ದಿನದ ಅಪರಾಧಗಳ ಪಕ್ಷಿನೋಟ 09ನೇ ಆಗಸ್ಟ್ 2016

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:08.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 09.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ :ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ :01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರಾದ ಶ್ರೀಮತಿ ಸರಸಮ್ಮ ಕೋಂ ವೆಂಕಟೇಶಪ್ಪ, ಮಂಚಹಳ್ಳಿ ಗ್ರಾಮ  ಮತ್ತು ಆರೋಪಿಗಳಾದ ಮಾವ ದೊಡ್ಡವೆಂಕಟರಾಮಪ್ಪ, ಅತ್ತೆ ಮಂಗಮ್ಮ, ಮೈದಂದಿರಾದ ಶ್ರೀರಾಮ, ಆನಂದ  ರವರಿಗೆ ಹಳೇ ಮನೆಯ ವಿಚಾರದಲ್ಲಿ  ಸುಮಾರು 6 ತಿಂಗಳಿಂದ ತಕರಾರು ಇದ್ದು, ಆಗಾಗ ಗಲಾಟೆಗಳು ನಡೆದಿದ್ದು,  ಈ ವಿಚಾರವಾಗಿ ದಿನಾಂಕ: 07-08-2016 ರಂದು ರಾತ್ರಿ 7.30 ಗಂಟೆಯ್ಲಲಿ ದೂರುದಾರರು ಮತ್ತು ಅವರ ತಂದೆ, ಮಕ್ಕಳು ಮನೆಯ್ಲಲಿದ್ದಾಗ ದೂರುದಾರರ ಮೇಲೆ ಆರೋಪಿಗಳು ಜಗಳಕ್ಕೆ ಬಂದು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ ಹಾಗೂ ದೂರುದಾರರ ಗಂಡ ವೆಂಕಟೇಶಪ್ಪ ರವರಿಗೂ ಸಹ  ಹೊಡೆದಿರುತ್ತಾರೆ.

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

      ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ರೇಖಾ, ಇ.ಟಿ ಬ್ಲಾಕ್, ಚಾಂಪಿಯನ್ ರೀಪ್ಸ್ ರವರು 05 ವರ್ಷಗಳ ಹಿಂದೆ ಪ್ರವೀಣ್ ರವರೊಂದಿಗೆ ಪ್ರೇಮ ವಿವಾಹವಾಗಿದ್ದು  ಮದುವೆಯಾದಾಗಿನಿಂದಲೂ ದೂರುದಾರರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು ಹಾಗೂ ಒಂದು ಲಕ್ಷ ರೂ. ಹಣವನ್ನು ತೆಗೆದುಕೊಂಡು ಬರುವಂತೆ ಗಲಾಟೆ ಮಾಡಿ ಹೊಡೆದು ಕಿರುಕುಳ ನೀಡುರುತ್ತಾನೆ. ದಿನಾಂಕ:08-08-2016 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ದೂರುದಾರರು  ಚಾಂಪಿಯನ್ ರೀಪ್ಸ್‌ನ  ಡಬ್ಲ್ಯೂ.ಟಿ. ಬ್ಲಾಕಿನಲ್ಲಿರುವ ತವರು ಮನೆಯಲ್ಲಿ ತನ್ನ ತಾಯಿಯೊಂದಿಗೆ ಇರುವಾಗ ತನ್ನ ಗಂಡ ಪ್ರವೀಣ್ ರವರು ಏಕಾಏಕಿ ಬಂದು ಸಾಯಿಸುವ ಉದ್ದೇಶದಿಂದ   ಕತ್ತಿಯಿಂದ ದೂರುದಾರರ ತಲೆಯ ಎಡಬಾಗಕ್ಕೆ ಹಾಗೂ ಎರಡು ಕೈಗಳನ್ನು ಅಡ್ಡ ಇಟ್ಟಾಗ ಎರಡೂ ಕೈಗಳ ಅಂಗೈಗಳು ಕತ್ತಿರಿಸಿದಂತಹ ರಕ್ತಗಾಯ ಪಡಿಸಿರುತ್ತಾನೆ. ತಡೆಯಲು ಬಂದ ದೂರುದಾರರ ತಾಯಿಯ ತಲೆಗೆ ಹೊಡೆದು ತೀವ್ರ ರಕ್ತಗಾಯಪಡಿಸಿರುತ್ತಾನೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : 01

       ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 08-08-2016 ರಂದು  ರಾಬರ್ಟಸನ್ ಪೇಟೆಯ ವೃತ್ತದ ಸಿ.ಪಿ.ಐ ಶ್ರೀ. ಜಗದೀಶ್,  ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಪಿ.ಎಸ್ ಐ ಶ್ರೀ. ಮದೂಸೂದನ್ ಮತ್ತು ಸಿಬ್ಬಂದಿಯವರು ದಿನಾಂಕ 08.08.2016 ರಂದು ಸಂಜೆ  5.00 ಗಂಟೆ ಸಮಯದಲ್ಲಿ ಬೆನ್ನವಾರ ಗ್ರಾಮದ ಸಮೀಪದ ಮಾವಿನ ತೋಪಿನಲ್ಲಿ ಜೂಜಾಟ ಆಡುತ್ತಿದ್ದ 5 ಜನ ಆರೋಪಿಗಳಾದ ೧. ನರೇಶ್ ಬಿನ್ ಮುನಿರಾಜು, ೨೮ ವರ್ಷ,  ೨. ವೆಂಕಟೇಶಪ್ಹಪ ಬಿನ್ಣ ನಾರಾಯಣಪ್ವಪ, ೪೦ ವರ್ಷ,  ೩. ರಾಜ ಬಿನ್ ಪೆರುಮಾಳ್, ೬೦ ವರ್ಷ, ೪. ಶಿವಕುಮಾರ್‍ ಬಿನ್ ರಾಮಪ್ಪ, ೩೫ ವರ್ಷ, ೫. ರಮೇಶ್ ಬಿನ್ ಚಿನ್ನಕುಟ್ಟಿ ರವರುಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಮೂಲಕ ಅಂದರ್- ಬಾಹರ್ ಎಂದು ಹೇಳಿಕೊಂಡು ಜೂಜಾಡುತ್ತಿದ್ದವರನ್ನು ಹಿಡಿಯಲು ಪ್ರಯತ್ನಿಸಿದಾಗ ಇಬ್ಬರು ಪರಾರಿಯಾಗಿದ್ದು, ಉಳಿದ 03 ಜನ  ಆಸಾಮಿಗಳಾದ ನರೇಶ್, ವೆಂಕಟರಾಮಪ್ಪ,  ರಾಜ @ ರಾಜಪ್ಪ (ಎಲ್ಲಾರು ಬೆನ್ನವಾರ ಗ್ರಾಮ) ರವರನ್ನು ಹಿಡಿದು,  ಆಟಕ್ಕೆ ಪಣವಾಗಿಟ್ಟಿದ್ದ ಹಣ ಒಟ್ಟು 7165   ರೂಗಳನ್ನು, 52 ಇಸ್ಪೀಟ್ ಕಾರ್ಡಗಳನ್ನು& 02 ದ್ವಿ-ಚಕ್ರ ವಾಹನಗಳಾದ TN-42, Y-9510 & AP-04 J-3519 ಅನ್ನು  ಪಂಚರ ಸಮಕ್ಷಮದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ.

