ದಿನದ ಅಪರಾಧಗಳ ಪಕ್ಷಿನೋಟ 17ನೇ ಸೆಪ್ಟೆಂಬರ್‌2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:16.09.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 17.09.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:16.09.2016 ರಂದು ದೂರುದಾರರಾದ ಶ್ರೀ. ಚಂದ್ರ ಬಿನ್‌. ಚಾರ್ಲಿಸ್‌, ನಂ. 1451, ಏಸುದಾಸ್‌, ಕಾಂಪೌಂಡ್‌, ಇರುದಿಯಪುರಂ, ರಾಬರ್ಟ್‌‌ಸನ್‌‌ಪೇಟೆ ರವರು  ನೀಡಿದ ದೂರಿನಲ್ಲಿ, ದಿನಾಂಕ:08.09.2016 ರಂದು ಮದ್ಯಾಹ್ನ 02.00 ಗಂಟೆಗೆ ದೂರುದಾರರ ವಾಸದ ಮನೆಗೆ ಬೀಗ ಹಾಕಿ ಕೊಂಡು ಬೆಂಗಳೂರಿಗೆ ಹೋಗಿ ದಿನಾಂಕ:16.09.2016 ರಂದು ಬೆಳಿಗ್ಗೆ ಸುಮಾರು 06.30 ಗಂಟೆ ಸಮಯದಲ್ಲಿ ಮನೆಯ ಮಾಲಿಕರಾದ ಲಿಲ್ಲಿ ರವರು ದೂರವಾಣಿ ಮುಖಾಂತರ ನಿಮ್ಮ ಮನೆಯ ಬಾಗಿಲು ತೆರೆದಿದೆ ಎಂತ ತಿಳಿಸಿದರು ನಂತರ ಬಂದು ನೋಡಲಾಗಿ ಯಾರೋ ಮನೆಯ ಬೀಗವನ್ನು ಕಿತ್ತು ಮನೆಯ ಒಳಗೆ ಪ್ರವೇಶಿಸಿ ಬೀರುವಿನ ಬಾಗಿಲನ್ನು ಕಿತ್ತು ಅದರಲ್ಲಿದ್ದ ವಿವಿಧ ಬಂಗಾರದ ವಡೆವೆಗಳನ್ನು, ಮತ್ತು ಅಡುಗೆ ಮನೆಯಲ್ಲಿದ್ದು, ಹೆಚ್.ಪಿ ಕಂಪನಿಯ ಎರಡು ಗ್ಯಾಸ್ ಸಿಲೆಂಡರ್ ಗಳು ಒಟ್ಟು ಮೌಲ್ಯ 21,500/- ರೂ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿ ಕೊಂಡು ಹೋಗಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:16.09.2016 ರಂದು ದೂರುದಾರರಾದ ಶ್ರೀ.  ರವಿಚಂದ್ರನ್‌, ಬೆಮೆಲ್‌ ನಗರ ಕೆ.ಜಿ.ಎಫ್‌ ರವರು ನೀಡಿದ ದೂರಿನಲ್ಲಿ,ದೂರುದಾರರು 1994 ನೇ ಸಾಲಿನಿಂದ ಕೆ.ಜಿ.ಎಫ್ ನ ಆಂಡ್ರಸನ್ ಪೇಟೆಯ  ಇಂಡಸ್ಟ್ರೀಯಲ್ ಏರಿಯಾದಲ್ಲಿ ಪುಷ್ಪಕ್ ಇಂಡಸ್ಟ್ರೀಸ್ ಎಂಬುವ ಹೆಸರಿನಲ್ಲಿ ವೆಲ್ಡಿಂಗ್ & ಎಲೆಕ್ಟ್ರೋಡ್ ಮ್ಯಾನು ಪ್ಯಾಕ್ಚರಿಂಗ್    ಪ್ಯಾಕ್ಟರೀಯನ್ನು ನಡೆಸುತ್ತಿದ್ದು, ತುಂಭಾ ನಷ್ಟ ಬರುತ್ತಿದ್ದರಿಂದ 2013 ನೇ ಸಾಲಿನಲ್ಲಿ ಪ್ಯಾಕ್ಟರಿಯ   ವ್ಯಾಪಾರ ವಹಿವಾಟುಗಳನ್ನು ಸ್ಥತಗೊಳಿಸಿ, ಪ್ಯಾಕ್ಟರೀಯನ್ನು ಮುಚ್ಚಿದ್ದು, ಆಗಾಗ ದೂರುದಾರರು ಪ್ಯಾಕ್ಟರೀಯ ಬಳಿ ಬಂದು ಹೊರಗಡೆಯಿಂದ ಪ್ಯಾಕ್ಟರಿಯನ್ನು ನೋಡಿಕೊಂಡು ಹೋಗುತ್ತಿದ್ದು, ಅದರಂತೆ ದಿನಾಂಕ 13.09.2016 ರಂದು ಸಂಜೆ ಸುಮಾರು 07.00  ಗಂಟೆಗೆ  ಪ್ಯಾಕ್ಟರೀಯ ಬೀಗ ತೆಗೆದು  ನೋಡಿದಾಗ ಯಾರೋ ಕಳ್ಳರು ಪ್ಯಾಕ್ಟರೀಯ  ಶೆಲ್ಟರ್ ಅನ್ನು  ನಕಲೀ ಕೀ ಬಳಸಿ ಒಳಗೆ  ಪ್ರವೇಶಿಸಿ ಪ್ಯಾಕ್ಟರಿಯೊಳಗಿದ್ದ ಯಂತ್ರೋಪಕರಣಗಳ  ಬಿಡಿ ಭಾಗಗಳನನ್ನು ಬಿಚ್ಚಿ, ಅವುಗಳಲ್ಲಿದ್ದ  ಕಾಪರ್, ಅಲ್ಯುಮೀನಿಯಂ, ಕಬ್ಬಿಣದ ಬಿಡಿಭಾಗಗಳನ್ನು ಮತ್ತು  ಎ.ಸಿ, ಡಿಸಿ ಮೋಟಾರ್ , ಕಂಟ್ರೋಲ್ ಪ್ಯಾನಲ್ ಹಾಗೂ ಇತರೆ ಯಂತ್ರೋಪಕರಣ ಬಿಡಿಭಾಗಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವು ಮಾಡಿಕೊಂಡು ಹೋದ ಎಲ್ಲಾ ವಸ್ತುಗಳ ಅಂದಾಜು ಒಟ್ಟು ಬೆಲೆ ರೂ 3,00,000/ಗಳ ಬೆಲೆ ಬಾಳು ವಸ್ತುಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರರಕರಣ ದಾಖಲಾಗಿರುತ್ತದೆ. ದಿನಾಂಕ: 16.09.2016 ರಂದು ದೂರುದಾರರಾದ ಶ್ರೀ. ಸಂಪಂಗಿಗೌಡ ಬಿನ್‌ ಮುನಿಸ್ವಾಮಿ, ಅಮರಾವತಿ ನಗರ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ 15.09.2016 ರಂದು ಮದ್ಯಾಹ್ನ  ಸುಮಾರು 12.30 ಗಂಟೆ ಸಮಯದಲ್ಲಿ ದೂರುದಾರರು ಸ್ಪ್ಲೆಂಡರ್ ದ್ವಿ ಚಕ್ರ ವಾಹನ ಸಂ ಕೆ.ಎ -08 ಕ್ಯೂ-3579 ರಲ್ಲಿ ಬಂಗಾರಪೇಟೆಯಿಂದ ಕೆ.ಜಿ.ಎಫ್ ಕಡೆಗೆ  ಬರುತ್ತಿದ್ದಾಗ, ಉರಿಗಾಂ ಜ್ವಾಲಾ ಪೆಟ್ರೋಲ್ ಬಂಕ್ ಸಮೀಪ  ರಸ್ತೆಯ ಹಿಂಬದಿಯಿಂದ ಪಲ್ಸರ್ ಮೋಟಾರ್ ಸೈಕಲ್(ನಂಬರ್ ಬರೆದಿಲ್ಲ) ನಲ್ಲಿ ಬರುತ್ತಿದ್ದ  ಆರೋಪಿಯು  ಆತನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ದೂರುದಾರರು ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ದೂರುದಾರರಿಗೆ ರಕ್ತ ಗಾಯಗಳಾಗಿರುತ್ತದೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s