ದಿನದ ಅಪರಾಧಗಳ ಪಕ್ಷಿನೋಟ 03ನೇ ಆಗಸ್ಟ್ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 03.08.2016 ರಂದು ಬೆಳ್ಳಿಗ್ಗೆ 10.00 ಗಂಟೆಯಿಂದ ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು :ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:03.08.2016 ರಂದು ದೂರುದಾರರಾದ ಶ್ರೀಮತಿ. ಸರಣ್ಯ ಕೋಂ ಮಂಜುನಾಥ, ವಿಜಯನಗರ ಬಂಗಾರಪೇಟೆ ರವರು ನೀಡಿದ ದೂರಿಲ್ಲಿ. ದಿನಾಂಕ 10.07.2013 ರಂದು ಆರೋಪಿ ಮಂಜುನಾಥ್‌ ರವರ ಜೊತೆ ಸರಣ್ಯ ರವರುನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಮದುವೆಯ ಕಾಲದಲ್ಲಿ ವಿವಿದ ಬಂಗಾರದ ವಡವೆಗಳು ನಗದು ಹಣ 50,000/-ಗಳನ್ನು ಕೊಟ್ಟಿರುತ್ತಾರೆ.  ಮದುವೆಯಾದ ಒಂದು ತಿಂಗಳ ನಂತರ ದೂರುದಾರರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಗಳನ್ನು ನೀಡುತ್ತಿದ್ದು, ನಂತರ ಆರೋಪಿ ಮಂಜುನಾಥ ರವರು ಮತ್ತು ಅವರ ಸಂಬಂದಿಗಳಾದ ನಾಗರಾಜ್‌ , ರೋಜ, ಆಶಾ, ನೇತ್ರಾವತಿ ರವರುಗಳು ಸಹ 2 ಲಕ್ಷ ರೂಗಳ ವರದಕ್ಷಣೆ ಹಣವನ್ನು ತವರು ಮನೆಯಲ್ಲಿ ತೆಗೆದುಕೊಂಡು ಬಾ ಎಂತ ಪ್ರತಿ ದಿನ ಕಿರುಕುಳವನ್ನು ನೀಡಿ ಹೊಡೆದು, ಕೆಟ್ಟ ಮಾತುಗಳಿಂದ ಬೈದು, ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ದ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 03.08.2016 ರಂದು ದೂರುದಾರರಾದ ಶ್ರೀ. ರಾಜಪ್ಪ ಬಿನ್‌ ವೆಂಕಟೇಶಪ್ಪ, ಕೀರ್ತಿಕುಪ್ಪ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗಳಾದ  ಚಂದ್ರಿಕಾ, 18 ವರ್ಷ ಎಂಬುವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 02.08.2016 ರಂದು ಮದ್ಯಾಹ್ನ 1.30 ಗಂಟೆಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಕೆಯ ವೇಲ್ ನಿಂದ ಸಿಲೀಂಗ್ ಪ್ಯಾನ್ ಗೆ ನೇಣುಹಾಕಿಕೊಂಡಿದ್ದು, ತಕ್ಷಣ ಆಕೆಯನ್ನು ಕೋಲಾರ ಆರ್ ಎಲ್ ಜಾಲಪ್ಪ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ರಾತ್ರಿ ಸುಮಾರು 11-40 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s