ದಿನದ ಅಪರಾಧಗಳ ಪಕ್ಷಿನೋಟ 27 ನೇ ಆಗಸ್ಟ್‌ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:27.08.2016 ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:27.08.2016 ರಂದು ದೂರುದದಾರರಾದ ಶ್ರೀಮತಿ. ಮಲಾತಿ ಕೋಂ. ಮರುಗನ್‌ ನಗರ ಸಭೆ ವಸತಿ ಗೃಹ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ:26.08.2016 ರ ಬೆಳಿಗ್ಗೆ 7.00 ಗಂಟೆಯಲ್ಲಿ,  ದೂರುದಾರರು ಮನೆಗೆ ಬೀಗ ಹಾಕಿಕೊಂಡು ಬಸ್ಸು ನಿಲ್ದಾಣಕ್ಕೆ ಹೋಗಿ ಬರುವಷ್ಟರಲ್ಲಿ. ನಗರಸಭೆ ವಸತಿ ಗೃಹ ಸಂಖ್ಯೆ: 6 ರಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಕಿತ್ತು ಒಳಗೆ ಪ್ರವೇಶಿಸಿ ಮನೆಯ ಬೀರುವಿನಲ್ಲಿದ್ದ, 2 ಬೆಳ್ಳಿ ದೀಪಗಳು, ನಗದು ಹಣ 10,000/- ಗಳು ಒಂದು ಅಂದಾಜು ಬೆಲೆ 24,000/- ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ :02

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26.08.2016  ರಂದು ರಾತ್ರಿ ದೂರುದಾರರಾದ ಶ್ರೀ. ಬಾಲಕೃಷ್ಣ, ಸಿಹೆಚ್‌ಸಿ ರವರಿಗೆ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ಸರಹದ್ದಿನ ರಾತ್ರಿ 4 ನೇ ಬೀಟಿಗೆ ನೇಮಿಸಿದ್ದು,   ಅದರಂತೆ ದೂರುದಾರರು ರಾತ್ರಿ 12.45 ಗಂಟೆಗಯಲ್ಲಿ  ಗಸ್ತು ಮಾಡುತ್ತಿದ್ದ ಸಮಯದಲ್ಲಿ  ಎಂ.ಪಿ. ಸಿಲ್ಕ್ ಅಂಗಡಿಯ ಬಳಿ  ಯಾರೋ ಒಬ್ಬ ಆಸಾಮಿ ಅನುಮಾನಸ್ಪದವಾಗಿ ಕುಳಿತ್ತಿದ್ದು, ದೂರುದಾರರ ಆತನ ಬಳಿ ಹೋದಾಗ ದೂರುದಾರರನ್ನು ನೋಡಿ ಓಡಲು ಪ್ರಯತ್ನಿಸಿದಾಗ ಆತನನ್ನು   ಹಿಡಿದುಕೊಂಡು, ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ವಾಸು ಬಿನ್ ಲೇಟ್ ಕಾಳಯ್ಯ, ವಯಸ್ಸು 42 ವರ್ಷ, ವಾಸ ಯಡಿಯೂರು, ಬೆಂಗಳೂರು ಎಂದು ತಿಳಿಸಿದ್ದು, ಆತನನ್ನು  ಅವೇಳೆಯಲ್ಲಿ ಅವಿತು ಕುಳಿತಿದ್ದರ ಬಗ್ಗೆ ಕಾರಣ ಕೇಳಲಾಗಿ ಸರಿಯಾದ ಸಮಜಾಯಿಷಿಯನ್ನು ನೀಡದೇ ಇರುವುದರಿಂದ,  ಆರೋಪಿ ಅಪರಾಧ ಮಾಡುವ ಉದ್ದೇಶದಿಂದ ಅಲ್ಲಿ ಹೊಂಚು ಹಾಕುತ್ತಿರುವುದ್ದಾಗಿ ಅನುಮಾನ ಬಂದಿದ್ದರಿಂದ ಸದರಿ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26.08.2016  ರಂದು ರಾತ್ರಿ ದೂರುದಾರರಾದ ಶ್ರೀ.ಕೃಷ್ಣಮೂರ್ತಿ ಸಿಪಿಸಿ ರವರಿಗೆ  ದಿನಾಂಕ:26.08.2016 ರಂದು  3ನೇ ರಾತ್ರಿ  ಬೀಟಿಗೆ  ನೇಮಿಸಿದ್ದು, ಅದರಂತೆ  ರಾತ್ರಿ 02.00 ಗಂಟೆಗೆ ಕಾಟ್ ಮಾರಿಯಮ್ಮ ಚರ್ಚ್ ಬಳಿ ಗಸ್ತು ಮಾಡುತ್ತಿದ್ದಾಗ, ಯಾರೋ ಒಬ್ಬ ಆಸಾಮಿಯು ಚರ್ಚ್ ನ ಬಳಿ ಕತ್ತಲಲ್ಲಿ  ಆತನ ಇರುವಿಕೆಯನ್ನು ಮಾರೆಮಾಚಿಕೊಂಡು ಕುಳಿತ್ತಿದ್ದು, ದೂರುದಾರರು ಆತನ ಬಳಿಗೆ ಹೋದಾಗ ದೂರುದಾರರನ್ನು ನೋಡಿ ಓಡಲು ಪ್ರಯತ್ನಿಸಿದ್ದು, ಆತನನ್ನು ಹಿಡಿದುಕೊಂಡು, ಹೆಸರು ವಿಳಾಸ ಕೇಳಲಾಗಿ ಆತನು ತೊದಲುತ್ತಾ  ತನ್ನ ಹೆಸರು ವೇಲಾ ಬಿನ್ ರವಿ, ವಯಸ್ಸು 27ವರ್ಷ, ವಾಸ ಮಾರಿಯಮ್ಮ ದೇವಾಲಯ ಹತ್ತಿರ , ಸಂಜಯ್  ಗಾಂಧಿ ನಗರ, ರಾಬರ್ಟ್ ಸನ್ ಪೇಟೆ, ಕೆ.ಜಿ.ಎಫ್. ಎಂದು ತಿಳಿಸಿದ್ದು, ಆತನು  ಅವೇಳೆಯಲ್ಲಿ ಅವಿತು ಕುಳಿತಿದ್ದರ ಬಗ್ಗೆ ಕಾರಣ ಕೇಳಲಾಗಿ ಸರಿಯಾದ ಸಮಜಾಯಿಷಿಯನ್ನು ನೀಡದೇ ಇರುವುದರಿಂದ ಕಳವು ಮಾಡುವ ಉದ್ದೇಶದಿಂದ ಅಲ್ಲಿ ಹೊಂಚು ಹಾಕುತ್ತಿರುವುದ್ದಾಗಿ ಅನುಮಾನ ಬಂದಿದ್ದರಿಂದ, ಸದರಿ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು :

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s