ದಿನದ ಅಪರಾಧಗಳ ಪಕ್ಷಿನೋಟ 29ನೇ ಸೆಪ್ಟೆಂಬರ್‍ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:2‍8.09.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 29.09.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಕೊಲೆಗೆ  ಪ್ರಯತ್ನ:ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆ ಕಳ್ಳತನ:ಇಲ್ಲ

-ಸಾಧಾರಣ ಕಳ್ಳತನ: ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

– ದೊಂಬಿ: ಇಲ್ಲ

– ಜೂಜಾಟ ಕಾಯ್ದೆ:ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: 02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ಪೂಂಗೋಡಿ ಕೋಂ ಲೇಟ್ ತಿರುಕುಮಾರ್‍, ಮಾದವ ರಸ್ತೆ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ಮತ್ತು ಆರೋಪಿ ವೆಂಕಟೇಶ್, ೬ನೇ ಅಡ್ಡರಸ್ತೆ, ಗೀತಾ ರಸ್ತೆ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ರಿಯಾಲ್ ಎಸ್ಟೆಟ್ ವ್ಯವಹಾರ ಮಾಡುತ್ತಿದ್ದು, ಈಗ್ಗೆ 2 ತಿಂಗಳ ಹಿಂದೆ ಬೆಂಗಳೂರಿನಲ್ಲಿ  ನಿವೇಶವನ್ನು ಅಗ್ರಿಮೆಂಟ್ ಮಾಡಿಕೊಳ್ಳಲು ದೂರುದಾರರು ಆರೋಪಿಗೆ 24 ಲಕ್ಷ ರೂ ಹಣವನ್ನು ನೀಡಿದ್ದು, ಆದರೆ ಆರೋಪಿ ವೆಂಕಟೇಶ್ ಅಗ್ರಿಮೆಂಟ್ ಮಾಡಿಕೊಂಡು ಬರದೆಯೇ ಹಾಗೂ ಹಣವನ್ನು ವಾಪಸ್ಸು ಕೊಡದೇ ಇದ್ದು,   ದಿನಾಂಕ 28.09.2016 ರಂದು ಬೆಳಗ್ಗೆ 08.00 ಗಂಟೆಗೆ ದೂರುದಾರರು ಅವರ ಮಾವ ಮತ್ತು ವೆಂಕಟರಾಮರೆಡ್ಡಿ ರವರೊಂದಿಗೆ ಆರೋಪಿ ಮನೆ ಬಳಿ ಹೋಗಿ, ಹಣವನ್ನು ವಾಪಸ್ಸು ಕೇಳಲಾಗಿ ಆರೋಪಿ ಹಣವನ್ನು ಕೋಡುವುದಿಲ್ಲ ಎಂದು ಹೇಳಿ ದೂರುದಾರರನ್ನು ಕೈಗಳಿಂದ ಹೊಡೆದು ಅವಮಾನ ಪಡಿಸಿ, ದೂರುದಾರರ ಎಡಗೈ ಉಂಗುರ ಬೆರಳು ಮತ್ತು ಬಲಗೈ ತೋರು ಬೆರಳಿಗೆ ಕಚ್ಚಿ ಗಾಯಪಡಿಸಿರುತ್ತಾನೆ. ಆರೋಪಿ ನಾಗರಾಜ್ ರವರು ವೆಂಕಟೇಶ್ ರವರಿಗೆ  ಹಣವನ್ನು ವಾಪಸ್ಸು ನೀಡದಂತೆ ಕುಮ್ಮಕ್ಕು ನೀಡಿರುತ್ತಾರೆ.

ದೂರುದಾರರಾದ  ಶ್ರೀಮತಿ ಮುನಿಯಮ್ಮ, ಪಾರಾಂಡಹಳ್ಳಿ, ಕೆ.ಜಿ.ಎಫ್ ರವರು ದಿನಾಂಕ: 28.09.2016 ರಂದು ಸಂಜೆ 6.30 ಗಂಟೆಯ ಸಮಯದಲ್ಲಿ ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ,  ಆರೋಪಿ ಸುರೇಶ್,  ಪಾರಾಂಡಹಳ್ಳಿ, ಕೆ.ಜಿ.ಎಫ್ ರವರು ಅಲ್ಲಿಗೆ ಬಂದು ಮಲಗಿಕೊಂಡಿದ್ದು, ದೂರುದಾರರು ಆರೋಪಿ ಸುರೇಶ್ ರವರಿಗೆ  “ನೀನು ಅಂಗಡಿಯ ಬಳಿಯಿಂದ ಎದ್ದು ಮನೆಗೆಹೋಗು” ಎಂದು ಹೇಳಿದಾಗ, ಆರೋಪಿಯು ದೂರುದಾರರೊಂದಿಗೆ  ಜಗಳ ಕಾದು, ಕೆಟ್ಟಮಾತುಗಳಿಂದ ಬೈದು, ದೂರುದಾರರ  ತಲೆಯ ಕೂದಲನ್ನು ಎಳೆದು, ಕೈಗಳಿಂದ ಹೊಡೆದು  ಅವಮಾನಪಡಿಸಿರುತ್ತಾನೆ ಹಾಗೂ ದೂರುದಾರರ ಮಕ್ಕಳಾದ ರೂಪಾ ಮತ್ತು ಗಂಗಾಧರ್ ರವರನ್ನು ಸಹ ಹೊಡೆದಿರುತ್ತಾನೆ.

-ಹಲ್ಲೆ: ಇಲ್ಲ

-ಇತರೆ :ಇಲ್ಲ

-ಅಕ್ರಮ ಮದ್ಯ ಮಾರಾಟ:-ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s