ದಿನದ ಅಪರಾಧಗಳ ಪಕ್ಷಿನೋಟ 23 ನೇ ಆಗಸ್ಟ್‌2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:22.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 23.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :02

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.08.2016 ರಂದು ದೂರುದಾರರಾದ ಶ್ರೀ. ಪ್ರಕಾಶ್‌ ಬಿನ್‌ ವಿಜಯಕುಮಾರ್‌, ಕೋಲಾರ ರವರು ನೀಡಿದ ದೂರಿನಲ್ಲಿ. ದಿನಾಂಕ:21.08.2016 ರಂದು ದೂರುದಾರರ ತಂದೆ ವಿಜಯ್ ಕುಮಾರ್  ರವರು ಮತ್ತು ಅವರ ಸ್ನೆಹಿತ ರಘುನಾಥ್ ರವರನ್ನು ದ್ವಿ-ಚಕ್ರ ವಾಹನ  ಹಿರೋ ಹೋಂಡಾ ಪ್ಯಾಶನ್ ಸಂಖ್ಯೆ KA-07 Q-4919 ರಲ್ಲಿ  ಶಾಂತಿ ಪುರಂಗೆ ಹೋಗಿ, ಅಲ್ಲಿಂದ  ಕೆ.ಜಿ.ಎಫ್‌ ಗೆ ಬರುತ್ತಿದ್ದಾಗ, ಪೂಜಾರ್ಲ ಹಳ್ಳಿ ಗ್ರಾಮದ ಬಳಿ ಬರುತ್ತಿದ್ದಾಗ, ಕೆ.ಜಿ.ಎಫ್ ಕಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ಸಂಖ್ಯೆ AP-27 N-4612  ನ ಚಾಲಕನು ಟ್ರ್ಯಾಕ್ಟರ್ ಅನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ, ರಘು ನಾಥ್ ಮತ್ತು ವಿಜಯ್ ಕುಮಾರ್ ರವರುಗಳಿಗೆ ರಕ್ತ ಗಾಯಗಳಾಗಿರುತ್ತದೆ.  ಟ್ರ್ಯಾಕ್ಟರ್ ನ ಚಾಲಕ ಟ್ರ್ಯಾಕ್ಟರ್ ನ್ನು ತೆಗೆದುಕೊಂಡು ಪರಾರಿಯಾಗಿರುತ್ತಾನೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.08.2016 ರಂದು ದೂರುದಾರರಾದ ಶ್ರೀಮತಿ ವೆಂಕಟಮ್ಮ ಕೋಂ ಬೈರಪ್ಪ, ಚಿಕ್ಕ ಅಂಕಂಡಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:20.08.2016 ರಂದು ಸಂಜೆ 7-45 ಗಂಟೆ ಸಮಯದಲ್ಲಿ ದೂರುದಾರರು ಹಂಚಾಳ ಗೇಟ್ ನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಲು ಬಂಗಾರಪೇಟೆ ಕೋಲಾರ ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಕೋಲಾರದ ಕಡೆಯಿಂದ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ. 08 ಜೆ 7514 ಅನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪ್ರಯುಕ್ತ ವೆಂಕಟಮ್ಮ ರವರಿಗೆ ರಕ್ತ ಗಾಯಗಳಾಗಿರುತ್ತೆ. ಅಪಘಾತ ಪಡಿಸಿದ ದ್ವಿಚಕ್ರ ವಾಹನ ಸವಾರ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿರುತ್ತಾರೆ.

-ಭದ್ರತಾ ಕಾಯ್ದೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ದಿನಾಂಕ: 22.08.2016 ರಂದು ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬೇತಮಂಗಲ ಪೊಲೀಸ್‌ ಠಾಣೆ ರವರು ಠಾಣಾ ಸರಹದ್ದಿನಲ್ಲಿ ಸೆಕ್ಟರ್ ಕರ್ತವ್ಯದಲ್ಲಿರುವಾಗ ಮುಂಜಾನೆ 4.00 ಗಂಟೆಯ ಸಮಯದಲ್ಲಿ ಬೇತಮಂಗಲದ ನಾಯ್ಡು ಕಾಂಪ್ಲಕ್ಸ್ ಕಡೆ ಗಸ್ತು ಮಾಡುತ್ತಿದ್ದಾಗ ನಾಯ್ಡು ಕಾಂಪ್ಲಕ್ಸ್ ನ ಟೀ ಅಂಗಡಿಯ ಬಳಿ ಯಾರೋ ಒಬ್ಬ ಅಸಾಮಿ ಆತನ ಇರುವಿಕೆಯನ್ನು ಮರೆ ಮಾಚುತ್ತಾ ಕತ್ತಲ್ಲಲ್ಲಿ ಕುಳಿತುಕೊಂಡಿದ್ದವನ ಬಳಿ ಹೋದಾಗ ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿರುತ್ತಾರೆ. ಅತನನ್ನು ಸುತ್ತುವರಿದು ಹಿಡಿದುಕೊಂಡು  ಹೆಸರು ವಿಳಾಸ ಕೇಳಿದಾಗ ಆತನ ಹೆಸರು ಶ್ರೀನಿವಾಸ, 27 ವರ್ಷ, ಸಿದ್ದರೆಡ್ಡಹಳ್ಳಿ ಗ್ರಾಮವೆಂದು ತಿಳಿಸಿರುದ್ದು, ಆ ವೇಳೆಯಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲಾಗಿ ಸರಿಯಾದ ಸಮಂಜಸವಾದ ಉತ್ತರ ನೀಡದೆ ಇದ್ದರಿಂದ ಕಳವು ಮಾಡಲು ಪ್ರಯತ್ನಿಸುತ್ತಿರುವುದಾಗಿ ಅನುಮಾನ ಬಂದು ಆತನ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s