ಪತ್ರಿಕಾ ಪ್ರಕಟಣೆ

 ಪತ್ರಿಕಾ ಪ್ರಕಟಣೆ

ಕೆ.ಜಿ.ಎಫ್ : ಕಾಣೆಯಾಗಿರುವ ಮಕ್ಕಳ ಸಂರಕ್ಷಣೆಯ ಕುರಿತು ಒಂದು ದಿನ ವಿಶೇಷ ಕಾರ್ಯಾಗಾರ

          ಕೆಜಿಎಫ್ ಪೊಲೀಸ್ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗಳಿಗೆ ಕಾಣೆಯಾಗಿರುವ ಮಕ್ಕಳ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಗುರುವಾರದಂದು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಪೊಲೀಸ್ ಪ್ರಧಾನ ಕಛೇರಿಯ ಲಿಂಗಸಂವೇದನಾ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ರೊವಿನಾ ಅವರು ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

         ಮಕ್ಕಳ ಕಳ್ಳಸಾಗಾಣಿಕೆ, ಕಾಣೆಯಾಗುವ ಮಕ್ಕಳ ಸಂರಕ್ಷಣೆ ಸಂಬಂಧ ಕ್ಷೀಪ್ರವಾಗಿ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಮಕ್ಕಳನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಸಂಬಂಧಪಟ್ಟ ಪೋಷಕರಿಗೆ ಒಪ್ಪಿಸಲು ಸಾಧ್ಯವಾಗುವುದೆಂದರು. ಮಕ್ಕಳ ಕಳ್ಳಸಾಗಾಣಿಕೆ, ಕಾಣೆಯಾದ ಮಕ್ಕಳ ಸಂರಕ್ಷಣೆ ಸಂಬಂಧ ಪೋಷಕರು, ಸಾರ್ವಜನಿಕರ ಸಹಕಾರದಿಂದಲೇ ಸಾಧ್ಯ, ಮಕ್ಕಳ ರಕ್ಷಣೆಗಾಗಿ, ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅತ್ಯವಶ್ಯಕವಾಗಿದೆಯೆಂದರು. ಮಕ್ಕಳ ರಕ್ಷಣೆಗೆ ಇಲ್ಲಿನ ಪೊಲೀಸ್ ಅಧಿಕಾರಿಗಳು ಪತ್ತೆ ಕಾರ್ಯಾಚರಣೆಯನ್ನು ಕ್ಷಿಪ್ರವಾಗಿ ನಡೆಸುವುದರ ಬಗ್ಗೆ ಅಗತ್ಯ ಕ್ರಮವಿಡುವಂತೆ ಪೊಲೀಸ್ ಪ್ರಧಾನ ಕಛೇರಿಯ ಲಿಂಗಸಂವೇದನಾ ಕಾರ್ಯನಿರ್ವಾಹಕ ವ್ಯವಸ್ಥಾಪಕರಾದ ರೊವಿನಾ ಅವರು ತಿಳಿಸಿದರು.

           ಕಾರ್ಯಕ್ರಮಕ್ಕೆ ಪೊಲೀಸ್ ಉಪಾಧೀಕ್ಷಕರಾದ ಪುಟ್ಟಮಾದಯ್ಯ ಅವರು ಅಧ್ಯಕ್ಷತೆ ವಹಿಸಿದ್ದು, ಕೆಜಿಎಫ್‌ನ ಬಾಲಮಂದಿರ ಅಧೀಕ್ಷಕ ಬಿ.ಎಸ್. ಅಫಿದಾ, ಮಕ್ಕಳ ಕಲ್ಯಾಣಾ ಸಮಿತಿಯ ಅಧ್ಯಕ್ಷರು, ವಕೀಲರಾದ ಕಲೈಸೆಲ್ವಿ, ಮಹಿಳಾ ಮತ್ತು ಮಕ್ಕಳ ಹಕ್ಕು ಸಂರಕ್ಷಣಾಧಿಕಾರಿ ನಿಕೋಲಾಸ್, ಸರಸ್ವತಮ್ಮ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾತನಾಡಿದರು.

           ಡಿವೈಎಸ್ಪಿ ಪುಟ್ಟಮಾದಯ್ಯ ಅವರು ಮಾತನಾಡಿ, ಮಕ್ಕಳ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲಾ ಪೊಲೀಸ್ ಅಧಿಕಾರಿಗಳು ತಂತಮ್ಮ ಸರಹದ್ದಿನ ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.

          ಕಾರ್ಯಕ್ರಮದಲ್ಲಿ ಡಿ.ಸಿ.ಬಿ. ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಎಂ ಶಿವಕುಮಾರ್, ಜಿಲ್ಲಾ ಗುಪ್ತ ಶಾಖೆಯ ಇನ್ಸ್‌ಪೆಕ್ಟರ್ ಎಂ.ಡಿ. ಲಕ್ಷ್ಮೀನಾರಾಯಣ, ಸೇರಿದಂತೆ ಜಿಲ್ಲೆಯ ಎಲ್ಲಾ ಪಿ.ಎಸ್.ಐ.ಗಳು, ಅಧಿಕಾರಿ, ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಪೋಷಣಾ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

          ಜಿಲ್ಲಾ ಪೊಲೀಸ್ ಕಛೇರಿಯ ಎಎಸ್‌ಐ ಬಿ.ಪಿ.ಮುರಳೀಧರ, ಎನ್.ಜಿ.ಚೌಡಪ್ಪ, ಡಿ.ಸಿ.ಆರ್.ಬಿ. ಸಿಬ್ಬಂದಿಗಳಾದ ಎನ್.ಆನಂದ, ಇಕ್ಬಾಲ್‌ಸುಲ್ತಾನಅಜ್ಮಿ ಮತ್ತಿತರರು ಹಾಜರಿದ್ದರು.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s