ದಿನದ ಅಪರಾಧಗಳ ಪಕ್ಷಿನೋಟ 25ನೇ ಸೆಪ್ಟೆಂಬರ್‌2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 24.09.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 25.09.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಕೊಲೆಗೆ  ಪ್ರಯತ್ನ: 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಯತ್ನ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 24.09.2016 ರಂದು ದೂರುದಾರರಾದ ಶ್ರೀ. ಸುನೀಲ್‌ ಬಿನ್‌ ಅಮರನಾರಾಯಣ, ಮಿನಿ ಇಬ್ರಾಹಿಂ ರಸ್ತೆ, ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ:23.09.2016 ರಂದು ರಾತ್ರಿ ಸುಮಾರು 10.00 ಗಂಟೆ ಸಮಯದಲ್ಲಿ ರಾಬರ್ಟ್ಸ್ ಸನ್ ಪೇಟೆ ಮಿನಿ ಇಬ್ರಾಹಿಂ ರಸ್ತೆಯಲ್ಲಿ ಅಮರ್ ಹೇರ್ ಪ್ಯಾಷನ್‌ ಅಂಗಡಿಯ ಬಾಗಿಲಿಗೆ ಬೀಗವನ್ನು ದೂರುದಾರರು ಹಾಕುತ್ತಿರುವಾಗ ಆರೋಪಿಗಳಾದ ಶಿವ, ಪಾರ್ಥಿಭನ್, ಅರವಿಂದ್‌ ಎಂಬುವುರ ಅಂಗಡಿಯ ಬಳಿ ಬಂದು ಹೇರ್ ಕಟ್ ಮಾಡುವಂತೆ ಕೇಳಿದರು. ದೂರುದಾರರು ಅಂಗಡಿ ಮುಚ್ಚುತ್ತಿದ್ದೇನೆ, ಬೆಳಿಗ್ಗೆ ಬಾ ಎಂದು ಹೇಳಿದಕ್ಕೆ ಈಗಲೇ ಬಾಗಿಲನ್ನು ತೆಗೆದು ಹೇರ್ ಕಟ್ ಮಾಡು ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿ ಕೊಲೆ ಮಾಡುವ  ಉದ್ದೇಶದಿಂದ  ಆರೋಪಿಗಳು ಕತ್ತಿಯಿಂದ ದೂರುದಾರರ ಹೊಟ್ಟೆಯ ಮೇಲೆ ತಿವಿಯಲು ಬಂದಾಗ ದೂರುದಾರರ ಕೈಗಳನ್ನು ಅಡ್ಡ ಇಟ್ಟು ತಡೆಯಲು ಪ್ರಯತ್ನಿಸಿ ಕತ್ತಿಯನ್ನು ಹಿಡಿದುಕೊಂಡಾಗ ಕೈಬೆರಳುಗಳಿಗೆ ರಕ್ತಗಾಯ ಪಡಿಸಿ ಸ್ಥಳದಿಂದ ಓಡಿ ಹೋಗಿರುತ್ತಾರೆ.

