ದಿನದ ಅಪರಾಧಗಳ ಪಕ್ಷಿನೋಟ 05 ನೇ ಆಗಸ್ಟ್‌ 2016

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:04.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 05.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ :ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು : 01

ರಾಬರ್ಟ್‌‌ಸನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 04.08.2016 ರಂದು ದೂರುದಾರರಾದ ಶ್ರೀ. ಶಿವಕುಮರ್‌ ಬಿನ್‌ ರಾಮಯ್ಯ, ಚಿನ್ನಕೋಟೆ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರು ಹಿರೋ ಹೊಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನ ಸಂಖ್ಯೆ K A 09 V 8190 ರ ವಾಹನವನ್ನು ಕೆ.ಜಿ.ಎಫ್ ನ್ಯಾಯಾಲಯದ  ಅವರಣದಲ್ಲಿ ನಿಲ್ಲಿಸಿ ನ್ಯಾಯಾಲಯ ಒಳಗೆ ಹೋಗಿ ಕೆಲಸ ಮುಗಿಸಿಕೊಂಡು ಸಂಜೆ 5.30 ಗಂಟೆ ಸಮಯದಲ್ಲಿ ಹೊರಗಡೆ ಬಂದು ದ್ವಿಚಕ್ರ ವಾಹನವನ್ನು ನೋಡಲಾಗಿ ಯಾರೋ ಕಳ್ಳರು ಸದರಿ  ದ್ವಿಚಕ್ರ ವಾಹನ  ಕಳವು ಮಾಡಿಕೊಂಡು  ಹೋಗಿರುತ್ತಾರೆ. ಸದರಿ ವಾಹನದ ಮೌಲ್ಯ 20,000/ರೂಗಳಾಗಿರುತ್ತದೆ.

-ದೊಂಬಿ : ಇಲ್ಲ

-ಮೋಸ :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:05.08.2016 ರಂದು ದೂರುದಾರರಾದ ಶ್ರೀ. ರಮೇಶ್‌ ನಾಯ್ಡು, ಬಿನ್‌. ವೆಂಕಟಪ್ಪನಾಯ್ಡು, ಕಂಗಾಂಡ್ಲಹಳ್ಳಿ ಗ್ರಾಮ ನೀಡಿದ ದೂರಿನಲ್ಲಿ. ದಿನಾಂಕ.01.08.2016 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ದೂರುದಾರರ ಮನೆಯ ಬಳಿ ಯಾರೋ ಅಪರಿಚಿತ ವ್ಯಕ್ತಿಯು ಮೋಟರ್ ಸೈಕಲ್ ನಲ್ಲಿ ಬಂದು ನಿಮ್ಮ ಜಮೀನಿನಲ್ಲಿ ಟವರ್ ಅಳವಡಿಸುತ್ತೇವೆ ನಿಮಗೆ ತಿಂಗಳಿಗೆ 10 ಸಾವಿರ 2 ಲಕ್ಷ ಮುಂಗಡ ಹಣ ನೀಡುತ್ತೇವೆ ಎಂತ ಹೇಳಿ, ಸದರಿ ಅಪರಿಚಿತ ವ್ಯಕ್ತಿ ದೂರುದಾರರ ಜಮೀನಿಗೆ ಹೋಗಿ ಅಲ್ಲಿಲ್ಲಿ 2-3 ಕಡೆ ಗುಣಿಗಳನ್ನು ತೋಡಿ ನೆಟ್ ವರ್ಕ ಸಿಗುತ್ತಿಲ್ಲಾ ಬಂಗಾರ ಹಾಕಿದರೆ ನೆಟ್ ವರ್ಕ ಸಿಗುತ್ತೆ ಎಂತ ಹೇಳಿ ದೂರುದಾರರ ಬಳಿ ಇದ್ದ 2 ಕತ್ತಿನ ಸರ ಹಾಗೂ 2 ಉಂಗುರಗಳನ್ನು ಹಾಕಿದ್ದು, ಆ ಸಮಯದಲ್ಲಿ ನೆಟ್ ವರ್ಕ ಬರುತ್ತಿಲ್ಲ. ಇನ್ನು ಹೆಚ್ಚಿಗೆ ಬಂಗಾರ ಹಾಕಬೇಕೆಂತ ಹೇಳಿ ದೂರುದಾರರ ತಾಯಿ ರಾಜಮ್ಮ ರವರ ಬಳಿ ಇದ್ದ, ಮಾಂಗಲ್ಯ ಸರವನ್ನು ತೆಗೆದು ಗುಣಿಯಲ್ಲಿ ಹಾಕಿರುತ್ತಾರೆ. ಆರೋಪಿ ದೂರುದಾರರ ಬಳಿ ಬಂದು ಇನ್ನೊಬ್ಬರು ನಮ್ಮಆಫೀಸರ್ ಬರುತ್ತಿದ್ದರೆ ಅವರನ್ನು ಕರೆದುಕೊಂಡು ಬರುವುದಾಗಿ ಹೇಳಿ ನಂಬಿಸಿ ಗುಣಿಯಲ್ಲಿ ಹಾಕಿದಂತಹ ಬಂಗಾರದ ವಡವೆಗಳನ್ನುತೆಗದುಕೊಂಡು ಮೋಸ ಮಾಡಿ ಹೊರಟು ಹೋಗಿರುತ್ತಾರೆ. ಅದರ ಬೆಲೆ ಸುಮಾರು ರೂ 1,20,000/-ಗಳ ಬೆಲೆಬಾಳುವುದಾಗಿರುತ್ತೆ.

