ದಿನದ ಅಪರಾಧಗಳ ಪಕ್ಷಿನೋಟ 22ನೇ ಸೆಪ್ಟೆಂಬರ್‍ 2016

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 21.09.2016ರಂದು ಸಂಜೆ 05.00  ಗಂಟೆಯಿಂದ ದಿನಾಂಕ 22.09.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಅಪರಾಧ ಪ್ರಕರಣಗಳ ವಿವರಗಳು:-

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

– ದೊಂಬಿ: ಇಲ್ಲ

ಜೂಜಾಟ ಕಾಯ್ದೆ:-01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ  ಜೂಜಾಟ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 21.09.2016 ರಂದು ದೂರುದಾರರಾದ ಶ್ರೀ. ವೆಂಕಟಾಚಲಪತಿ, ಪೊಲೀಸ್‌ ಇನ್ಸ್‌ಪೆಕ್ಟರ್‌, ಡಿಸಿಬಿ, ಕೋಲಾರ ರವರು  ನೀಡಿದ ದೂರಿನಲ್ಲಿ. ದಿನಾಂಕ:21.09.2016 ರಂದು ಮಧ್ಯಾಹ್ನ 3.00 ಗಂಟೆ ಸಮಯದಲ್ಲಿ ಆರೋಪಿಗಳಾದ ವೆಂಕಟೇಶಪ್ಪ, ಮುನಿವೆಂಕಟಪ್ಪ, ಉದಯಕುಮಾರ್‌, ನಾರಾಯಣಸ್ವಾಮಿ, ರಾಮಚಂದ್ರಪ್ಪ, ನಯಾಜ್‌ಪಾಷ, ಅಮರೇಶ್‌ ಮತ್ತು ಇತರರು ಬಡಮಾಕನಹಳ್ಳಿ ಗ್ರಾಮದ ಬಳಿ ಇರುವ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕರು ಓಡಾಡುವ ಜಾಗದಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟ ವಾಡುತ್ತಿದ್ದು ಸದರಿ ಆರೋಪಿಗಳು ಇಸ್ಪೀಟ್ ಆಟವಾಡಲು ಉಪಯೋಗಿಸಲು 52 ಇಸ್ಪೀಟ್ ಎಲೆಗೆಳು, ಹಣವನ್ನು ಪಣವಾಗಿ ಇಟ್ಟಿದ್ದ 68120/- ರೂ ಹಾಗೂ ಅಲ್ಲಿಯೆ ಇದ್ದಂತಹ 2 ಮೊಬೈಲ್ ಗಳು ಮತ್ತು ಪಕ್ಕದಲ್ಲಿಯೆ ಇದ್ದ 5 ದ್ವಿಚಕ್ರವಾಹನಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿರುತ್ತಾರೆ.

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:21.09.2016 ರಂದು ದೂರುದಾರರಾದ ಶ್ರೀ. ಬಾಬು ಬಿನ್. ಮುನಿಸ್ವಾಮಿ, 39 ವರ್ಷ, ಐವಾರಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ಸುಮಾರು 10 ವರ್ಷಗಳಿಂದ ಜಮೀನು  ಸ್ವಾಧೀನಾನುಭವದಲ್ಲಿದ್ದು, ವ್ಯವಸಾಯ ಮಾಡಿಕೊಂಡಿದ್ದು, ಸದರಿ ಜಮೀನು 1973ರಲ್ಲಿ ಅದೇ ಗ್ರಾಮದ ವಾಸಿಯಾದ ಶ್ರೀರಾಮನಾಯ್ಡು ಎಂಬುವರಿಗೆ ಅಗ್ರಿಮೆಂಟ್ ಆಗಿದ್ದು, ಈ ಬಗ್ಗೆ ದೂರುದಾರರು ಕೆ.ಜಿ.ಎಫ್ ನ್ಯಾಯಾಲಯದಲ್ಲಿ ಮತ್ತು ಕೋಲಾರದ ನ್ಯಾಯಾಲಯದಲ್ಲಿ ಕೇಸುಗಳನ್ನು ಹಾಕಿಕೊಂಡಿದ್ದರು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.  ದಿನಾಂಕ: 20.09.2016 ರಂದು ರಾತ್ರಿ ಸುಮಾರು 08.30 ಗಂಟೆ ಸಮಯದಲ್ಲಿ ಆರೋಪಿಗಳಾದ ಶ್ರೀರಾಮ ನಾಯ್ದು, ಶಂಕರಪ್ಪ ಮತ್ತು ಇತರರು ದೂರುದಾರರ ಬಳಿ ಬಂದು ಕೆಟ್ಟ ಮಾತುಗಳಿಂದ ಬೈಯುತ್ತಿದ್ದಾಗ, ದೂರುದಾರರ ಹೆಂಡತಿ ಶ್ರೀಮತಿ. ಮಂಜುಳ  ರವರು ಮನ ನೊಂದು ಮೈಮೇಲೆ ಸಿಮೇ ಎಣ್ಣೆ ಸುರಿದುಕೊಂಡು ಬೆಂಕಿ ಇಟ್ಟುಕೊಂಡಿರುತ್ತಾರೆ. ಬೆಂಕಿಯನ್ನು ಆರಿಸಲು ಹೋಗಿದ್ದ ದೂರುದಾರರಿಗೂ ಸಹ  ಸುಟ್ಟುಗಾಯಗಳುಯಾಗಿದ್ದು, ಇಬ್ಬರೂ ಅಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s