ದಿನದ ಅಪರಾಧಗಳ ಪಕ್ಷಿನೋಟ 14 ನೇ ಆಗಸ್ಟ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:13.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 14.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 13.08.2016 ರಂದು ದೂರುದಾರರಾದ ಶ್ರೀ. ಚಂದ್ರಪ್ಪ ಬಿನ್‌ ಕೃಷ್ಣಪ್ಪ, ಕೊಮ್ಮೇನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:12.08.2016 ರಂದು ಸಂಜೆ ಸುಮಾರು  5-30 ಗಂಟೆ ಸಮುದಲ್ಲಿ ಆರೋಪಿ ಮಂಜುನಾಥ ರವರು ದೂರುದಾರರು ಸಾರಾಯಿ ಬಾಟಲು ಮಾರಾಟ ಮಾಡುತ್ತಾರೆಂದು  ಪೊಲೀಸ್‌ ರವರಿಗೆ ಮಾಹಿತಿ  ನೀಡಿರುತ್ತಾರೆಂದು ಅರೋಪಿಯನ್ನು ಈ ಬಗ್ಗೆ  ದೂರುದಾರರು ಆರೋಪಿಯನ್ನು ಕೇಳಿದ್ದಕ್ಕೆ ಆರೋಪಿ ಮಂಜುನಾಥ ರವರು ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್‌ ಟಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 13.08.2016 ರಂದು ದೂರುದಾರರಾದ ಶ್ರೀ. ರಮೇಶ್‌ ಬಿನ್‌ ಮುನಿವೆಂಕಟಪ್ಪ, ಬಡಮಾಕನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 12.08.2016 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ  ದೂರುದಾರರು ಮತ್ತು ಕೃಷ್ಣಪ್ಪ, ಬಾಬು, ಗಂಗರಾಜು ಇವರೆಲ್ಲಾರು ಬಡಮಾಕನಹಳ್ಳಿಯಿಂದ ದೊಡ್ಡ ವಲಗಮಾದಿ ಬಳಿ ಗಾರೆ ಕೆಲಸ ಮಾಡಲು ಟಾಟಾ ಎಸಿಇ ವಾಹನ ಸಂಖ್ಯೆ ಕೆಎ-08-5524 ರಲ್ಲಿ ಸಿಮೆಂಟ್ ಮೂಟೆಗಳನ್ನು ಹಾಕಿಕೊಂಡು ವಾಹನವನ್ನು ಚಲಾಯಿಸಿಕೊಂಡು ಕೆ.ಜಿ.ಎಫ್-ಬಂಗಾರಪೇಟೆ ಮುಖ್ಯ ರಸ್ತೆ ಫುಡ್ ಗೋಡನ್ ಬಳಿ ಹೋಗುತ್ತಿರುವಾಗ ಎದರುಗೆ ಬಂಗಾರಪೇಟೆ ಕಡೆಯಿಂದ ಆರೋಪಿಯು ಲಾರಿ ಸಂಖ್ಯೆ ಎಪಿ-26-ಟಿಬಿ-8999 ನು ಅತಿವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿಕೊಂಡು ಬಂದು ಟೆಂಪೊಗೆ ಡಿಕ್ಕಿ ಹೊಡೆದ ಪ್ರಯುಕ್ತ ಬಾಬು ಗಂಗರಾಜು ಎಂಬುವರಿಗೆ ರಕ್ತ ಗಾಯವಾಗಿರುತ್ತೆ,  ಆರೋಪಿಯು ಲಾರಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿರುತ್ತಾನೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s