ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ

ಕೆ.ಜಿ.ಎಫ್ : ಕಾಣೆಯಾಗಿರುವ ಮಕ್ಕಳ ಸಂರಕ್ಷಣೆಗೆ ಸಹಕರಿಸಿ, ಎಸ್ಪಿ ದಿವ್ಯಾ ಗೋಪಿನಾಥ್

ಕಾಣಿಯಾಗಿರುವ ಮಕ್ಕಳ ಸಂರಕ್ಷಣೆಯ ಕುರಿತು ಪೊಲೀಸರೊಂದಿಗೆ ಮಕ್ಕಳ ಪೋಷಣಾ ಸಂಸ್ಥೆಗಳವರು, ಸಾರ್ವಜನಿಕರು ಜವಾಬ್ದಾರಿಯುತವಾಗಿ ಸಹಕರಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ|| ದಿವ್ಯಾ ವಿ.ಗೋಪಿನಾಥ್ ಅವರು ಕರೆ ನೀಡಿದರು.

ಅವರು ಕೆಜಿಎಫ್ ಪೊಲೀಸ್ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ, ಕಾಣೆಯಾಗಿರುವ ಮಕ್ಕಳ ಸಂರಕ್ಷಣೆಯ ಕುರಿತು, ಅರಿವು ಮೂಡಿಸುವ ಆಪರೇಷನ್ ಸ್ಮೈಲ್-೨ ವಿಶೇಷ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ದಿವ್ಯಾ ವಿ. ಗೋಪಿನಾಥ್ ಅವರು ಮಾತನಾಡಿದರು.

ಮಕ್ಕಳ ಕಳ್ಳಸಾಗಾಣಿಕೆ, ಕಾಣೆಯಾಗುವ ಮಕ್ಕಳ ಸಂರಕ್ಷಣೆ ಸಂಬಂಧ ಕ್ಷೀಪ್ರವಾಗಿ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಮಕ್ಕಳನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಸಂಬಂಧಪಟ್ಟ ಪೋಷಕರಿಗೆ ಒಪ್ಪಿಸಲು ಸಾಧ್ಯವಾಗುವುದೆಂದರು. ಮಕ್ಕಳ ಕಳ್ಳಸಾಗಾಣಿಕೆಯನ್ನು ತಡೆಯಲು, ಕಾಣೆಯಾದ ಮಕ್ಕಳ ಸಂರಕ್ಷಣೆ ಸಂಬಂಧ ಪೋಷಕರು, ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳವರು ಮತ್ತು ಇತರೆ ಇಲಾಖೆಗಳ ಸಹಕಾರದಿಂದಲೇ ಸಾಧ್ಯ, ಮಕ್ಕಳ ರಕ್ಷಣೆಗಾಗಿ, ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅತ್ಯವಶ್ಯಕವಾಗಿದೆಯೆಂದರು. ಮಕ್ಕಳ ರಕ್ಷಣೆಗೆ ಇಲ್ಲಿನ ಪೊಲೀಸ್ ಅಧಿಕಾರಿಗಳು ಕಾಣೆಯಾದ ಮಕ್ಕಳ ಪತ್ತೆ ಕಾರ್ಯಾಚರಣೆಯನ್ನು ಕ್ಷಿಪ್ರವಾಗಿ ನಡೆಸುವುದರ ಬಗ್ಗೆ ಅಗತ್ಯ ಕ್ರಮವಿಡುವಂತೆ ಎಸ್ಪಿ ಡಾ|| ದಿವ್ಯಾ ವಿ. ಗೋಪಿನಾಥ್ ಅವರು ಸೂಚಿಸಿದರು.

ಕೆಜಿಎಫ್‌ನ ಬಾಲಮಂದಿರ ಅಧೀಕ್ಷಕರಾದ  ರೋಸ್‌ಲೀನ್ ಸತ್ಯ, ಅಶ್ವಥ್, ಶಿಕ್ಷಣಾಧಿಕಾರಿ ಶ್ರೀನಿವಾಸರೆಡ್ಡಿ, ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಸಂಸ್ಥೆಯ ಸಂರಕ್ಷಣಾಧಿಕಾರಿಗಳಾದ ಸರಸ್ವತಮ್ಮ, ನಿಕೋಲಸ್, ವಕೀಲೆ ಕಲೈಸೆಲ್ವಿ ಕಾರ್ಮಿಕ ನಿರೀಕ್ಷಕ ವಿಜಯಕುಮಾರ್ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಆರ್. ಜಗದೀಶ್, ದಿನೇಶ್ ಪಾಟೀಲ್ ರವರು ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಅಧಿಕಾರಿ, ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಪೋಷಣಾ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

ಮೊದಲಿಗೆ ಜಿ. ಮಮತ ಮತ್ತು  ಜಯಲಕ್ಷ್ಮೀ ಅವರುಗಳಿಂದ ಪ್ರಾರ್ಥನೆ, ಡಿ.ಸಿ.ಬಿ. ಪೊಲೀಸ್ ನಿರೀಕ್ಷಕರಾದ ಟಿ.ಎಂ. ಶಿವಕುಮಾರ್ ಅವರಿಂದ ಸ್ವಾಗತ, ಡಿ.ಸಿ.ಐ.ಬಿ. ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಾ ಅವರಿಂದ ಪ್ರಾಸ್ತಾವಿಕ ಭಾಷಣ, ಪೊಲೀಸ್ ಪೇದೆ ಭೀಮಸೇನೆ ಕಾಂಬ್ಳೇ ಅವರಿಂದ ನಿರೂಪಣೆ, ಪಿಎಸ್‌ಐ ರವಿಕುಮಾರ್ ಅವರಿಂದ ವಂದನೆಗಳಾದವು.

 

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s