ದಿನದ ಅಪರಾಧಗಳ ಪಕ್ಷಿನೋಟ01 ನೇ ಆಗಸ್ಟ್ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:31.07.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 01.08.2016 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 31.07.2016 ರಂದು ದೂರುದಾರರಾದ ಶ್ರೀ.  ಸಂದಿಲ್‌ ಕುಮಾರ್‌ ಬಿನ್‌ ಪಾಡವಿತ್ತನ್‌, ನ್ಯೂ ಎಲೆಕ್ಟ್ರಲ್‌ ಲೈನ್‌, ಉರಿಗಾಂ ರವರು ನೀಡಿದ ದೂರಿನಲ್ಲಿ ದಿನಾಂಕ 11.05.2016 ರಂದು ಚಿನ್ನ ಮತ್ತು  ಬೆಳ್ಳಿಯ  ಒಡವೆಗಳನ್ನು  ಮನೆಯ  ಬೀರುವಿನಲ್ಲಿಟ್ಟಿದ್ದು,  ದಿನಾಂಕ 31.07.2016  ರಂದು  ಬೆಳಿಗ್ಗೆ   ದೂರುದಾರರು ಬೀರುವನ್ನು ತೆರೆದು  ನೋಡಲಾಗಿ  ಅದರಲ್ಲಿಟ್ಟಿದ್ದ  ಸುಮಾರು 104 ಗ್ರಾಂ  ತೂಕದ ಚಿನ್ನದ  ಒಡವೆ  ಮತ್ತು 50  ಗ್ರಾಂ  ಬೆಳ್ಳಿಯ  ಒಡವೆಗಳನ್ನು ಯಾರೋ ಕಳ್ಳರು ಬೀರುವಿನ ಮೇಲಿಟ್ಟಿದ್ದ ಬೀಗದ  ಕೀ ಗಳನ್ನು ಬಳಸಿ ಕಳವು ಮಾಡಿಕೊಂಡು  ಹೋಗಿರುತ್ತಾರೆ.  ಸದರಿ ಒಡವೆಗಳ ಅಂದಾಜು ರೂ 2,30,000/-ಗಳಾಗಿರುತ್ತದೆ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ :01

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:31.07.2016 ರಂದು ದೂರುದಾರರಾದ ಶ್ರೀ. ಎಡ್ವ್‌ನ್‌ ಬಿನ್‌ ಉತ್ತರಿನಾಥನ್‌ ಮಸ್ಕಂ , ಇ. ಬ್ಲಾಕ್‌ ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲ ದೂರುದಾರರು ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಆರ್ ಬ್ಲಾಕ್ ಸಮೀಪ ಹೋಗುತ್ತಿದ್ದಾಗ ಆರೋಪಿಗಳಾದ ನವೀನ್‌ ಮತ್ತು ಇತರರು ದೂರುದಾರರು ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿ ಏಕೆ ನೀನು ನಮ್ಮ ಲೈನ್‌ ಕಡೆ ಬರುತ್ತೀಯ ಎಂದು ಕೆಟ್ಟ ಮಾತುಗಳಿಂದ ಬೈದು ಕೈಯಿಂದ ತುಟಿಯ ಮೇಲೆ ಹೊಡೆದು,  ರಕ್ತ ಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿ, ದ್ವಿಚಕ್ರ ವಾಹನಕ್ಕೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿರುತ್ತಾರೆ.

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s