ದಿನದ ಅಪರಾಧಗಳ ಪಕ್ಷಿನೋಟ 05 ನೇ ಆಕ್ಟೋಬರ್‌201‍6

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:04.10.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 05.10.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ : ಇಲ್ಲ

-ಕೊಲೆಗೆ  ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಸಾಧಾರಣ ಕಳ್ಳತನ : ಇಲ್ಲ

-ವಾಹನ ಕಳ್ಳತನ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಮೋಸ/ವಂಚನೆ ಪ್ರಕರಣಗಳು :01

      ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.ದಿನಾಂಕ:04.10.2016 ರಂದು ದೂರುದಾರರಾದ ಶ್ರೀ. ಲೂಯಿಸ್‌ಪಾಲ್‌ಕರ್ನ್‌, ಬಿನ್‌. ತವಮಣಿ, ಹೆಚ್‌.ಪಿ ನಗರ ಬೆಮೆಲ್‌ ರವರು ನೀಡಿದ ದೂರಿನಲ್ಲಿ. ದಿನಾಂಕ:23.03.2012 ರಲ್ಲಿ ದೂರುದಾರರಾದ ಲೂಯಿಸ್ ಪಾಲ್ ಕರ್ನ್‌, ಹೆಚ್‌.ಪಿ ನಗರ ಬೆಮಲ್ ನಗರ ರವರಿಗೆ ಸಂಬಂದಿಸಿದ ಬಂಗಾರಪೇಟೆಯಲ್ಲಿರುವ ಖಾತೆ ನಂಬರ್ 1988/4687/4600 ರಲ್ಲಿ  55*50 ಅಡಿಗಳ ಸುತ್ತಳತೆ ಸ್ವತ್ತಿನಲ್ಲಿ 2011ನೇ ಸಾಲಿನಲ್ಲಿ ಸೈಕಲ್ ಸ್ಟ್ಯಾಂಡ್ ನಿರ್ಮಿಸಿರುತ್ತಾರೆ, ಸದರಿ ಸೈಕಲ್ ಸ್ಟ್ಯಾಂಡ್ ನ್ನು ದಿನಾಂಕ:23.03.2012 ರಲ್ಲಿ ಬಾಡಿಗೆಗೆ ಆರೋಪಿ ವೆಂಕಟಾಚಲಪತಿ ನಾಯ್ಡು ಬಂಗಾರಪೇಟೆ ವಾಸಿ ರವರಿಗೆ 11 ತಿಂಗಳ ಅಗ್ರಿಮೆಂಟ್ ಹಾಕಿ ತಿಂಗಳಿಗೆ 5,000/-ರೂಗಳ ಬಾಡಿಗೆಯನ್ನು ಮಾತನಾಡಿ 95,000/-ರೂಗಳ ಅಡ್ವಾನ್ಸ್ ಪಡೆದುಕೊಂಡು ಸ್ವಾಧೀನ ಬಿಟ್ಟು ಕೊಟ್ಟಿರುತ್ತೆ. 11 ತಿಂಗಳ ಅವಧಿಗೆ ಅಗ್ರಿಮೆಂಟ್ ಮುಗಿದಿದ್ದು, ಬಾಡಿಗೆ ಕೊಡದೇ ಇದ್ದು,  ಜಾಗವನ್ನು ಖಾಲಿ ಮಾಡುವಂತೆ ದೂರುದಾರರು  ಆರೋಪಿ ವೆಂಕಟಾಚಲಪತಿ ನಾಯ್ಡು ರವರನ್ನು  ಕೇಳಿದಾಗ, ಆರೋಪಿ ರೌಡಿ ಆಸಾಮಿಗಳನ್ನು ಬಿಟ್ಟು ಗಲಾಟೆ ಮಾಡಿರುತ್ತಾರೆ. ನಂತರ ವೆಂಕಟಾಚಲಪತಿ ನಾಯ್ಡು, ಮುನಿಸ್ವಾಮಿ ರೆಡ್ಡಿ, ಸುಬ್ರಮಣಿ, ವೆಂಕಟೇಶ್ ರವರುಗಳು ಸೇರಿಕೊಂಡು ಉದ್ದೇಶ ಪೂರ್ವಕವಾಗಿ ದೂರುದಾರರ ಸ್ವತ್ತನ್ನು 35,00,000/-ರೂಗಳಿಗೆ ಆರೋಪಿ ವೆಂಕಟಾಚಲಪತಿ ನಾಯ್ಡು ರವರಿಗೆ ವ್ಯಾಪಾರ ಮಾಡಿರುವಂತೆ 25,00,000/-ರೂಗಳನ್ನು ಪಡೆದುಕೊಂಡು ಉಳಿಕೆ 10,00,000/-ರೂಗಳನ್ನು ರಿಜಿಸ್ಟರ್ ಸಮಯದಲ್ಲಿ ಕೊಡುವಂತೆ 03 ವರ್ಷಗಳ ಕಾಲಾವಕಾಶ ವಿರುವಂತೆ ದಿನಾಂಕ:06.07.2012 ರಲ್ಲಿ ಸುಳ್ಳು ಸೇಲ್ ಅಗ್ರಿಮೆಂಟ್ ನ್ನು ಸೃಷ್ಠಿ ಮಾಡಿ ದೂರುದಾರರ ಸಹಿಯನ್ನು ನಕಲಿ ಮಾಡಿ ಮೋಸ, ಮಾಡಿ ದಾಖಲೆಗಳನ್ನು ಸೃಷ್ಟಿ ಮಾಡಿರುತ್ತಾರೆ.

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಹಲ್ಲೆ :01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:04.10.2016ರಂದು ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್‌ ಬೋಡೆಪ್ಪ, ನಾಗಶೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರಾದ ಶ್ರೀ. ನಾರಾಯಣಪ್ಪ ರವರು ಅವರ ಹೊಲವನ್ನು ನೋಡಿಕೊಂಡು ಬರಲು ಹೋಗುತ್ತಿದ್ದಾಗ  ಆರೋಪಿ ಶಂಕರ್‌ ಎಂಬುವರು ದೂರುದಾರರ ಬಳಿ ಬಂದು ನೀನು ಏಕೆ ನಮ್ಮ ಜಮೀನಿನಲ್ಲಿ ಹೋಗುತ್ತಿದ್ದೀಯಾ ಎಂತ ಏಕಾಏಕಿ ಜಗಳ ಮಾಡಿ ನಿಲಗಿರಿ ದೊಣ್ಣೆಯನ್ನು ಹಿಡಿದುಕೊಂಡು ಬಂದು ದೊಣ್ಣೆಯಿಂದ ದೂರುದಾರರಿಗೆ ಹೊಡೆದು ರಕ್ತ ಗಾಯಪಡಿಸಿ, ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ.

 -ಇತರೆ : ಇಲ್ಲ

-ಅಕ್ರಮ ಮದ್ಯ ಮಾರಾಟ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s