ದಿನದ ಅಪರಾಧಗಳ ಪಕ್ಷಿನೋಟ 20ನೇ ಆಕ್ಟೋಬರ್‌ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:19.10.2016ರಂದು ಸಂಜೆ 05.00 ಗಂಟೆಯಿಂದ ದಿನಾಂಕ 20.10.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು :03

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 19.10.2016 ರಂದು ದೂರುದಾರರಾದ ಶ್ರೀಮತಿ. ಮಂಗಳಗೌರಿ, ಮುಖ್ಯೋಪಾಧ್ಯಾಯರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಚ್ಚಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ.  ದಿನಾಂಕ 10.10.2016 ರಂದು   ಸಂಜೆ  6.00 ಗಂಟೆ ಸಮಯದಲ್ಲಿ ಪಿಚ್ಚಹಳ್ಳಿ ಗ್ರಾಮದ  ಸರ್ಕಾರಿ  ಹಿರಿಯ   ಪ್ರಾಥಮಿಕ ಶಾಲೆಯ ಆವರಣದಲ್ಲಿ  ಲಾರಿಗಳು ತಂದು ನಿಲ್ಲಿಸಿ ಆಯುದ ಪೂಜೆ  ಮಾಡಿದ್ದು, ನಂತರ ಆರೋಪಿ ಚಾಲಕನಾದ ಸುರೇಶ್‌, ಪಿಚ್ಚಹಳ್ಳಿ ಗ್ರಾಮ ರವರು  ಕೆ.ಎ -07  ಎ-0779  ನ  ಲಾರಿಯನ್ನು ಅಜಾಗರುಕತೆಯಿಂದ ಹಿಂದಕ್ಕೆ ಚಲಾಯಿಸುವಾಗ ಸರ್ಕಾರಿ ಶಾಲಾ ಕೊಠಡಿಗೆ  ಡಿಕ್ಕಿ ಪಡಿಸಿದ  ಪರಿಣಾಮ  ಕೊಠಡಿಯ  ಗೋಡೆ ಜಖಂ ಆಗಿ  ಕೆಳಗೆ ಬಿದಿರುತ್ತದೆ ಮತ್ತು ಮೇಲ್ಚಾವಣಿ ಶಿಥಿಲಗೊಂಡಿರುತ್ತದೆ.  ಹಾನಿ  ಮಾಡಿದ ಸರ್ಕಾರಿ ಆಸ್ತಿಯ  ಮೌಲ್ಯ ಸುಮಾರು ರೂ 1,00,000/-ಗಳಾಗಬಹುದೆಂದು ದೂರು ನೀಡಿರುತ್ತಾರೆ.

ಬಂಗಾರಪೆಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 19.10.2016 ರಂದು ದೂರುದಾರರಾದ ಶ್ರೀ. ವೆಂಕಟೇಶ್‌ ಬಿನ್‌ ನಾರಾಯಣಸ್ವಾಮಿ, ಅಬ್ದುಲ್‌ ಗಾರ್ಡ್‌‌ನ್‌, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ:02.10.2016 ರಂದು ರಾತ್ರಿ 8-15 ಗಂಟೆಯಲ್ಲಿ ದೂರುದಾರರು ಆತನ ಹೆಂಡತಿ ಮಂಜುಳ, ಮಗಳು ಚೈತ್ರ ಮತ್ತು ಮೊಮ್ಮಗಳು ಪ್ರದೀಕ್ಷ ಇವರೆಲ್ಲರೂ ಕೋಲಾರದಿಂದ ಬಂಗಾರಪೇಟೆಗೆ ಬರಲು ಕೆ.ಆರ್.