ದಿನದ ಅಪರಾಧಗಳ ಪಕ್ಷಿನೋಟ 23ನೇ ಸೆಪ್ಟೆಂಬರ್‌2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 22.09.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 23.09.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ: 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ  ವಾಹನ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:-22.09.2016 ರಂದು  ದೂರುದಾರರಾದ ಶ್ರೀ. ನಾಗರಾಜು ಬಿನ್‌ ಚಿಂತಲಯ್ಯ, ಮಸ್ಕಂ ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ:21.09.2016 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಗೌತಮನಗರ 7 ನೇ ಅಡ್ಡರಸ್ತೆಯಲ್ಲಿರುವ ಅಸ್ಮಿತ ಮೈಕ್ರೋ ಫಿನ್  ಲಿಮಿಟೆಡ್ ಕಛೇರಿ ಮುಂಬಾಗ ಆತನ ದ್ವಿ ಚಕ್ರ ವಾಹನವಾದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲುಸ್ ನಂ AP-36 N-7749ನ್ನು ನಿಲ್ಲಿಸಿ  ಕಛೇರಿಯಲ್ಲಿ ಕೆಲಸ ಮುಗಿಸಿಕೊಂಡು ಮದ್ಯಾಹ್ನ 3.00 ಗಂಟೆಗೆ ಬಂದು ನೋಡಿದಾಗ ದೂರುದಾರರ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ. ವಾಹನದ ಬಲೆ ಸುಮಾರು ರೂ 25000/-ಗಳಾಗಿರುತ್ತದೆ.

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

– ದೊಂಬಿ: ಇಲ್ಲ

ಜೂಜಾಟ ಕಾಯ್ದೆ:-ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ :ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : 01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.09.2016 ರಂದು ದೂರುದಾರರಾದ ಶ್ರೀ. ಮೂರ್ತಿ ಬಿನ್ ಊಸಪ್ಪ, ತನಿಮಡಗು ಗ್ರಾಮ, ಕಾಮಸಮುದ್ರ ರವರು ನೀಡಿದ ದೂರಿನಲ್ಲಿ ದಿನಾಂಕ 22.09.2016 ರಂದು ಬೆಳಿಗ್ಗೆ 8.00 ಗಂಟೆ ಸಮಯದಲ್ಲಿ ಬಿಸಾನತ್ತ ರೈಲ್ವೆ ನಿಲ್ದಾಣದ ಬಳಿ ಇರುವ ನಕ್ಕೇನಹಳ್ಳಿ ಗ್ರಾಮದ ಗೋಮಾಳ  ಅರಣ್ಯ ಪ್ರದೇಶದ ಪೋದೆಯಲ್ಲಿ  ಸುಮಾರು 75-80 ವರ್ಷ ವಯಸ್ಸಿನ ಅನಾಮಧೇಯ ಯಾರೋ ಒಬ್ಬ ಗಂಡಸು ಸುಮಾರು 4-5 ಹಿಂದೆಗಳಿಂದ ಊಟ-ತಿಂಡಿ ಇಲ್ಲದೆಯೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿ ಮೃತಪಟ್ಟಿರುತ್ತಾರೆ. ಆತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.09.2016 ರಂದು ದೂರುದಾರರಾದ ಶ್ರೀ. ಅಣ್ಣಪ್ಪ, ಸಿಪಿಸಿ ರವರು ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ 3 ನೇ ರಾತ್ರಿ ಬೀಟಿಗೆ  ನೇಮಿಸಿದ್ದು, ದೂರುದಾರರು ಗಸ್ತು ಮಾಡಿಕೊಂಡು ರಾತ್ರಿ 2.00 ಗಂಟೆಯಲ್ಲಿ ಸಮಯದಲ್ಲಿ ಗೀತಾ ರಸ್ತೆಯ, 4ನೇ ಕ್ರಾಸ್ ನಲ್ಲಿರುವ, ಶ್ರೀರಾಘವೇಂದ್ರ ಮಠದ ಮುಂಭಾಗದ ಕಟ್ಟಡದ ಮುಂಬಾಗ ಗಸ್ತು ಮಾಡುತ್ತಿದ್ದಾಗ, ಯಾರೋ ಒಬ್ಬ ಆಸಾಮಿಯು ಸದರಿ ಮಠದ ಕಟ್ಟಡದ ಬಳಿ  ಕತ್ತಲಲ್ಲಿ ಆತನ ಇರುವಿಕೆಯನ್ನು ಮಾರೆಮಾಚಿಕೊಂಡು ಕುಳಿತ್ತಿದ್ದವನು. ದೂರುದಾರರನ್ನು ನೋಡಿ ಓಡಲು ಪ್ರಯತ್ನಿಸಿದ್ದ ಕಾರಣ, ಸದರಿಯವನನ್ನು ಹಿಡಿದುಕೊಂಡು,  ಆತನ ಹೆಸರು ವಿಳಾಸ ಕೇಳಲಾಗಿ ಆತನು ತೊದಲುತ್ತಾ  ತನ್ನ ಹೆಸರು ವಿನೋದ್ ಬಿನ್ ಕುಮಾರ್, 26 ವರ್ಷ, ವಾಸ ಸುಂದರಪಾಳ್ಯ ಗ್ರಾಮವೆಂತ ತಿಳಿಸಿದ್ದು, ಆತನು  ಅವೇಳೆಯಲ್ಲಿ ಅಲ್ಲಿ ಅವಿತು ಕುಳಿತಿದ್ದರ ಬಗ್ಗೆ ಕಾರಣ ಕೇಳಲಾಗಿ ಸರಿಯಾದ ಸಮಜಾಯಿಷಿಯನ್ನು ನೀಡದೇ ಇರುವುದರಿಂದ ಕಳವು ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿರುವುದ್ದಾಗಿ ಅನುಮಾನ ಬಂದಿದ್ದರಿಂದ ಸದರಿ ಆಸಾಮಿಯನ್ನು ಪೊಲೀಸ್ ಠಾಣೆಗೆ ಕರೆತಂದು ಕಾನೂನು ಕ್ರಮ ಜರುಗಿಸಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s