ದಿನದ ಅಪರಾಧಗಳ ಪಕ್ಷಿನೋಟ 13.08.2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:12.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 13.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : 01

   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವುಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ:12.08.2016 ರಂದು ಸಂಜೆ 04.00 ಗಂಟೆಯಲ್ಲಿ ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಶ್ರೀ. ಚಂದ್ರ ಶೇಖರ್‌, ಹೆಡ್‌ ಕಾನ್ಸ್‌ಟೇಬಲ್  ಮತ್ತು ಶ್ರೀ. ರಮೇಶ್, ಹೆಡ್‌ ಕಾನ್ಸ್‌ಟೇಬಲ್  ರವರುಗಳು 2ನೇ ಎಂ.ಜಿ ಮಾರ್ಕೆಟ್ ಬಳಿ ಗಸ್ತಿನಲ್ಲಿರುವಾಗ 2ನೇ ಎಂಜಿ ಮಾರ್ಕೆಟ್ ಗುಜರಿ ಅಂಗಡಿಗಳ ಬಳಿ ಆರೋಪಿ ಶ್ರೀನಿವಾಸಲು ಬಿನ್ ಲೇಟ್ ನಾರಾಯಣಪ್ಪ, ೪೨ ವರ್ಷ, ಶಾಂತಿಪುರ ಗ್ರಾಮ, ಚಿತ್ತೂರು ಜಿಲ್ಲೆ ಅಂದ್ರ ಪ್ರದೇಶ ರವರು ಒಂದು ಕಪ್ಪು ಬಣ್ಣದ ಹೀರೋ ಯೂನಿಕಾರ್ನ್ ನಂಬರ್ ಪ್ಲೇಟ್ ಇಲ್ಲದ ದ್ವಿ ಚಕ್ರ ವಾಹನವನ್ನು ತಳ್ಳಿಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದವನನ್ನು ಹಿಡಿದು ವಿಚಾರಿಸಲಾಗಿ ವಾಹನದ ಬಗ್ಗೆ ಸಮಂಜಸವಾದ ಉತ್ತರ ನೀಡದೇ ಇರುವುದರಿಂದ ಹಾಗೂ ಸದರಿ ವಾಹನದ ಬಗ್ಗೆ ಅನುಮಾನ ಬಂದಿರುವುದರಿಂದ ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಮತ್ತು ದ್ವಿ ಚಕ್ರವಾಹನವನ್ನು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಹಾಜರ್ಪಡಿಸಿರುತ್ತಾರೆ.

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : 01

        ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:11.08.2016 ರಂದು ದೂರುದಾರರಾದ ಶ್ರೀಮತಿ ಈಶ್ವರಿ ಕೋಂ ದಯಾಳನ್, ಸಂಜಯಗಾಂಧಿನಗರ, ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ.  ದಿನಾಂಕ: 09.08.2016 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ದೂರುದಾರರ ಅಪ್ರಾಪ್ತ ಮಗಳು (ಹೆಸರು ಗೌಪ್ಯವಾಗಿರುತ್ತದೆ. ವಯಸ್ಸು 17 ವರ್ಷ) ತನ್ನ ವಾಸದ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದಾಗ, ಕೆ.ಜಿ.ಎಫ್.ನ ಚಾಂಪಿಯನ್ ರೀಫ್ಸ್ ನ ಇ.ಟಿ. ಬ್ಲಾಕ್ ನ ವಾಸಿಯಾದ ಸಂದೀಪ್ ರವರು ಇವರ ತಾಯಿ ಮತ್ತು ಅಣ್ಣಂದಿರ ಕುಮ್ಮಕ್ಕಿನಿಂದ ತನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆಂದು ದೂರು.

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :01

      ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:12.08.2016 ರಂದು ದೂರುದಾರರಾದ ಶ್ರೀ. ನಾಗರಾಜು ಬಿನ್‌. ಲಕ್ಷ್ಮಣಪ್ಪ, ಹುಣಸನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗನಾದ ಪ್ರದೀಪ್ ವಯಸ್ಸು 26 ವರ್ಷ ಎಂಬುವನು ಬಂಗಾರಪೇಟೆಯಲ್ಲಿ ಪಾಕೆಟ್ ಹಾಲು ಮಾರಾಟ ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ಸಾಲವನ್ನು ಮಾಡಿಕೊಂಡಿರುತ್ತಾನೆ. ದಿನಾಂಕ:13.07.2016 ರಂದು ಬೆಳಿಗ್ಗೆ ಸುಮಾರು 11.00 ಗಂಟೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮನೆಗೆ ವಾಪಸ್ಸು ಬಂದಿರುವುದಿಲ್ಲ, ದಿನಾಂಕ:12.08.2016 ರಂದು ಬೆಳಿಗ್ಗೆ ಸುಮಾರು 8.00 ಗಂಟೆಯಲ್ಲಿ ಅತ್ತಿಗಿರಿಕೊಪ್ಪ ಕರೆಯ ನೀಲಗಿರಿ ತೋಪಿನಲ್ಲಿ ಒಂದು ಹೆಣದ ಮೂಳೆಗಳು, ಬಟ್ಟೆಗಳು, ಪರಸು ದೊರತಿರುವುದಾಗಿ ಪರಸಿನಲ್ಲಿ ಪಾನ್ ಕಾರ್ಡ್, ಎ.ಟಿ.ಎಂ ಕಾರ್ಡ್ ದೊರತಿರುವುದಾಗಿ ತಿಳಿದಿದ್ದು ಬಂದು ನೋಡಿದಾಗ ನೀಲಗಿರಿ ತೋಪಿನಲ್ಲಿ ತಲೆ ಬುರುಡೆ,ಮೂಳೆಗಳು ಅಸ್ಥಿಪಂಜರ ಅಲ್ಲಲ್ಲಿ ಬಿದ್ದಿದ್ದು ವಿಷದ ಬಾಟಲ್ ಚಪ್ಪಲಿಗಳು, ಟೀ-ಶರ್ಟ್, ಪ್ಯಾಂಟ್ ಇದನ್ನು ನೋಡಿ ತನ್ನ ಮಗನದೆಂದು ಗುರ್ತಿಸಿರುವುದಾಗಿ ಈತನು ಸಾಲ ಮಾಡಿಕೊಂಡು ಸಾಲವನ್ನು ತೀರಿಸಲು ಆಗದೆ ಮನಸ್ಸಿಗೆ ಬೇಸರಗೊಂಡು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂತ ದೂರು.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s