-ರಸ್ತೆ ಅಪಘಾತಗಳು : 01

        ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ  10-07-2016 ರಂದು  ಸಂಜೆ 6.30  ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀ. ಯೇಸುದಾಸ್, ೬ನೇ ಕ್ರಾಸ್ ಗೌತಂ ನಗರ, ರಾಬರ್ಟ್‌‌ಸನ್‌ಪೇಟೆ ರವರ  ತಾಯಿ ಶ್ರೀಮತಿ ಗ್ರೇಸ್ ಮೇರಿ, ೬೦ ವರ್ಷ,  ರವರು ಚಾಮರಾಜಪೇಟೆ ಸರ್ಕಲ್ ಬಳಿ ಇರುವ ಪ್ಲೋರ್ ಮಿಲ್ ನಿಂದ ವಾಪಸ್ ನಡೆದುಕೊಂಡು ಬ್ಯಾತಲೋಮಿಯಾ ತೆಲುಗು ಚರ್ಚ್  ಮುಂಭಾಗದ ರಸ್ತೆಯಲ್ಲಿ ಬರುತ್ತಿದ್ದಾಗ ರಾಬರ್ಟಸನ್ ಪೇಟೆ ಕಡೆಯಿಂದ ಆಂಡ್ರಸನ್ ಪೇಟೆ ಕಡೆಗೆ ಬರುತ್ತಿದ್ದ ದ್ವಿ-ಚಕ್ರ ವಾಹನ ಸಂಖ್ಯೆ CKQ-4095   ಸವಾರ ತನ್ನ ವಾಹನವನ್ನು  ಅತಿವೇಗ &  ಅಜಾಗರೂಕತೆಯಿಂದ  ಚಲಾಯಿಸಿ ದೂರುದಾರರ ತಾಯಿಗೆ ಡಿಕ್ಕಿ ಹೊಡೆದ ಪರಿಣಾಮ, ಗ್ರೇಸ್ ಮೇರಿ ರವರ ಎರಡು ಕಾಲುಗಳಿಗೆ ರಕ್ತಗಾಯಗಳಾಗಿರುತ್ತದೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ನಾಶಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ;08.08.2016 ರಂದು ದೂರುದಾರರಾದ ಚಂದ್ರಶೇಖರ್‍ ರೆಡ್ಡಿ, 33 ವರ್ಷ, ೩ನೇ ಕ್ರಾಸ್, ದಿನ್ನೆ ರೂಪೇನ ಅಗ್ರಹಾರ, ಬೆಂಗಳೂರು ರವರು  ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:16.03.2013 ರಂದು ಬೂದಿಕೋಟೆ ಗ್ರಾಮದ ಖಾತೆ ನಂ- 205 ರ ಸ್ವತ್ತನ್ನು ಶ್ರೀಮತಿ ಫರೀದಾ ಬೇಗಂ ರವರಿಂದ ಖರೀದಿಸಿ, ಸ್ವತ್ತಿನ ಖಾತೆಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ದೂರುದಾರರೇ ಕಂದಾಯವನ್ನು ಪಾವತಿಸಿಕೊಂಡು ಸ್ವತ್ತಿನ ಅನುಭವದಲ್ಲಿದ್ದು, ಸದರಿ ಸ್ವತ್ತಿನ ಉಸ್ತುವಾರಿಯನ್ನು ನೋಡಿಕೊಳ್ಳಲು ದಿನ್ನಕೊತ್ತೂರು ಗ್ರಾಮದ ವಾಸಿ ಶ್ರೀರಾಮರೆಡ್ಡಿ ರವರಿಗೆ ವಹಿಸಿರುತ್ತಾರೆ, ದಿನಾಂಕ: 04.08.2016 ರಂದು ರಾತ್ರಿ  8-00 ಗಂಟೆ ಸಮಯದಲ್ಲಿ ಆರೋಪಿಗಳಾದ  ಆ1 ಪರೀದಾಬೇಗಂ ಮತ್ತು ಆಕೆಯ ಮಕ್ಕಳಾದ  ಆ2-ನುಸ್ರತ್, ಆ3-ರೇಶ್ಮಾ, ಆ4-ಮುಬಾರಕ್, ಹಾಗೂ ಆ5-ನೂರುಲ್ಲಾ ಷರೀಪ್ (ಬೂದಿಕೋಟೆ) ರವರು ಉದ್ದೇಶ ಪೂರ್ವಕವಾಗಿ ದೂರುದಾರರಿಗೆ ಸೇರಿದ ಮನೆಯ ಬೀಗವನ್ನು ಹೊಡೆದು ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಸುಮಾರು 2 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ನಾಶಪಡಿಸಿರುತ್ತಾರೆ.

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s