ದಿನದ ಅಪರಾಧಗಳ ಪಕ್ಷಿನೋಟ 17ನೇ ಆಕ್ಟೋಬರ್‌ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:16.10.2016ರಂದು ಸಂಜೆ 05.00 ಗಂಟೆಯಿಂದ ದಿನಾಂಕ 17.10.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ :01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:17.10.2016 ರಂದು ಬೆಳಗಿನ ಜಾವ 2.05ರಲ್ಲಿ ದೂರುದಾರರಾದ  ಕೆ.ವಿ. ಕುಮಾರಿ ಬಿನ್‌ ವೆಂಕಟಸ್ವಾಮಿ, ಕೋಟಿಲಿಂಗೇಶ್ವರ, ಕಮ್ಮಸಂದ್ರ ರವರು ನೀಡಿದ ದೂರಿನಲ್ಲಿ. ದಿನಾಂಕ: 16.10.2016 ರಂದು ರಾತ್ರಿ ದೂರುದಾರರಾದ  ಕೆ.ವಿ. ಕುಮಾರಿ ರವರು ಅವರ ಕಛೇರಿಯಲ್ಲಿ ರಾತ್ರಿ 08.45 ಗಂಟೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾದ ಅರ್ಚಕರಾದ ರಮೇಶರವರೊಂದಿಗೆ ದೇವಸ್ಥಾನದ ವ್ಯವಹಾರಗಳ ಬಗ್ಗೆ ಮಾತುಕತೆ ಮಾಡುತ್ತಿದ್ದ, ಆರೋಪಿ ಕಮ್ಮಸಂದ್ರ ಗ್ರಾಮದ ಸಂತೋಶ್ 25 ವರ್ಷ ರವರು ಏಕೇಕಿ ಕಛೇರಿಗೆ ಅಕ್ರಮ ಪ್ರವೇಶ ಮಾಡಿ ದೂರುದಾರರನ್ನು ಯಾವುದೋ ಉದ್ದೇಶದಿಂದ ಕೊಲೆ ಮಾಡಲು ಒಂದು ಹರಿತವಾದ ಲಾಂಗ್ ನಿಂದ ದೂರುದಾರರ ಕತ್ತಿನಮೇಲೆ ಎಡಕೈಮೇಲೆ, ಗಡ್ಡದ ಕೇಳಭಾಗದಲ್ಲಿ ಎರಡೂ ಕೈಗಳಿಗೆ ಹೊಡೆದು ತೀರ್ವವಾದ ರಕ್ತಗಾಯಗಳನ್ನು ಉಂಟು ಮಾಡಿರುತ್ತಾನೆ. ಸದರಿ ಕೃತ್ಯವು ಕೋಟಿಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿ ನಡೆದಿರುತ್ತೆ.

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು :01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:16.10.2016 ರಂದು ದೂರುದಾರರಾದ ಶ್ರೀ. ಮುರಳೀಧರ ಬಿನ್‌ ಕೃಷ್ಣಯ್ಯ, ಕರಡಗೂರು ಗ್ರಾಮ ರವರ ನೀಡಿದ ದೂರಿನಲ್ಲಿ. ದಿನಾಂಕ:15.10.2016 ರಂದು ಸಂಜೆ ಸುಮಾರು 07.00 ಗಂಟೆ ಸಮಯದಲ್ಲಿ ದೂರುದಾರರು ಆತನ ದ್ವಿ ಚಕ್ರ ವಾಹನ ಸಂಖ್ಯೆ KA-03 EG-941 ರಲ್ಲಿ ಸ್ನೇಹಿತ ಶಿವಣ್ಣ ಎಂಬುವರನ್ನು ಹಿಂದುಗಡೆ ಕುಳ್ಳರಿಸಿಕೊಂಡು ಕುಪ್ಪಂ ಕಡೆಯಿಂದ ರಾಜಪೇಟೆ ರೋಡ್ ಗೆ ಬರುವ ಮುಖ್ಯ ರಸ್ತೆಯಲ್ಲಿ ದ್ವಿ ಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದಾಗ. ವಿ.ಕೋಟೆ ಕಡೆಯಿಂದ ಬಂದಂತಹ ದ್ವಿ-ಚಕ್ರ ವಾಹನ ಸಂಖ್ಯೆ AP-03 AP-6936 ರಲ್ಲಿ  ಅದರ ಸವಾರನು ಅತಿ ವೇಗ ಮತ್ತು ಅಜಾಗರೂ ಕತೆಯಿಂದ ದ್ವಿ-ಚಕ್ರ ವಾಹನವನ್ನು ಚಲಾಯಿಸಿ ಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ, ದ್ವಿ ಚಕ್ರ  ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ದೂರುದಾರರಿಗೆ ಮತ್ತು ಹಿಂದೆ ಕುಳಿತ್ತಿದ್ದ ಶಿವಣ್ಣ ಎಂಬುವರಿಗೆ ರಕ್ತ ಗಾಯಗಳಾಗಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ : ಇಲ್ಲ

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s