ದಿನದ ಅಪರಾಧಗಳ ಪಕ್ಷಿನೋಟ 24ನೇ ಸೆಪ್ಟೆಂಬರ್‌2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 23.09.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 24.09.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ: ಇಲ್ಲ

-ವಾಹನ ಕಳ್ಳತನ: 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಮೋಟಾರು ವಾಹನ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 23.09.2016 ರಂದು ದೂರುದಾರರಾದ ಶ್ರೀ. ಶಾಂತಕುಮಾರ್‌, ಬಿನ್‌ ಸಿಗಾಮಣಿ, ವಾಣಿ ನಗರ, ಡಿ.ಕೆ. ಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರು ಅವರ ಟಾಟಾ ಸುಮೊ ವಿಕ್ಟಾ ವಾಹನ ಸಂಖ್ಯೆ ಕೆಎ-02 ಎಂಎ-0576 , ಓ ಗ್ರೀನ್ ಬಣ್ಣದ ವಾಹನವನ್ನು ದಿನಾಂಕ:01.09.2016 ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ ಅವರ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದು, ದಿನಾಂಕ:02.09.2016 ರಂದು ಬೆಳಿಗ್ಗೆ 7.00 ಗಂಟೆಗೆ ನೋಡಲಾಗಿ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ, ಟಾಟಾ ಸುಮೋ ವಿಕ್ಟಾ ವಾಹನವನ್ನು ಯಾರೂ ಕಳ್ಳರು ಕಳವು ಮಾಡಿಕೊಂಡಿ ಹೋಗಿರುತ್ತಾರೆ. ಸದರಿ ವಾಹನದ ಸಂಖ್ಯೆ  ಕೆಎ02ಎಂಎ0576, ಚಾರ್ಸಿ ನಂ-446326 DUZ921430 ಮತ್ತು ಇಂಜಿನ್ ನಂ-483 DL51DUZ712167  ರ  ಟಾಟಾ ಸುಮೋ ವಿಕ್ಟಾ ವಾಹನದ ಬೆಲೆ ಸುಮಾರು ರೂ 200000/-ಗಳಾಗಿರುತ್ತದೆ.

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

– ದೊಂಬಿ: ಇಲ್ಲ

ಜೂಜಾಟ ಕಾಯ್ದೆ:01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಜೂಜಾಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:23.09.2016 ರಂದು  ಶ್ರೀ.ಶಿವಕುಮಾರ್ ಟಿ.ಎಂ ಪೊಲೀಸ್ ನಿರೀಕ್ಷಕರು, ಡಿ.ಸಿ ಬಿ , ವಿಶೇಷ ಪೊಲೀಸ್ ಠಾಣೆ, ಕೆ.ಜಿಎಫ್ ರವರು ನೀಡಿದ ದೂರಿನಲ್ಲಿ ಪೊಲೀಸ್ ನಿರೀಕ್ಷಕರು ಗಸ್ತುನಲ್ಲಿದ್ದಾಗ ಬಂದ ಖಚಿತ ಮಾಹಿತಿ ಏನೇಂದರೆ ಆಂಡ್ರಸನ್ ಪೇಟೆ ಪೊಲೀಸ್ ಠಾಣಾ ಸರಹದ್ದು, ಭಾರತೀಪುರಂನ ಪಲ್ಲಗುಡಿಸಿ ಯ  ಮಗಿ ಮೈದಾಸ್ ರವರ ಮನೆಯ ಹಿಂಭಾಗದಲ್ಲಿ ಸಾರ್ವಜನಿಕರು ಓಡಾಡುವಂತಹ ಸ್ಥಳದಲ್ಲಿ ಜೂಜಾಟವಾಡುತ್ತಿರುತ್ತಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳದಲ್ಲಿ ಹೋಗಿ ನೋಡಿದಾಗ  04 ಜನ ಆಸಾಮಿಗಳ ಬಳಿ ಇಸ್ಪಿಟ್ ಎಲೆಗಳನ್ನು ಹಿಡಿದುಕೊಂಡು ಅಂದರ್ ಬಾಯರ್‌ ಆಟವಾಡುತ್ತಿದ್ದು ಆರೋಪಿಗಳಾದ  ಮಗಿಮೈ ದಾಸ್, ರೂಬನ್, ಸುರೇಶ್ ಬಾಬು, ಅರುಣ್ ಎಂಬುವುರು ಹಣವನ್ನು ಪಣಕ್ಕಾಗಿ ಕಟ್ಟಿದ್ದ, ನಗದು 1420/-00 ರೂಗಳನ್ನು ಹಾಗೂ ಸ್ಥಳದಲ್ಲಿದ್ದ 52 ಇಸ್ಪಿಟ್ ಎಲೆಗಳು, ಒಂದು ಪ್ಲಾಸ್ಟೀಕ್ ಗೋಣಿಚೀಲವನ್ನು ಅಮಾನತ್ತುಪಡಿಸಿಕೊಂಡು, ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ :ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:23.09.2016 ರಂದು ದೂರುದಾರರಾದ ಶ್ರೀ. ವೆಂಕಟರಾಮಪ್ಪ ಬಿನ್‌ ರಂಗಪ್ಪ, ಸೋರೆಗೌಡನಕೋಟೆ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗನಾದ ಮಂಜುನಾಥ್ ವಯಸ್ಸು 40 ವರ್ಷ ರವರು ಮಾನಸಿಕ ಅಸ್ವಸ್ಥನಾಗಿದ್ದು, ಬುದ್ಧಿ ಭ್ರಮಣಿಯಾವನಾಗಿದ್ದು, ದಿನಾಂಕ 07.09.2016  ರಂದು ಸಂಜೆ 5.00 ಗಂಟೆಯಲ್ಲಿ ಮಂಜುನಾಥ್ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಂಜುನಾಥ್ ಮನೆಯಿಂದ ಹೊರಗೆ ಹೋದವನು ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s