ದಿನದ ಅಪರಾಧಗಳ ಪಕ್ಷಿನೋಟ 02 ನೇ ಸೆಪ್ಟೆಂಬರ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:01.09.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 02.09.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : 02

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 01.09.2016 ರಂದು  ಶ್ರೀ. ಟಿ.ಎಂ. ಶಿವಕುಮಾರ್, ಪೊಲೀಸ್ ನಿರೀಕ್ಷಕರು, ಡಿ.ಸಿ ಬಿ , ಕೆ.ಜಿ.ಎಫ್ ರವರು ಗಸ್ತುನಲ್ಲಿದ್ದಾಗ ಬಂದ  ಮಾಹಿತಿ ಮೇರೆಗೆ ಆಂಡ್ರಸನ್‌ಪೇಟೆಯ ಭಾರತೀಪುರಂ ನ ಪಲ್ಲಗುಡಿಸಿ ಯಲ್ಲಿ ಸಾರ್ವಜನಿಕರು ಓಡಾಡುವಂತಹ ಸ್ಥಳದಲ್ಲಿ ಆರೋಪಿಗಳು ಜೂಜಾಟ ವಾಡುತ್ತಿರುತ್ತಾರೆಂದು ಮಾಹಿತಿಯ ಮೇರೆಗೆ ಹೋಗಿ ನೋಡಿದಾಗ ಆರೋಪಿಗಳು ಜೂಜಾಡುತ್ತಿರುವವರು ಅಲ್ಲಿಂದ ಪೊಲೀಸರನ್ನು ನೋಡಿ ಪರಾರಿಯಾಗುತ್ತಿದ್ದವರನ್ನು ಹಿಡಿದು ಸ್ಥಳವನ್ನು ಪರಿಶೀಲನೆ ಮಾಡಿದಾಗ ಆರೋಪಿಗಳಾದ ಮಗಿಮೈ ದಾಸ್, ಬಾಬು, ಕುಮಾರ್, ರೂಬನ್, ಪ್ರೇಮ್, ರಾಬರ್ಟ್‌, ರವರುಗಳು ಜೂಜಾಟಕ್ಕೆ ನಗದು ರೂ 2785/-ಗಳನ್ನು ಹಾಗೂ ಸ್ಥಳದಲ್ಲಿದ್ದ, 52 ಇಸ್ಪಿಟ್ ಎಲೆಗಳು ಮತ್ತು ಒಂದು ಚಾಪೆಯನ್ನು ಮಹಜರ್ ಮಾಡಿ, ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಜರುಗಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:01.09.2016 ರಂದು ದೂರುದಾರರಾದ  ಶ್ರೀ. ಟಿ.ಎಂ. ಶಿವಕುಮಾರ್, ಪೊಲೀಸ್ ನಿರೀಕ್ಷಕರು, ಡಿ.ಸಿ ಬಿ , ಕೆ.ಜಿ.ಎಫ್ ರವರು ಗಸ್ತುನಲ್ಲಿದ್ದಾಗ ಬಂದ  ಮಾಹಿತಿ ಮೇರೆಗೆ ಅತ್ತಿಗಿರಿಕೊಪ್ಪ ಕರೆಯ ಅಂಗಳದಲ್ಲಿ ಗಿಡಗಳ ಕೆಳಗೆ ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿದ್ದ, ಆರೋಪಿಗಳಾದ  ಸಂತೋಷ್‌, ಸೆಲ್ವಂ, ಸುಬ್ರಮಣಿ,  ಏಸುಪಾದಂ, ರಮೇಶ್‌, ಮುನಿಸ್ವಾಮಿ ರವರುಗಳನ್ನು ಹಿಡಿದು  ಜೂಜಾಡುತ್ತಿದ್ದ ಸ್ಥಳವನ್ನು ಪರಿಶಿಲನೆ ಮಾಡಿದಾಗ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲ, ಪಣಕ್ಕೆ ಇಟ್ಟಿದ್ದ ನಗದು ಹಣ 690/-ರೂಗಳು ಮತ್ತು 52 ಇಸ್ಪೀಟ್ ಎಲೆಗಳನ್ನು ಮಹಜರ್ ಮಾಡಿ, ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಜರುಗಿಸಿರುತ್ತಾರೆ.

