ದಿನದ ಅಪರಾಧಗಳ ಪಕ್ಷಿನೋಟ 15ನೇ ಆಗಸ್ಟ್ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:14.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 15.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಈ ಘಟನೆಯು ಬೇತಮಂಗಲ ಪೊಲೀಸ್ ಠಾಣೆ ಸರಹದ್ದು, ಕೆ.ಜಿ.ಎಫ್‌-ಕ್ಯಾಸಂಬಳ್ಳ ಮುಖ್ಯ ರಸ್ತೆ, ರಾಮಾಪುರ ಬಳಿ ನಡೆದಿರುತ್ತದೆ.  ದಿನಾಂಕ: 11-08-2016 ರಂದು ರಾತ್ರಿ 09.40 ಗಂಟೆಯಲ್ಲಿ ದೂರುದಾರರಾದ ಶ್ರೀ ಮಂಜುನಾಥ ಬಿನ್ ಚಂದ್ರಯ್ಯಶೆಟ್ಟಿ, ವಾಸ: ಜಕ್ಕರಸನಕುಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ಇವರ ಮಕ್ಕಳಾದ ಚರಣ್ (23) ಮತ್ತು ಅನಿಲ್ (20) ಇವರುಗಳು ಕೆ.ಜಿ.ಎಫ್ ನಿಂದ ತನ್ನ ಊರಿಗೆ ಹೋಗಲು ದ್ವಿಚಕ್ರ ವಾಹನ ಹಿರೋ ಹೋಂಡ್ ಪ್ಯಾಷನ್ ಸಂಖ್ಯೆ: ಕೆಎ-08-ಎಲ್-2458 ರಲ್ಲಿ ಚರಣ್ ರವರು ಚಲಾಯಿಸಿಕೊಂಡು ಕೆ.ಜಿ.ಎಫ್ – ಕ್ಯಾಸಂಬಳ್ಳ ಮುಖ್ಯ ರಸ್ತೆ ರಾಮಾಪುರ ಬಳಿ ಹೋಗುತ್ತಿದ್ದಾಗ, ಟ್ರ್ಯಾಕ್ಟರ್ ಕೆಎ-08-2525 ಮತ್ತು ಅದರ ಟ್ರ್ಯಾಲಿ ನಂ.ಬಿ-2525ರ ಟ್ರಾಕ್ಟರ್ ಚಾಲಕನು ಟ್ರ್ಯಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರು ಕಡೆಯಿಂದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪ್ರಯುಕ್ತ ಚರಣ್ ಹಾಗೂ ಅನೀಲ್ ಇವರುಗಳಿಗೆ ರಕ್ತ ಗಾಯಗಳಾಗಿ, ಚರಣ್ ರವರಿಗೆ ವಿಕ್ಟೋರಿಯ ಆಸ್ಪತ್ರೆ ಹಾಗೂ ಅನೀಲ್ ರವರನ್ನು ಹಾಸ್ಮೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನವಜಾತ ಶಿಶುವನ್ನು ಬಿಸಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ ಗೋವಿಂದಪ್ಪ ಬಿನ್ ಉದ್ದಪ್ಪ, ವಯಸ್ಸು 34 ವರ್ಷ, ವಾಸ: ಕದಿರಿಗೌಡನಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ಇವರು ದಿನಾಂಕ. 14.08.2016 ರಂದು ಬೆಳಗ್ಗೆ 6.00 ಗಂಟೆ ಸಮಯದಲ್ಲಿ ತನ್ನ ಗ್ರಾಮದ ಹೊರಗಡೆ ಹೋಗಲು ಹೋಗುತ್ತಿದ್ದಾಗ ರಸ್ತೆಯ ಬದಿಯಲ್ಲಿ ಚರಂಡಿ ಕಾಲುವೆಯಲ್ಲಿ ಯಾವುದೊ ಮಗುವು ಅಳುವ ಶಬ್ದ ಕೇಳಿ ಅದರ ಹತ್ತಿರ ಹೋಗಿ ನೋಡಲಾಗಿ ಯಾವುದೊ ಆಗತಾನೆ ಜನಿಸಿದ ಗಂಡು ನವಜಾತ ಶಿಶುವೊಂದು ಬಿದ್ದಿದ್ದು, ಅದರ ಮೇಲೆ ಗಲೀಜು ಸಹ ಇದ್ದು ಯಾರೋ ಹೆಂಗಸು ಮಗುವಿನ ಜನನವನ್ನು ಮರೆಮಾಚುವ ಅಥವಾ ಬೇರೆ ಯಾವುದೋ ಕಾರಣಕ್ಕೆ ಕಾಲುವೆಗೆ ಎಸೆದು ಹೋಗಿರುತ್ತಾರೆಂತ ದೂರು.

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 14-08-2016 ರಂದು ಸಂಜೆ 04.40 ಗಂಟೆ ಸಮಯದಲ್ಲಿ ಠಾಣೆಗೆ ಬಂದ ದೂರವಾಣಿ ಮಾಹಿತಿಯ ಮೇರೆಗೆ ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ಜಿ.ಕೆ.ಮಧುಸೂದನ ಇವರು ತಮ್ಮ ಸಿಬ್ಬಂದಿಯೊಂದಿಗೆ ಸದರಿ ಠಾಣೆಯ ಸರಹದ್ದಿನಲ್ಲಿರುವ ಲೂರ್ದನಗರಕ್ಕೆ ಹೋಗಿ ನೋಡಲಾಗಿ ಒಂದು ಚಿಕ್ಕದಾದ ಗ್ಯಾಸ್ ಸಿಲಿಂಡರ್ ಹೊತ್ತಿ ಉರಿಯುತ್ತಿದ್ದು, ತಕ್ಷಣ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದು,  ಮನೆಯ ಒಳಗೆ ಹೋಗಿ ನೋಡಲಾಗಿ ಕೊಠಡಿಯಲ್ಲಿ ಅಕ್ರಮವಾಗಿ ಗೃಹಬಳಕೆಗೆ ಬಳಸುವಂತಹ ಸಿಲಿಂಡರ್ ಗಳನ್ನು ಆಂಡ್ರಸನ್ ಪೇಟೆ ಲೂರ್ದನಗರ ವಾಸಿ ಲೀನಸ್ ಎಂಬುವವರು ರೀಫಿಲ್ಲಿಂಗ್ ಮಾಡಿ, ಮಾರಾಟ ಮಾಡುತ್ತಿರುದಾಗಿ ತಿಳಿದು ಬಂದಿದ್ದು, ಘಟನಾ ಸ್ಥಳದಿಂದ ಅಂಗಡಿಯ ಮಾಲೀಕ ಲೀನಸ್ ಪರಾರಿಯಾಗಿದ್ದು, ಸದರಿಯವರ ವಿರುದ್ಧ ಪಿ.ಎಸ್.ಐ. ರವರೇ ಸ್ವತಃ ಕೇಸು ದಾಖಲು ಮಾಡಿರುತ್ತಾರೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s