ಆರ್ ಖಾಸಗಿ ಬಸ್ ನಂ-ಕೆಎ-08 4239 ರಲ್ಲಿ ಕುಳಿತುಕೊಂಡು ಬರುತ್ತಿರುವಾಗ ಮಂಜುಳಾ ಮತ್ತು ಪ್ರದೀಕ್ಷ ರವರು ಬಸ್ಸಿನ ಮುಂಬಾಗಿಲಿನ ಬಳಿ ಇರುವ ಸೀಟಿನಲ್ಲಿ ಕುಳಿತುಕೊಂಡಿರುವಾಗ  ಬಸ್ ನ ಚಾಲಕ ಅತನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹುದುಕುಳ ಗೇಟ್ ಬಳಿ ರಸ್ತೆಯಲ್ಲಿರುವ ರೋಡ್ ಹಂಪ್ಸ್ ಮೇಲೆ ಚಲಾಯಿಸಿದ ಕಾರಣ ಮಂಜುಳ ಮತ್ತು ಪ್ರದೀಕ್ಷ ರವರು ಬಾಗಿಲಿನಿಂದ ಹೊರಗೆ ರಸ್ತೆಯ ಮೇಲೆ ಬಿದ್ದ ಕಾರಣ ಮಂಜುಳಾ ಮತ್ತು ಪ್ರದೀಕ್ಷ ರವರಿಗೆ ಮುಖಕ್ಕೆ, ಎಡ ಕೈಗೆ, ಮತ್ತು ಕಿವಿಗೆ ರಕ್ತ ಗಾಯಗಳಾಗಿರುತ್ತದೆ.

ಬಂಗಾರಪೆಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 19.10.2016 ರಂದು ದೂರುದಾರರಾದ ಶ್ರೀ. ಫಿಲ್ಪಿಸ್‌ ಬಿನ್‌ ಕುಮಾರ್‌ ಗೌತಮ ನಗರ , ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ:20.10.2016 ರಂದು ಬೆಳಗಿನ ಜಾವ 4-10 ಗಂಟೆಗೆ ದೂರುದಾರರು ಮತ್ತು ಆತನ ಸ್ನೇಹಿತ ಕೃಷ್ಣಕುಮಾರ್ ವಯಸ್ಸು 28 ವರ್ಷ ಇವರಿಬ್ಬರೂ ಕೆಜಿಎಫ್ ನಿಂದ ಬಂಗಾರಪೇಟೆಗೆ ಹೋಗಲು ಯಮಹಾ ಆರ್-15 ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಎಲ್-7358 ರಲ್ಲಿ ಬಂಗಾರಪೇಟೆ-ಕೆಜಿಎಫ್ ಮುಖ್ಯ ರಸ್ತೆಯ ಇಂದಿರಾನಗರದ ಬಸ್ ನಿಲ್ದಾಣದ ಸಮೀಪ ಹೋಗುತ್ತಿದ್ದಾಗ ಎದುರಿಗೆ ಬಂಗಾರಪೇಟೆ ಕಡೆಯಿಂದ ಲಾರಿ ಸಂಖ್ಯೆ ಕೆಎ-53-ಎ-4419 ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಯಲ್ಲಿ ತುಂಬಿದ್ದ ಒಂದು ಕಬ್ಬಿಣದ ಬೆಡ್ ಮತ್ತು ಅದಕ್ಕೆ ಲಗತ್ತಾಗಿರುವ ಎರಡು ಉಕ್ಕುಗಳನ್ನು ಲಾರಿಯಿಂದ ಸುಮಾರು ಎರಡೂವರೆ ಅಡಿಯಷ್ಟು ಹೊರಗೆ ನಿರ್ಲಕ್ಷತೆಯಿಂದ ಬಿಟ್ಟಿದ್ದು, ಆ ಕಬ್ಬಿಣದ ಉಕ್ಕು ದ್ವಿಚಕ್ರ ವಾಹನದ ಹಿಂಬಾಗ ಕುಳಿತಿದ್ದ ಕೃಷ್ಣ ಕುಮಾರ್ ರವರ ಬಲ ತಲೆಗೆ ಬಡಿದು ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಕೃಷ್ಣಕುಮಾರ್‌ 28 ವರ್ಷ, ಎಂಬುವರು ಮೃತ ಪಟ್ಟಿರುತ್ತಾರೆ.

