ದಿನದ ಅಪರಾಧಗಳ ಪಕ್ಷಿನೋಟ 06 ನೇ ಆಗಸ್ಟ್‌ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 06.08.2016 ರಂದು ಬೆಳ್ಳಿಗ್ಗೆ 10.00 ಗಂಟೆಯಿಂದ ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : 01

ಬೆಮೆಲ್‌‌ ನಗರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 06.08.2016 ರಂದು ದೂರುದಾರರಾದ ಶ್ರೀಮತಿ ಸುಮಿತ್ರಾ ಕೋಂ ಮುನಿರಾಜು, ದೊಡ್ಡೂರು ಕರಪನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗಳಾದ 17 ವರ್ಷ ವಯಸ್ಸಿನ (ಹೆಸರು ಬದಲಾವಣೆ) ರವರು ದಿನಾಂಕ:01.08.2016 ರಂದು ಬೆಳಿಗ್ಗೆ 9.30 ಗಂಟೆಗೆ ತನ್ನ ಮನೆಯಿಂದ ಕೆ.ಜಿ.ಎಫ್ ನಲ್ಲಿರುವ ಎಪ್.ಜಿ.ಸಿ  ಕಾಲೇಜಿಗೆ ಹೋಗಿಬರುವುದಾಗಿ ಹೇಳಿ ಹೋದವಳು ಮನೆಗೆ ವಾಪಸ್ ಬಂದಿರುವುದಿಲ್ಲ, ದೂರುದಾರರು ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ.

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 06.08.2016 ರಂದು ರಂದು ದೂರುದಾರರಾದ ಶ್ರೀಮತಿ.ರೇಮಾ ಕೋಂ ವಿಜಯಕುಮಾರ್‌, ನಂ 878, 6 ನೇ ಕ್ರಾಸ್‌, ರಾಬ‌ರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ಮತ್ತು ಈಕೆಯ ಮಗಳಾದ ಆರ್.ರೋಷಣಿ ರವರೊಂದಿಗೆ ಎಂ.ಜಿ. ಮಾರ್ಕೆಟ್ ನಲ್ಲಿರುವ ಅಂಗಡಿ ಬಳಿಗೆ ಹೋಗಿ ವಿನೋದ್ ಕುಮಾರ್ ರವರನ್ನು ಹಣದ ವಿಚಾರವಾಗಿ ಮಾತನಾಡಲು ಹೋದಾಗ ಸದರಿ ಆರೋಪಿ ವಿನೋದ್ ಕುಮಾರ್ ಎಂಬುವನು ರೇಮಾ ಮತ್ತು ಈಕೆಯ ಮಗಳಾದ ರೋಷಣಿ ಎಂಬುವವರನ್ನು ಕೈಗಳಿಂದ ಹೊಡೆದು, ಕೆಟ್ಟ ಮಾತುಗಳಿಂದ ಬೈದು, ಅಂಗಡಿಯ ಬಳಿ ಬಂದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿ, ಆರೋಪಿ ವಿನೋದ್ ಕುಮಾರ್ ರವರು ರೇಮಾ ರವರ ಸೀರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ.

-ಮನುಷ್ಯ ನಾಪತ್ತೆ:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರದ ಪ್ರಕರಣ ದಖಲಾಗಿರುತ್ತದೆ. ದಿನಾಂಕ 06.08.2016 ರಂದು ದೂರುದಾರರಾದ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ , ಬೀರಂಡಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ಬಂಗಾರಪೇಟೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದ ರಾಜಶೇಖರ್ ಬಿನ್ ರಾಮದಾಸ್, ವಯಸ್ಸು 55 ವರ್ಷ, ರವರಿಗೆ ದಿನಾಂಕ 05.08.2016 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ 2-3 ಬಾರಿ ವಾಂತಿಯಾಗಿದ್ದ ಕಾರಣ ರಾಜಶೇಖರ್‍ ರವರನ್ನು ಚಿಕಿತ್ಸೆಗೆ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡಿಸುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಮೃತಹೊಂದಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s