ದಿನದ ಅಪರಾಧಗಳ ಪಕ್ಷಿನೋಟ 27 ನೇ ಆಗಸ್ಟ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:26.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 27.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : 01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:26.08.2016 ರಂದು ದೂರುದಾರರಾದ ಶ್ರೀ. ಶಿವಕುಮಾರ್‌ ಬಿನ್‌. ನಾರಾಯಣಸ್ವಾಮಿ, ಸೌತ್‌ ಟ್ಯಾಂಕ್‌ ಬ್ಲಾಕ್‌, ಉರಿಗಾಂ ರವರು ನೀಡಿದ ದೂರಿನಲ್ಲಿ. ದಿನಾಂಕ 26.08.2016 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ದೂರುದಾರರು ಮತ್ತು ಸ್ನೇಹಿತ ಪ್ರಶಾಂತ್, ಪ್ರೇಮ್ ಜೊತೆಯಲ್ಲಿ ಸೌತ್ ಟ್ಯಾಂಕ್ ಬ್ಲಾಕ್ ನ ರಾಜ್ ಅಂಗಡಿ ಬಳಿ ನಿಂತಿದ್ದಾಗ, ಆರೋಪಿಗಳಾದ ಅಜಯ್‌, ಸೋಮೇಶ್‌, ಮೂರ್ತಿ, ಜಾನ್‌, ಎಂಬುವರು  ಏಕೆ ನೀವು ನಮ್ಮ ಲೈನಿಗೆ ಬಂದಿದ್ದೀರಿ ಎಂತ ಅಕ್ರಮ ಕೂಟ ಕಟ್ಟಿಕೊಂಡು ಚಾಕು ದೊಣ್ಣೆ ಆಯುಧಗಳೊಂದಿಗೆ ಬಂದು  ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ದೂರುದಾರರ ತಲೆಯ ಹಿಂಬಾಗಕ್ಕೆ ತಿವಿದು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : 01

ಚಾಂಪಿಯನ್‌ರೀಪ್ಸ್‌ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 26.08.2016 ರಂದು ದೂರುದಾರರಾದ  ಬಿಜಿಎಂಎಲ್‌ನ ಅದಿಕಾರಿ ಸಿಎಸ್‌ಓ ರವರು ನೀಡಿದ ದೂರಿನಲ್ಲಿ. ದಿನಾಂಕ 23.08.2016 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ಬಿಜಿಎಮ್ಎಲ್ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡಗಳಾದ ಪೊಸ್ವಾಮಿ ಮತ್ತು ಮಣಿ ರವರು ಕರ್ತವ್ಯ ನಿರ್ವಹಿಸುತಿದ್ದ, ಸಮಯದಲ್ಲಿ ಯಾರೋ ಕಳ್ಳರು ಬಿಜಿಎಮ್ಎಲ್ ಆಸ್ಪತ್ರೆಯ ಒಳ ಪ್ರವೇಶಿಸಿ ಲ್ಯಾಭ್ ರೋಮಿನ ಬಾಗಿಲನ್ನು ಒಡೆದು ಕಳ್ಳತನ ಮಾಡಲು ಪ್ರಯತ್ನಿಸಿಸುತ್ತಿದ್ದಾಗ ಸೆಕ್ಯುರಿಟಿ ಗಾರ್ಡಗಳು ಆ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ, ಅಲ್ಲಿಂದ ಕಳ್ಳರು ಯಾವುದೆ ವಸ್ತುಗಳನ್ನು ಕಳವು ಮಾಡದೆ ಪರಾರಿಯಾಗಿರುತ್ತಾರೆ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ :01

ಚಾಂಪಿಯನ್‌ರೀಪ್ಸ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 26.08.2016 ರಂದು ದೂರುದಾರರಾದ ಶ್ರೀ. ಮೊಹ್ಮದ್‌ ಸರ್ದಾರ್‌ ಬಿನ್‌. ಶೇಖ್‌ ಉಸೇನ್‌, ಇ.ಡಿ ಬ್ಲಾಕ್‌, ಚಾಂಪಿಯನ್‌ ರೀಫ್ಸ್‌ ರವರು ನೀಡಿದ ದೂರಿನಲ್ಲಿ. ದಿನಾಂಕ:26.08.2016 ರಂದು ಮದ್ಯಾಹ್ನ 2.30 ಗಂಟೆಯಲ್ಲಿ, ದೂರುದಾರರು ಮಸೀದಿ ಕಾಂಪೌಂಡ್ ನಲ್ಲಿದ್ದಾಗ, ಅರೋಪಿಗಳು ಬಂದು ಮಸೀದಿ ಸ್ವತ್ತಿಗೆ ಸಂಬಂದಿಸಿದ ವಿಚಾರದಲ್ಲಿ ಗಲಾಟೆ ಮಾಡಿ ಆರೋಪಿ ನಿಸಾರ್ ಎಂಬುವರು ದೂರುದಾರರಿಗೆ ಕೈ ಯಿಂದ ಹೊಡೆದು ರಕ್ತ ಗಾಯ ಪಡಿಸಿ ಸಾಯಿಸಿ ಬಿಡುತ್ತೇಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಜೂಜಾಟ ಕಾಯ್ದೆಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 26.08.2016 ರಂದು ಸಂಜೆ 04.30 ಗಂಟೆಗೆ ಬೇತಮಂಗಲ ಪಿ.ಎಸ್.ಐ ರವರಿಗೆ ಬಂದ ಮಾಹಿತಿಯ ಮೇರೆಗೆ ಸಾರ್ವಜನಿಕ ಸ್ಥಳದಲ್ಲಿ ಮರದ ಕೆಳಗೆ ಆರೋಪಿಗಳಾದ ಜಹೀರ್‌, ಅಕ್ಬರ್‌, ಆಶೋಕ್‌ ಕುಮಾರ್‌, ವೆಂಕಟಾಚಲಪತಿ, ರವಿಕುಮಾರ್‌, ಮುರಳಿ, ಹನುಮಂತ, ಬಾಬು, ಮೋಹನ್‌ ಎಂಬುವರು  ಅಂದ್ರ ಬಾಹರ್ ಜೂಜಾಟ ಡುತ್ತಿದ್ದವರ ಮೇಲೆ  ದಾಳಿ ಮಾಡಿ ಆಟವಾಡುತ್ತಿದ್ದ, ಅರೋಪಿಗಳನ್ನು ಹಿಡಿದುಕೊಂಡಿದ್ದು ಜೂಜಾಟವಾಡಲು ಪಣವಾಗಿಟ್ಟಿದ್ದ 15,470/-ರೂಗಳು, 52 ಇಸ್ಪೇಟ್ ಎಲೆಗಳು, 07 ಮೊಬೈಲ್ ಗಳು ಮತ್ತು 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ದ ಕಾನೂನು ಕ್ರಮ ಜರಿಗಿಸಿರುತ್ತಾರೆ.

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s