-ಹಲ್ಲೆ :ಇಲ್ಲ

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 04.08.2016 ರಂದು ದೂರುದಾರರಾದ ಶ್ರೀ. ಮುರಳಿ ಬಿನ್‌ ಆರುಮುಗಂ, ಬಿ ಎಂ. ರಸ್ತೆ ಆಂಡ್ರಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ:03.08.2016 ರಂದು ರಾತ್ರಿ ಸುಮಾರು 9.00 ಗಂಟೆ ಸಮಯದಲ್ಲಿ  ಭಾಸ್ಕರ್ ಮತ್ತು ಹೆಂಡತಿ ಶ್ರೀಮತಿ ಅನಿತ ಹಾಗೂ ಆಕೆಯ ಮಗ ಖದೀರ್ ರವರು ಆಟೋದಲ್ಲಿ ರಾಬರ್ಟ್ ಸನ್ ಪೇಟೆಯಿಂದ ಬಂದು ಗೌತಮ್ ನಗರದ 8ನೇ ಕ್ರಾಸ್ ಮುಖ್ಯ ರಸ್ತೆಯಲ್ಲಿ ಆಟೋದಿಂದ ಕೆಳಗೆ ಇಳಿದು ಆಟೋ ಚಾಲಕನಿಗೆ ಬಾಡಿಗೆ ಹಣ ಕೊಡುವಾಗ ರಾಬರ್ಟ ಸನ್ ಪೇಟೆ ಕಡೆಯಿಂದ ದ್ವಿ ಚಕ್ರ ವಾಹನ ಸಂಖ್ಯೆ KA 08 U-1702 ರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು. ರಸ್ತೆ ಬದಿಯಲ್ಲಿ ನಿಂತು ಕೊಂಡಿದ್ದ 4 ವರ್ಷದ ಖದೀರ್ ಗೆ ಡಿಕ್ಕಿ ಪಡಿಸಿದ್ದರಿಂದ ತಲೆ ಮತ್ತು ಹಣೆಯ ಭಾಗಕ್ಕೆ ರಕ್ತ ಘಾಯಗಳಾಗಿರುತ್ತೆ.  ಗಾಯಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : 01

ಚಾಂಪಿಯನ್‌‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.08.2016 ರಂದು ದೂರುದಾರರಾದ ಶ್ರೀ. ಸ್ಟ್ಯಾನ್ಲಿ ಬಿನ್‌ ಸಗಾಯರಾಜ್‌, ಡಿಎಆರ್‌ಆರ್‌. ಪೊಲೀಸ್‌ ವಸತಿ ಗೃಹ ಕೆ.ಜಿ.ಎಫ್‌ ರವರು ನೀಡಿದ ದೂರಿನಲ್ಲಿ. ದಿನಾಂಕ:01.08.2016 ರಂದು ರಾತ್ರಿ ಸುಮಾರು 20.30 ಗಂಟೆಯಲ್ಲಿ ದೂರುದಾರರು ಮನೆಯಲ್ಲಿ ಸಾಂಬಾರ್‌ನ್ನು  ಬಿಸಿ ಮಾಡಲು ಅಡುಗೆ ಕೋಣೆಯಲ್ಲಿದ್ದ ಸೀಮೆಎಣ್ಣೆ ಸ್ಟವ್ವನ್ನು ತೆಗದು ಸ್ಟವನ್ನು ಅಂಟಿಸಿದಾಗ ಜೋರಾಗಿ ಬೆಂಕಿ ಹತ್ತಿಕೊಂಡು ಸಗಾಯರಾಜ್‌ ರವರು ಧರಿಸಿದ್ದ ಬಟ್ಟೆಗಳಿಗೆ ಬೆಂಕಿ  ಅತ್ತಿಕೊಂಡು ಇತರೆ ಕಡೆಗಳಲ್ಲಿ ಸುಟ್ಟಗಾಯಗಳಾಗಿದ್ದು, ಅವರನ್ನು ಚಿಕಿತ್ಸೆ ಸಲುವಾಗಿ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಪಡಿಸುತ್ತಿದ್ದು,  ದಿನಾಂಕ:04.08.2016 ರಂದು ಮದ್ಯಾಹ್ನ 3.15 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಗಾಯ್ ರಾಜ್ 45 ವರ್ಷ ರವರು ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

 

 

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s