-ಮೋಸ/ವಂಚನೆ ಪ್ರಕರಣಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:19.10.2016 ರಂದು ದೂರುದಾರರಾದ ಶ್ರೀ. ಪಾಂಡುರಂಗನ್‌ ಬಿನ್‌ ನಾರಾಯಣಸ್ವಾಮಿ, ಕೆನಡೀಸ್‌ ಲೈನ್, ಉರಿಗಾಂ ರವರು ನೀಡಿದ ದೂರಿನಲ್ಲಿ.  ಬಂಗಾರಪೇಟೆ ಕಸಬಾ ಹೋಬಳಿ ಸರ್ವೇ ನಂ-101 ರಲ್ಲಿ 7 ಎಕರೆ 2 ಗುಂಟೆ ಖಾತಾ ನಂ-168 ನ್ನು ದೂರುದಾರರು ಖರೀದಿಸಿದ್ದು, ದಿನಾಂಕ:27.03.1965 ರಂದು ನೊಂದಣಿ ಮಾಡಿಸಿಕೊಂಡು ಸ್ವಾಧೀನಾನುಭವದಲ್ಲಿರುತ್ತಾರೆ. ಆರೋಪಿ ಯಾಧವನ್‌ ರವರು ದೂರುದಾರರಿಗೆ ಸಹೋದರನಾಗಿದ್ದು, ಈ ಆಸ್ತಿಯ ವಿಚಾರದಲ್ಲಿ ಸಿಜೆ ಮತ್ತು ಜೆ ಎಂ ಎಫ್ ಸಿ ಸಿವಿಲ್ ನ್ಯಾಯಾಲಯದಲ್ಲಿ ಓ ಎಸ್ 182/2009 ರಂತೆ ಕೇಸು ಹಾಕಿರುತ್ತಾರೆ, ಈ ಆಸ್ತಿಯ ಬಗ್ಗೆ ಆರೋಪಿ ರವರು ದಿನಾಂಕ:04.10.1997 ರಂದು ಜಿಪಿಎ ಅನ್ನು ದೂರುದಾರರು ಮಾಡಿದ ರೀತಿಯಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿ ಆರೋಪಿ  ಬಾಬು ರವರಿಗೆ ಸೇಲ್ ಅಗ್ರಿಮೆಂಟನ್ನು ದಿನಾಂಕ:21.06.2016 ರಂದು ನೊಂದಣಿ ಮಾಡಿರುತ್ತಾರೆ, ಆರೋಪಿಗಳಾದ ಯಾದವನ್‌, ಬಾಬು, ನಾಗರಾಜ್‌, ಪಳನಿ ಎಂಬುವರು ದೂರುದಾರರ ಸಹಿಯನ್ನು ಪೋರ್ಜರಿ ಮಾಡಿ ಜಿಪಿಎ ಯನ್ನು ಮಾಡಿಕೊಂಡು ಮೋಸ ಮಾಡಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:19.10.2016 ರಂದು ದೂರುದಾರರಾದ ಶ್ರೀ.ಮುನಿರೆಡ್ಡಿ, ಬಿನ್‌ ಗಂಗಿರೆಡ್ಡಿ, ಸಕ್ಕನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ಸಕ್ಕನಹಳ್ಳಿ ಗ್ರಾಮದ ಜಮೀನು ಸರ್ವೇ ನಂ 65/1 ರಲ್ಲಿ 4.16 ಗುಂಟೆ ಜಮೀನು ದೂರುದಾರರ ತಾತನಾದ ಲೇಟ್ ನಾಗಿರೆಡ್ಡಿ ರವರ ಹೆಸರಿನಲ್ಲಿದ್ದು, ಇವರು ದಿನಾಂಕ:27.02.2001 ರಂದು ಮೃತಪಟ್ಟಿರುತ್ತಾನೆ. ಆರೋಪಿ ನೀಲಕಂಠರೆಡ್ಡಿ ರವರು ಮೃತಪಟ್ಟಿರುವ ತಾತನ ಹೆಸರನ್ನು ಬಳಸಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಬಂಗಾರಪೇಟೆಯ ಕೆನರಾ ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಂಡು ತಾನೇ ನಾಗಿರೆಡ್ಡಿ ಎಂದು ಸಹಿ ಮಾಡಿ ಸುಳ್ಳು ಹೇಳಿ ಸಾಲವನ್ನು ಪಡೆದುಕೊಂಡು ಬ್ಯಾಂಕಿಗೆ ಮೋಸ ಮಾಡಿರುತ್ತಾನೆ, ಈ ವಿಚಾರವಾಗಿ ದೂರುದಾ‌ರರು ಆರೋಪಿಯನ್ನು ಕೇಳಿದ್ದಕ್ಕೆ ಆರೋಪಿಯು ದೂರುದಾರರಿಗೆ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ;19.10.2016 ರಂದು ದೂರುದಾರರಾದ ಶ್ರೀ. ಆರ್. ನಾರಾಯಣ್ ಬಿನ್‌ ರಾಮಸ್ವಾಮಿ, ವಿವೇಕನಗರ ರಾಬರ್ಟ್ ಸನ್ ಪೇಟೆ ರವರು ನೀಡಿದ ದೂರಿನಲ್ಲಿ. ದೂರುದಾರರಿಗೂ ಮತ್ತು ಆರೋಪಿ ಪಿ. ವೆಂಕಟೇಶ್ ಬಿನ್ ಪಾಪಣ್ಣ ವಾಸ ಶ್ರೀರಾಮನಗರ ಉರಿಗಾಂಪೇಟೆ ರವರ ಮದ್ಯೆ ಹಣಕಾಸು ವ್ಯವಹಾರವಿದ್ದು, ಈ ವಿಚಾರದಲ್ಲಿ ದಿನಾಂಕ::08.08.2016 ರಂದು ರಾತ್ರಿ 07.00 ಗಂಟೆ ಸಮಯದಲ್ಲಿ ರಾಬರ್ಟ್ ಸನ್ ಪೇಟೆ ಎಂ.ಜಿ ಮಾರ್ಕೆಟ್ ಮುಂಬಾಗ ಹೋಗುತ್ತಿರುವಾಗ  ಆರೋಪಿ ವೆಂಕಟೇಶ್ ರವರು ದೂರುದಾರರ ಬಳಿ ಬಂದು ಜಗಳ ಕಾದು, ನಿನ್ನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ;19.10.2016 ರಂದು ದೂರುದಾರರಾದ ಶ್ರೀ.  ಶಂಕರ ಬಿನ್ ಲಕ್ಷ್ಮಣ್, ವಿಜಯ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ.  ದಿನಾಂಕ;19.10.2016 ರಂದು ಸಂಜೆ 4-30 ಗಂಟೆಗೆ ದೂರುದಾರರು ಮತ್ತು ಆತನ ಸ್ನೇಹಿತನಾದ ಶಶಿ ರವರೊಂದಿಗೆ ಜಮೀನಿನ ಬಳಿಗೆ ದ್ವಿಚಕ್ರ ವಾಹನದಲ್ಲಿ ಹೋಗಿ ಜಮೀನು ನೋಡಿಕೊಂಡು ವಾಪಸ್ ಬರುತ್ತಿರುವಾಗ ಆರೋಪಿಗಳಾದ  ರಾಮಲಿಂಗಮ್‌ ಮತ್ತು ಲಕ್ಷ್ಮಮ್ಮ ರವರು ದೂರುದಾರರ ದ್ವಿಚಕ್ರ ವಾಹನವನ್ನು ತಡೆದು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು ಇನ್ನೊಂದು ಸಾರಿ ಜಮೀನಿನ ಕಡೆ ಬಂದರೆ ಇಲ್ಲಿಯೇ ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿ ಕೈಗಳಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ.

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s