ದಿನದ ಅಪರಾಧಗಳ ಪಕ್ಷಿನೋಟ 10ನೇ ಆಕ್ಟೋಬರ್‌2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:09.10.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 10.10.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:09.10.2016 ರಂದು ದೂರುದಾರರಾದ ಶ್ರೀಮತಿ. ರತ್ನಮ್ಮ @ ಗಿರಿಜ ಕೋಂ. ಕೃಷ್ಣಪ್ಪ, ವಿಜಯ ಬ್ಯಾಂಕ್‌ ಕಾಲೋನಿ, ಕೃಷ್ಣರಾಜಪುರಂ, ಬೆಂಗಳೂರು ರವರು ನೀಡಿದ ದೂರಿನಲ್ಲಿ. ದಿನಾಂಕ:09.10.2016 ರಂದು ದೂರುದಾರರಾದ ಶ್ರೀಮತಿ. ರತ್ನಮ್ಮ @ ಗಿರಿಜ ರವರ ತಾಯಿ ಶ್ರೀಮತಿ. ಆಧಿಲಕ್ಷ್ಮಮ್ಮ @ ಲಕ್ಮಮ್ಮ ರವರು ಬಂಗಾರಪೇಟೆ ತಾಲ್ಲೂಕು ಅನ್ನಸಾಗರ ಗ್ರಾಮದಲ್ಲಿ 32 ಗುಂಟೆ ಜಮೀನನ್ನು ಖರೀದಿಸಿರುತ್ತಾರೆ. ಶ್ರೀಮತಿ. ಆಧಿಲಕ್ಷ್ಮಮ್ಮ @ ಲಕ್ಮಮ್ಮ ರವರು ದಿನಾಂಕ: 03.10.2016 ರಂದು ಮೃತಪಟ್ಟಿದ್ದು, ಆಕೆಯ ಹೆಸರಿನಲ್ಲಿದ್ದ, ಜಮೀನನ್ನು ಅವರ ಸ್ವಂತದವರಾದ ಆರೋಪಿಗಳಾದ ಸರಳ, ರಾಮಕೃಷ್ಣ, ರಘುನಾಥರೆಡ್ಡಿ, ರಮಣಮ್ಮ ಎಂಬುವರುಗಳು ಸದರಿ ಜಮೀನಿನ ದಾಖಲಾತಿಗಳನ್ನು ಮತ್ತು ಶ್ರೀಮತಿ. ಅಧಿಲಕ್ಷ್ಮಮ್ಮರವರ ಹೆಬ್ಬೆಟಿನ ಸಹಿ ಮತ್ತು ಇತರೆ ದಾಖಲಾತಿಗಳನ್ನು ನಖಲಿ ಮಾಡಿ ಮೋಸ ಮಾಡಿರುತ್ತಾರೆ. ಆರೋಪಿಗಳ ವಿರುದ್ದ, ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ.

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ : ಇಲ್ಲ

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:09.10.2016 ರಂದು ದೂರುದಾರರಾದ ಶ್ರೀ. ನಾಗರಾಜಪ್ಪ ಬಂಗಾರಪೇಟೆ ಪೊಲೀಸ್ ಠಾಣೆರವರು ಬಂಗಾರಪೇಟೆ ”ಸಿ ” ರಹೀಂ ಕಾಂಪೌಂಡ್ ಕಡೆ ಗಸ್ತಿನಲ್ಲಿದ್ದಾಗ ದೂರುದಾರರಿಗೆ ಬಂದ ಮಾಹಿತಿ ಮೇರೆಗೆ  ಸ್ಥಳಕ್ಕೆ ಭೇಟಿ ನೀಡಿ ನೋಡಲಾಗಿ  ಸುಮಾರು 45-50 ವರ್ಷ ವಯಸ್ಸಿನ ವ್ಯಕ್ತಿ ಬೋರಲಾಗಿ ಬಿದ್ದು ಸತ್ತು ಹೋಗಿರುತ್ತಾರೆ. ಸದರಿ ವ್ಯಕ್ತಿ ಯಾರೆಂಬುದು ಗುರುತಿಸಲು ಆಗುತ್ತಿಲ್ಲ. ಮೃತನ ಬಳಿ ಒಂದು ಜೊತೆ ಚಪ್ಪಲಿಗಳು, ಒಂದು ಖಾಲಿ ವಾಟರ್ ಬಾಟಲ್ ಮತ್ತು ಒಂದು ವಿಷದ ಬಾಟಲ್ ಕಂಡು ಬಂದಿರುತ್ತೆ. ಸದರಿ ವ್ಯಕ್ತಿಯೂ ಮದ್ಯದಲ್ಲಿ ವಿಷವನ್ನು ಬೆರೆಸಿ ಸೇವನೆ ಮಾಡಿ ಆತ್ಮ ಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾರೆಂದು ತಿಳಿದು ಬಂದಿರುತ್ತದೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s