ದಿನದ ಅಪರಾಧಗಳ ಪಕ್ಷಿನೋಟ 31 ನೇ ಆಗಸ್ಟ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:30.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 31.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:30.08.2016 ರಂದು ದೂರುದಾರರಾದ ಶ್ರೀ. ವಸಂತ, ಪಿಎಸ್‌ಐ, ಕಾಮಸಮುದ್ರಂ ರವರು ಗಸ್ತುನಲ್ಲಿರುವಾಗ ಬಂದ ಮಾಹಿತಿಯ ಮೇರೆಗೆ  ಶ್ರೀನಿವಾಸಪ್ಪ ರವರ ಜಮೀನಿನಲ್ಲಿ ಯಾರೋ ಕೋಳಿ ಪಂದ್ಯ ಆಡುತ್ತಿದ್ದಾರೆಂದು ತಿಳಿಸಿದ್ದು, ಆ ಸ್ಥಳಕ್ಕೆ ಹೋಗಿ ನೋಡಲಾಗಿ ಆರೋಪಿಗಳಾದ ವೆಂಕಟೇಶ್, ಪೂಜಾರಪ್ಪ, ವೆಂಕಟೇಶ, ನಾರಾಯಣಸ್ವಾಮಿ, ತಿಪ್ಪಾರೆಡ್ಡಿ, ಚಂದ್ರಪ್ಪ ಮತ್ತು ತಿಮ್ಮರಾಯಪ್ಪ ರವರುಗಳು ಡಿ.ಹೊಸಮನೆಗಳು ಬಳಿ ಶ್ರೀನಿವಾಸಪ್ಪ ಎಂಬುವರ ಜಮೀನಿನಲ್ಲಿ ಕೋಳಿಪಂದ್ಯವೆಂಬ ಜೂಜಾಟವನ್ನು ಆಡುತ್ತಿದ್ದಾಗ ಪಿಎಸ್‌ಐ ಮತ್ತು ಸಿಬ್ಬಂದಿಯು ದಾಳಿ ಮಾಡಿದ್ದು, ಜೂಜಾಟಕ್ಕೆ ಉಪಯೋಗಿಸಿದ್ದ ಮೂರು ಕೋಳಿಹುಂಜಗಳು, ಒಟ್ಟು ಹಣ 7,250/-ರೂಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಆರೋಪಿಗಳ ವಿರುದ್ದ, ಕಾನೂನು ರೀತಿ ಕ್ರಮ ಜರುಗಿಸಿರುತ್ತಾರೆ.

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : 01

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌‌ಐ ರವರ ಮೇಲೆ ಹಲ್ಲೆ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 30.08.2016 ರಂದು ಮದ್ಯಾಹ್ನ 1.30 ಗಂಟೆಗೆ ದೂರುದಾರರಾದ  ಪಿಎಸ್‌ಐ ಬೆಮೆಲ್‌ ನಗರ ಪೊಲೀಸ್‌ ಠಾಣೆರವರು, ಬೆಮೆಲ್ ನಗರ ಪೊಲೀಸ್ ಠಾಣೆಯ ಮೊ.ಸಂಖ್ಯೆ 75/2016 ಕಲಂ 354,354(ಬಿ),354(ಡಿ)504,323,307,506(ಬಿ) ಐ.ಪಿ.ಸಿ ಕೇಸಿನಲ್ಲಿ ಆರೋಪಿಯನ್ನು ವಿಚಾರಣೆಗೆ ಕರೆತರಲು ಸರ್ಕಾರಿ ಜೀಪು ಸಂಖ್ಯೆ ಕೆಎ08-ಜಿ-72 ರಲ್ಲಿ ಚಾಲಕ ಎ.ಹೆಚ್.ಸಿ 04 ಕೆ.ಟಿ.ಲಕ್ಷ್ಮೀನಾರಾಯಣ ಮತ್ತು ಸಿ.ಹೆಚ್.ಸಿ 27 ಪಿ.ಕೃಷ್ಣಮೂರ್ತಿ ರವರೊಂದಿಗೆ ಹೋಗಿದ್ದಾಗ. ಆರೋಪಿ ಬೆಮೆಲ್ ನಗರದ ಸಂಭ್ರಮ್  ಡೆಂಟಲ್ ಕಾಲೇಜಿನ  ಬಳಿ ಇದ್ದು ಪಿಎಸ್‌ಐ ರವರು ಆರೋಪಿಯನ್ನು ಕುರಿತು “ನಿನ್ನ ಮೇಲೆ ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತೆ” ನೀನು ವಿಚಾರಣೆಗೆ ಠಾಣೆಗೆ ಬರಬೇಕೆಂದು ತಿಳಿಸಿದಾಗ, ಆರೋಪಿ ಮಂಜುನಾಥ ಎಂಬುವರು ತಾನು ಬರುವುದಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದಾಗ ಪಿಎಸ್‌ಐ ರವರು  ಆರೋಪಿಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ ಆರೋಪಿ ಪಿಎಸ್‌ಐ ರವರಿಗೆ ಬಲಗೈ ಬೆರಳನ್ನು ಬಲವಾಗಿ ತಿರುಗಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆರೋಪಿ ಠಾಣೆಗೆ ಬರುವುದಿಲ್ಲವೆಂದು ನಿರಾಕರಿಸಿ ಅಸಭ್ಯವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿ ಬೆರಳಿಗೆ ರಕ್ತ ಗಾಯಪಡಿಸಿರುತ್ತಾರೆ.

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s