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಸೂತಿ ತಜ್ಞೆ ವೈದ್ಯರು ನಿರ್ಲಕ್ಷದಿಂದ ವ್ಯಕ್ತಿ ಮೃತಪಟ್ಟಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:01.09.2016 ರಂದು ಸಂಜೆ 16.00 ಗಂಟೆಗೆ ದೂರುದಾರರಾದ ಶ್ರೀಮತಿ. ಪ್ರೀಯ ದರ್ಶಿನಿ, ಸುಮತಿ ನಗರ, ರಾಬರ್ಟ್‌ಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ.  ದೂರುದಾರರ ಮಗಳಾದ ಶ್ರೀಮತಿ ಪಿ. ಪ್ರಸೀಲ 27 ವರ್ಷ ರವರನ್ನು 8 ತಿಂಗಳ ಗರ್ಬಿಣಿ ಚಿಕಿತ್ಸೆಗಾಗಿ ದಿನಾಂಕ:24.08.2016 ರಿಂದ 28.08.2016 ರವರೆಗೆ ಮನ್ನನ್ ಆಸ್ಪತ್ರೆ ರಾಬರ್ಟ್‌‌ಸನ್‌ಪೇಟೆಯಲ್ಲಿ ಪ್ರಸೂತಿ ತಜ್ಞರಾದ ಡಾ|| ಮೈಥಿಲಿ ರವರ ಬಳಿ ಚಿಕಿತ್ಸೆ ಪಡಿಸಿರುತ್ತಾರೆ. ದಿನಾಂಕ:24.08.2016 ರಂದು ಆಸ್ಪತ್ರೆಯಲ್ಲಿ ಚಳಿ ಜ್ವರಕ್ಕೆ ದಾಖಲಿಸಿದ್ದು, ಮೇಲ್ಕಂಡವರು ಚಿಕಿತ್ಸೆ ಪಡಿಸಿ ದಿನಾಂಕ:24.08.2016 ರಂದು ಹೊಟ್ಟೆಯಲ್ಲಿನ ಮಗು ಆರೋಗ್ಯ ಪೂರ್ಣವಾಗಿದ್ದಾರೆ ಮತ್ತು ತಾಯಿಗೆ ಜ್ವರವಿದೆ ಎಂದು ಡಾ|| ಮೈಥಿಲಿ ರವರು ತಿಳಿಸಿರುತ್ತಾರೆ. ದಿನಾಂಕ:25.08.2016 ರಂದು ರಕ್ತದ ಸ್ಯಾಂಪಲ್ ಗಳನ್ನು ಪಡೆದು ಪರಿಶೀಲಿಸಲಾಗಿ ಡೆಂಗ್ಯೂ ಜ್ವರ ಇರುವುದಾಗಿ ಖಚಿತ ಪಡಿಸಿರುತ್ತಾರೆ. ದಿನಾಂಕ:27.08.2016 ರಂದು ಚಿಕಿತ್ಸೆ ನೀಡಿ ಡಿಸ್ ಚಾರ್ಜ್ ನೀಡಿರುತ್ತಾರೆ. ದಿನಾಂಕ:28.08.2016 ರಂದು ಪುನಃ ಚಳಿ ಮತ್ತು ಜ್ವರಕ್ಕಾಗಿ ಅದೇ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಆ ದಿನ ಪರಿಸ್ಥಿತಿ ಸಂಕೀರ್ಣವಾದಾಗ ಪ್ಲೇಟ್ ಲೇಟ್ ಕೌಂಟ್ ನಲ್ಲಿ ಗಣನೀಯ ಇಳಿಕೆ ಕಂಡು ಬಂದಾಗ ದಿಡೀರನೆ ಜಾಲಪ್ಪ ಮೆಡಿಕಲ್ ಕಾಲೇಜು ಕೋಲಾರಕ್ಕೆ ಶಿಪಾರಸ್ಸು ಮಾಡಿ ಕಳುಹಿಸಿರುತ್ತಾರೆ. ನಂತರ ನಾವು ಬೆಂಗಳೂರಿನ ಮದರ್ ಹುಡ್ ಮತ್ತು ಅಲ್ಲಿಂದ SAKRA WORLD ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ ನಂತರ ಅಲ್ಲಿಯೂ ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ:-29.08.2016 ರಂದು ರಾತ್ರಿ 11.35 ಗಂಟೆಗೆ ತೀರಿ ಕೊಂಡಿರುತ್ತಾರೆ. ದೂರುದಾರರ ಮಗಳ ಸಾವಿಗೆ ರಾಬರ್ಟ್‌‌ಸನ್‌ಪೆಟೆ ಮನ್ನನ್ ಆಸ್ಪತ್ರೆಯ ಡಾ|| ಮೈಥಿಲಿ ರವರ ದೋಷಪೂರಿತ ಬೇಜವಬ್ದಾರಿಯ ಚಿಕಿತ್ಸೆಯೇ ಕಾರಣವಾಗಿರುತ್ತೆ. ಒಬ್ಬ ಮಾರಾಣಾಂತಿಕ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಗರ್ಬಿಣಿ ಸ್ತ್ರೀಯನ್ನು ಒಬ್ಬ ಪ್ರಸೂತಿ ತಜ್ಞೆ ವೈದ್ಯರು ನಿರ್ಲಕ್ಷದಿಂದ ಚಿಕಿತ್ಸೆ ನೀಡಿದ್ದರಿಂದ ಶ್ರೀಮತಿ ಪಿ. ಪ್ರಿಸೀಲ 27 ವರ್ಷ ರವರು ಮೃತಪಟ್ಟಿರುತ್ತಾರೆ.

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s