ವವಾಗಿದ್ದು, ಇಂದಿನ ಯುವ ಪೀಳಿಗೆಯು ತಂತಾನೆ ರಾಷ್ಟ್ರದ ಸೇವೆಯಲ್ಲಿ ತೊಡಗಿಸಿಕೊಂಡಲ್ಲಿ ದೇಶದ ಸರ್ವತೋಮುಖಾಭಿವೃದ್ದಿಗೆ ನಾಂದಿಹಾಡಿದಂತಾಗುತ್ತದೆ. ಹುತಾತ್ಮರಿಗೆ ಗೌರವ ಸೂಚಿಸುವ ಮೂಲಕ ಅವರ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಲು ಡಾ|| ಸಿ. ಕೃಷ್ಣಕುಮಾರ್ ಅವರು ಕರೆ ನೀಡಿದರು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಮತ್ತು ನಾಗರೀಕರ ಸುರಕ್ಷತೆಗಾಗಿ ಹಗಲಿರುಳು, ತಮ್ಮ ಪ್ರಾಣವನ್ನು ಲೆಕ್ಕಿಸದೇ ದುಡಿಯುತ್ತಿರುವ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ವೇಳೆಯಲ್ಲಿ ಹುತಾತ್ಮರಾದದ್ದನ್ನು ಸ್ಮರಿಸಿ ವರ್ಷಕ್ಕೊಮ್ಮೆ ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಿ, ಗೌರವ ಸಲ್ಲಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯವೆಂದರು.

ಪೊಲೀಸ್ ಉಪಾಧೀಕ್ಷಕರಾದ ಪುಟ್ಟಮಾದಯ್ಯ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದು, ಕಾನೂನು ಪಾಲನೆ ಹಾಗೂ ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆಯೆಂದರು. ಅದರಲ್ಲೂ ವಿದ್ಯಾರ್ಥಿಗಳು, ಯುವಜನರು ದೇಶಾದ್ಯಂತ ಹುತಾತ್ಮರಾದ ಸೈನಿಕರ, ಪೊಲೀಸರನ್ನು ಸ್ಮರಿಸುವ ಮೂಲಕ ದೇಶದ ಅಡಿಪಾಯಕ್ಕೆ ಬುನಾದಿಯಾಗಬೇಕೆಂದು ಡಿವೈಎಸ್ಪಿ ಪುಟ್ಟಮಾದಯ್ಯ ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ದೇಶಾಭಿಮಾನ, ಭಯೋತ್ಪಾದನೆ ಹಾಗೂ ಗಡಿ ವಿವಾದಗಳ ಕುರಿತು ನಡೆಸಿದ ಚರ್ಚಾ ಸ್ಪರ್ಧೆಯಲ್ಲಿ ಸಯ್ಯದ್, ಜಮೀಲ್‌ಪಾಷ, ಸಂದ್ಯಾ, ಹರೀಶ್‌ಕುಮಾರ್ ಭಾಗವಹಿಸಿದರು. ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಇಮ್ಯಾನುಯಲ್ ಮತ್ತು ರಾಜು ಅವರುಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ೨೦೦೩ರ ಮಾರ್ಚ್ ೨೩ರಂದು ಹುತಾತ್ಮರಾದ ಕೆಜಿಎಫ್‌ನ ಯೋಧ ಜಗದೀಶನ್ ರವರ ಪತ್ನಿ ಸಾವಿತ್ರಿ ಮತ್ತು ವರ ಮಗಳು ಕೀರ್ತನಾ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಾಬರ್ಟ್‌ಸನ್‌ಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಆರ್. ಜಗದೀಶ್, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹರೀಶ್, ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ವಿ.ವಿಶ್ವನಾಥ, ಎನ್.ಸಿ.ಸಿ. ಅಧಿಕಾರಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಮೊದಲಿಗೆ ಪೂರ್ಣಿಮಾ ಅವರಿಂದ ಪ್ರಾರ್ಥನೆ, ನಾರಾಯಣಸ್ವಾಮಿ  ಅವರಿಂದ ಸ್ವಾಗತ, ಜಗದೀಶ್ ಅವರಿಂದ ವರದಿ ವಾಚನ, ಶಾಲಿನಿ, ಗಾಯಿತ್ರಿ ಅವರಿಂದ ಗೀತೆ, ಶೋಭಾ ಅವರಿಂದ ನಿರೂಪಣೆ, ಸುಮಿತ್ರಾ ಅವರಿಂದ ವಂದನೆಗಳಾದವು.

ಚಿತ್ರಶೀರ್ಷಿಕೆ: ೨೨ಕೆಜಿಎಫ್೦೧: ಕೆಜಿಎಫ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ, ಡಾ|| ಕೃಷ್ಣಕುಮಾರ್, ಹುತಾತ್ಮರ ಕುಟುಂಬದವರು.

 

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s