ದಿನದ ಅಪರಾಧಗಳ ಪಕ್ಷಿನೋಟ 24ನೇ ಆಗಸ್ಟ್ 2016 ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 24.08.2016ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆ ಅವಧಿಯಲ್ಲಿ ದಾಖಲಾದ ಪ್ರಕರಣಗಳ ವಿವರಗಳು.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ:01

ರಾಬರ್ಟ್‌‌ಸನ್‌ಫೇಟೆ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:24.08.2016 ರಂದು ದೂರುದಾರರಾದ ಶ್ರೀಮತಿ ಈಶ್ವರಿ ಕೋಂ ರಾಮಬಹುದೂರ್‍ ರಾಜ್‌, ಸ್ವರ್ಣಾನಗರ ರಾಬರ್ಟ್‌‌ಸನ್‌ಪೇಟೆ ರವರು ನೀಡದ ದೂರಿನಲ್ಲಿ. ದಿನಾಂಕ 20.08.2016 ರಂದು ಮದ್ಯಾಹ್ನ ಸುಮಾರು 1.30 ಗಂಟೆಗೆ ದೂರುದರರ ವಾಸದ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿ ದಿನಾಂಕ 24.08.2016 ರಂದು  ಬೆಳಿಗ್ಗೆ ದೂರುದಾರರು ಮನೆಗೆ ವಾಪಸ್ಸು ಬಂದು  ನೋಡಲಾಗಿ  ದೂರುದಾರರ  ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಬೀರುವಿನಲ್ಲಿಟ್ಟಿದ್ದ 100 ಗ್ರಾಂ  ಬೆಳ್ಳಿ ವಸ್ತುಗಳು  10 ಗ್ರಾಂನ ಬಂಗಾರದ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ವಡವೆಗಳ ಒಟ್ಟು ಬೆಲೆ 23 ಸಾವಿರ ಬೆಲೆ ಬಾಳುವುದಾಗಿರುತ್ತದೆ.

