ಪತ್ರಿಕಾ ಪ್ರಕಟಣೆ

                                                          ಪತ್ರಿಕಾ ಪ್ರಕಟಣೆ
ಕೆ.ಜಿ.ಎಫ್ : ಅಂತರರಾಜ್ಯ ಗಡಿ ಪೊಲೀಸ್ ಅಧಿಕಾರಿಗಳ ಅಪರಾಧ ಸಭೆ

ಕೆಜಿಎಫ್ ಮತ್ತು ಕೋಲಾರ ಪೊಲೀಸ್ ಜಿಲ್ಲೆಗಳ ಸಂಯುಕ್ತಾಶ್ರಯದಲ್ಲಿ ಅಂತರರಾಜ್ಯ ಗಡಿ ಪೊಲೀಸ್ ಅಧಿಕಾರಿಗಳ ಅಪರಾಧ ವಿಮರ್ಶಾ ಸಭೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ದಿವ್ಯಾ ವಿ ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ ಬೆಮೆಲ್ ಅತಿಥಿಗೃಹದ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿತ್ತು.

ಮಂಗಳವಾರದಂದು ಒಂದು ದಿನದ ಕಾಲ ನಡೆದ ಅಪರಾಧ ವಿಮರ್ಶಾ ಸಭೆಯಲ್ಲಿ ತಮಿಳುನಾಡು, ಆಂದ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯದ ಗಡಿ ಭಾಗದ ಪೊಲೀಸ್ ಅಧಿಕಾರಿಗಳು ಭಾಗವಹಿಸಿ, ಅಪರಾಧಗಳ ವಿಮರ್ಶೆ ನಡೆಸಿದರು. ಕೃಷ್ಣಗಿರಿ ಎ.ಎಸ್.ಪಿ. ಡಾ|| ರೋಹಿತ್‌ಕುಮಾರ್, ಮದನಪಲ್ಲಿ ಡಿವೈಎಸ್ಪಿ ರಾಜೇಂದ್ರಪ್ರಸಾದ್, ಪಲಮನೇರು ಡಿವೈಎಸ್ಪಿ ಶಂಕರ್, ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ, ಎಸ್ಪಿ ಡಾ|| ದಿವ್ಯಾ ವಿ ಗೋಪಿನಾಥ್ ಅವರು ಮಾತನಾಡಿ, ಅಪರಾಧಗಳನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ ಅಪರಾಧ ಮತ್ತು ಅಪಘಾತಗಳನ್ನು ತಡೆಗಟ್ಟಲು ನೆರೆಯ ಗಡಿ ಪೊಲೀಸ್ ಅಧಿಕಾರಿಗಳ ಸಹಕಾರ ಅತ್ಯವಶ್ಯಕವಾಗಿದೆಯೆಂದರು. ಕಾಣೆಯಾದ ಮಹಿಳಾ ಮತ್ತು ಮಕ್ಕಳ ಪ್ರಕರಣಗಳು, ಅಪರಿಚಿತ ದುರ್ಮರಣ ಪ್ರಕರಣಗಳು, ಅಂತರರಾಜ್ಯ ಕೊಲೆ ಪ್ರಕರಣಗಳು, ಕಳವು, ದರೋಡೆ, ಸುಲಿಗೆ ಮೊದಲಾದ ಅಪರಾಧ ಪ್ರಕರಣಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ವೇದಿಕೆಯಲ್ಲಿ ಕೋಲಾರ ಹೆಚ್ಚುವರಿ ರಕ್ಷಣಾಧಿಕಾರಿ ಎಂ.ರಾಜೀವ್, ಕೋಲಾರ ಡಿವೈಎಸ್ಪಿ ಅಬ್ದುಲ್‌ಸತ್ತಾರ್, ಮುಳಬಾಗಲು ಡಿವೈಎಸ್ಪಿ ಪ್ರಭಾಕರ ಬಯ್ಯಾರಿ, ಕೆಜಿಎಫ್ ಡಿವೈಎಸ್ಪಿ ಪುಟ್ಟಮಾದಯ್ಯ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಮಿಳುನಾಡು, ಆಂದ್ರಪ್ರದೇಶ ರಾಜ್ಯದ ಕರ್ನಾಟಕ ಗಡಿಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೆಜಿಎಫ್ ಪೊಲೀಸ್ ಜಿಲ್ಲೆಗಳ ಅಧಿಕಾರಿಗಳು, ಅಪರಾಧ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ದೀರ್ಘ ಕಾಲದಿಂದ ಬಾಕಿ ಇದ್ದ ಪ್ರಕರಣಗಳಲ್ಲಿನ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಸಹಕರಿಸಿದ ಅಧಿಕಾರಿಗಳು, ಸಿಬ್ಬಂದಿಗಳನ್ನು, ಕೊಲೆ ಪ್ರಕರಣ ಹಾಗೂ ಸ್ವತ್ತಿನ ಕಳವು ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿಗಳಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.

ಮೊದಲಿಗೆ ಮುಖ್ಯಪೇದೆ ಎಲ್.ರಘು ಅವರಿಂದ ಪ್ರಾರ್ಥನೆ, ಡಿವೈಎಸ್ಪಿ ಪುಟ್ಟಮಾದಯ್ಯ ಅವರಿಂದ ಸ್ವಾಗತ, ಡಿವೈಎಸ್ಪಿ ಅಬ್ದುಲ್ ಸತ್ತಾರ್ ಅವರಿಂದ ಪ್ರಾಸ್ತಾವಿಕ ಭಾಷಣ, ಸೈಯ್ಯದ್ ಮುಸ್ತಾಕ್‌ಅಹ್ಮದ್ ಅವರಿಂದ ನಿರೂಪಣೆ, ಡಿವೈಎಸ್ಪಿ ಪ್ರಭಾಕರ ಬಯ್ಯಾರಿ ಅವರಿಂದ ವಂದನೆಗಳಾದವು.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s