-ಡಕಾಯತಿ: 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಡಕಾಯತಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 24.09.2016 ರಂದು ದೂರುದಾರರಾದ ಶ್ರೀ. ರಾಮಕೃಷ್ಣಪ್ಪ, ಬಿನ್‌ ವೆಂಕಟಸ್ವಾಮಿಗೌಡ, ಅಕ್ಕಮ್ಮನದಿನ್ನೆ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ. 24.09.2016 ರಂದು ರಾತ್ರಿ 12-30 ಗಂಟೆ ಸಮಯದಲ್ಲಿ ಅಕ್ಕಮ್ಮನದಿನ್ನೆ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ಮನೆ ಕಟ್ಟಿಕೊಂಡಿರುವ ರಾಮಕೃಷ್ಣಪ್ಪ ಮತ್ತು ಅವರ ಬಾವಮೈದ ಚಂದ್ರಪ್ಪ ರವರ ಮನೆಗಳಿಗೆ 10 ಜನ ಅಪರಿಚಿತ ಡಕಾಯತಿಕೋರರು ಕೈಗಳಲ್ಲಿ ಲಾಂಗ್ ಕತ್ತಿಗಳು, ಚೂರಿಗಳು, ಕಬ್ಬಿಣದ ರಾಡುಗಳು ಹಿಡಿದುಕೊಂಡು ಬಂದು ರಾಮಕೃಷ್ಣಪ್ಪ ರವರ ಮನೆಗೆ ನುಗ್ಗಿ ರಾಮಕೃಷ್ಣಪ್ಪನನ್ನು ಹೊಡೆದು, ಆತನ ಹೆಂಡತಿ ಮತ್ತು ಸೊಸೆಯನ್ನು ಹೊಡೆದು ಸಾಯಿಸುವುದಾಗಿ ಬೆದರಿಕೆ ಹಾಕಿ ಬೀಗದ ಕೈ ಕಿತ್ತುಕೊಂಡು ಅವರನ್ನು ಮನೆಯಲ್ಲಿ ಕೈ ಮತ್ತು ಕಾಲುಗಳನ್ನು ಕಟ್ಟಿ, ಕೂಡಿಹಾಕಿ ರಾಮಕೃಷ್ಣಪ, ಆತನ ಪತ್ನಿ ಪ್ರಮೀಳಮ್ಮ, ಸೊಸೆ ಶ್ವೇತ ರವರ  ಮೈಮೇಲಿದ್ದ ಚಿನ್ನಾಭರಣಗಳನ್ನು ಮತ್ತು ಬೀರುವಿನಲ್ಲಿದ್ದ ಚಿನ್ನಾಭರಣಗಳ ಒಟ್ಟು 490 ಗ್ರಾಂ ಹಾಗೂ  ರೂ 5,00,000/-ಗಳ ನಗದು ಹಣ ಸೇರಿ ಎಲ್ಲಾ ಒಟ್ಟು ಸುಮಾರು ರೂ 20,00,000/-ಗಳ  ಹಣ ಮತ್ತು ವಡವೆಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ. ಆರೋಪಿಗಳೆಲ್ಲರೂ 20 ರಿಂದ 25 ವರ್ಷ ವಯಸ್ಸಿನವರಾಗಿದ್ದು, ಅವರ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು, ಕನ್ನಡ ಮತ್ತು ಹಿಂದಿ ಮಾತನಾಡಿಕೊಂಡು ಓಡಿಹೋಗಿರುತ್ತಾರೆ.

-ಸುಲಿಗೆ: ಇಲ್ಲ

-ಮನೆ ಕಳ್ಳತನ: ಇಲ್ಲ

-ಸಾಧಾರಣ ಕಳ್ಳತನ: ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

– ದೊಂಬಿ: ಇಲ್ಲ

ಜೂಜಾಟ ಕಾಯ್ದೆ:ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ :ಇಲ್ಲ

-ಅಕ್ರಮ ಮದ್ಯ ಮಾರಾಟ:-

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:24.09.2016 ರಂದು ದೂರುದಾರರಾದ ಶ್ರೀ. ಆನಂದಬಾಬು, ಎ.ಎಸ್‌.ಐ, ಆಂಡ್ರಸನ್‌ಪೇಟೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ತೂಕಲ್ ಗ್ರಾಮಕ್ಕೆ ಬೇಟಿ ನೀಡಿ  ರಾಮಮೂರ್ತಿರವರ ಚಿಲ್ಲರೆ ಅಂಗಡಿಯಲ್ಲಿ ದಾಳಿ ಮಾಡಿದಾಗ, ಅಂಗಡಿಯ ಒಂದು ಮೂಲೆಯಲ್ಲಿ ಒಂದು ನೀಲಿ ಬಣ್ಣದ ಬ್ಯಾಗ್ ಇದ್ದು, ಸದರಿ ಬ್ಯಾಗನ್ನು ಪರಿಶೀಲಿಸಿ ನೋಡಲಾಗಿ HAYWARDS CHEERS WHISKY ಎಂಬ ಹೆಸರಿರುವ 90 ML ನ 20 ಪ್ಯಾಕೇಟುಗಳು ಇದ್ದು, ರಾಮಮೂರ್ತಿ ರವರನ್ನು ಸದರಿ ಮದ್ಯವನ್ನು ಮಾರಾಟ ಮಾಡಲು ಯಾವುದಾದರು ಪರವಾನಗಿ ಇದೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿದ್ದರ ಮೇರೆಗೆ, ಆರೋಪಿ ಮತ್ತು ಮಾಲನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s