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

– ಸಾಧಾರಣ: ಇಲ್ಲ

– ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ :02

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ  ಅಕ್ರಮವಾಗಿ ಗ್ಯಾಸ್‌ ಸಿಲೆಂಡರ್‌ಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ದ, ಪ್ರಕರಣ ದಾಖಲಿಸಿರುತ್ತಾರೆ. ದೂರುದಾರರಾದ ಶ್ರೀ. ರವಿಕುಮಾರ್‌ ಪಿಎಸ್‌ಐ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ:24.08.2016 ರಂದು ಬೆಳಿಗ್ಗೆ 7.00 ಗಂಟೆಯಲ್ಲಿ ಗಸ್ತು ಮಾಡುತ್ತಿರುವಾಗ ಬಂದ ಖಚಿತ ಮಾಹಿತಿ ಮೇರೆಗೆ ಬಂಗಾರಪೇಟೆ-ಕೆ.ಜಿ.ಎಫ್ ಮುಖ್ಯ ರಸ್ತೆಯಲ್ಲಿರುವ ಲತೀಫ್ ಬೇಗ್ ರವರ ಅಂಗಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ದಾಸ್ತಾನು ಮಾಡಿ ಗ್ಯಾಸ್ ರೀಪ್ಲಿಂಗ್ ಮಾಡುತ್ತಿದ್ದ ಆರೋಪಿ ಲತ್ತೀಫ್ ಬೇಗ್‌ ಬಿನ್‌ ಏಕಾಂಬರಂ, ಬಂಗಾರಪೇಟೆ ಎಂಬುವರನ್ನು ವಿಚಾರಣೆ ಮಾಡಿದಾಗ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿದ್ದು, ಪಂಚರ ಸಮಕ್ಷಮ ಸಿಲೆಂಡರ್‌ಗಳನ್ನು ವಶಪಡಿಸಿಕೊಂಡು  ಆರೋಪಿ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮವಾಗಿ ಗ್ಯಾಸ್‌ ಸಿಲೆಂಡರ್‌ಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ದ, ಪ್ರಕರಣ ದಾಖಲಿಸಿರುತ್ತಾರೆ. ದೂರುದಾರರಾದ ಶ್ರೀ. ಟಿ.ಎಂ. ಶಿವಕುಮಾರ್‌ ಸಿಪಿಐ. ಡಿಸಿಬಿ ಕೆ.ಜಿ.ಎಫ್‌ ರವರು ನೀಡಿದ ದೂರಿನಲ್ಲಿ ದಿನಾಂಕ:24.08.2016 ರಂದು ಬೆಳಿಗ್ಗೆ 7.00 ಗಂಟೆಗೆ ದೂರುದಾರರು ಬಂಗಾರಪೇಟೆಯಲ್ಲಿ ಗಸ್ತು ಮಾಡುತ್ತಿದ್ದಾಗ, ಬಂದ ಖಚಿತ ಮಾಹಿತಿಯ ಮೇರೆಗೆ  ಬಂಗಾರಪೇಟೆ ಬೋವಿನಗರದ ಅಂಗಡಿಯಲ್ಲಿ ಸರ್ಕಾರದಿಂದ ಸಾರ್ವಜನಿಕರಿಗೆ ಗೃಹ ಬಳಕೆಗೆ ವಿತರಿಸುವ ಎಲ್.ಪಿ.ಜಿ ಸಿಲಿಂಡ್ ಗಳನ್ನು ಅಕ್ರಮವಾಗಿ ಇಟ್ಟುಕೊಂಡು ರೀಪ್ಲಿಂಗ್ ಮಾಡುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ 7.15 ಗಂಟೆಗೆ ಬೋವಿನಗರದ ಅಂಗಡಿಯ ಬಳಿ ನೋಡಿದಾಗ ಆರೋಪಿಗಳಾದ ನವಾಜ್‌ ಮತ್ತು ಶ್ರೀಕಾಂಥ್‌, ಸಿ. ರಹೀಂ ಕಾಂಪೌಂಡ್‌ ಬಂಗಾರಪೇಟೆ ಎಂಬುವುರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗ್ಯಾಸ್ ರೀಪ್ಲಿಂಗ್ ನ್ನು ಮಾಡುತ್ತಿದ್ದು ಇಂಡೆನ್ ಕಂಪನಿಯ  3 ಸಿಲಿಂಡರ್ ಗಳು ಒಂದು ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್, ಗ್ಯಾಸ್ ರೀಪ್ಲಿಂಗ್ ಮಾಡುವ ಒಸ್ ಪೈಪ್ ಗಳು, ಒಂದು ಎಲೆಕ್ಟ್ರಿಕ್ ಪೈಪ್, 2 ತೂಕ ಮಾಡುವ ಯಂತ್ರಗಳು ಇಟ್ಟುಕೊಂಡಿದ್ದವರ ವ ಇರುದ್ದವರ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:24.08.2016 ರಂದು ದೂರುದಾರರಾದ ಶ್ರೀ. ಚಿನ್ನಪ್ಪ ಬಿನ್‌. ಕರಪಯ್ಯ, ದಾಸರಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ: 23.08.2016 ರಂದು ದೂರುದಾರರ ಮಗ  ಕ್ರಿಷ್ಣಂ ರಾಜು, 30 ವರ್ಷ ರವರು ಕೂಲಿ ಕೆಲಸಕ್ಕೆ ಹೋಗುತ್ತೇನೆಂದು ಮನೆಯ ಬಿಟ್ಟು ಹೋದವನು ಮನೆಗೆ ವಾಪಸ್ಸು ಬರದೆ ಇದ್ದುದ್ದರಿಂದ ಅಲ್ಲಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ.ದಿನಾಂಕ: 24.08.2016 ರಂದು ಬೆಳಿಗ್ಗೆ 08.30 ಗಂಟೆಯಲ್ಲಿ ಎಸ್.ಜಿ ಕೋಟೆ ಕಡೆ ಹುಡುಕಾಡಲಾಗಿ ಕ್ರಿಷ್ಣಂರಾಜು 30 ವರ್ಷ ರವರು  ಎಸ್‌ ಜಿ ಕೋಟೆಯ ಕೆರೆಯ ನೀರಿನಲ್ಲಿ ಬಿದ್ದು, ಮೃತ ಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s