ದಿನದ ಅಪರಾಧಗಳ ಪಕ್ಷಿನೋಟ 27 ನೇ ಜುಲೈ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 27.07.2016 ರಂದು ಬೆಳ್ಳಿಗ್ಗೆ 10.00 ಗಂಟೆಯಿಂದ ದಿನಾಂಕ 27.07.2016 ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 27.07.2016 ರಂದು ದೂರುದಾರರಾದ ಶ್ರೀ. ಸರಸ್ವತಿ ಕೋಂ. ನಾರಾಯಣಸ್ವಾಮಿ, ಮಂಜುನಾಥ ನಗರ, ಉರಿಗಾಂ ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ23.07.2016 ರಂದು  ದೂರುದಾರರು ಬೆಳಿಗ್ಗೆ 06.30 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿ, ದಿನಾಂಕ 26.07.2016 ರಂದು ರಾತ್ರಿ 7.45 ಗಂಟೆಗೆ ಬೆಂಗಳೂರಿನಿಂದ ಅವರ ವಾಸದ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಬಾಗಿಲಿಗೆ ಹಾಕಿದ್ದ ಗ್ರಿಲಿನ ಬೀಗವನ್ನು ಮುರಿದು, ಒಳಗೆ ಪ್ರವೇಶ ಮಾಡಿ, ಮನೆಯ ಬೆಡ್ ರೂಮ್ ನಲ್ಲಿಟ್ಟಿದ್ದ, ಬೀರು ಮತ್ತು ದೇವರ ಕೋಣೆಯಲ್ಲಿ ಇಟ್ಟಿದ್ದ, 150 ಗ್ರಾಂ ಬಂಗಾರದ ವಡೆವೆಗಳು, 250 ಗ್ರಾಂ ಬೆಳ್ಳಿ ಸಾಮಗ್ರಗಳನ್ನು, ನಗದು ಹಣ ರೂ 20000/-ಗಳು  ಒಂದು ನೋಕಿಯಾ ಮೊಬೈಲ್‌ ಒಟ್ಟು ಸುಮಾರು ರೂ 2,02,000/-ಗಳ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಕೃತ್ಯವು ರಾಬರ್ಟ್‌‌ಸನ್‌ಪೇಟೆಯ ಮಂಜುನಾಥ ನಗರದ ಬಡವಾಣೆಯಲ್ಲಿ ನಡೆದಿರುತ್ತದೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ :01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:27.07.2016 ರಂದು  ದೂರುದಾರಾದ ಶ್ರೀ. ಯಲ್ಲಪ್ಪ ಬಿನ್‌  ಮುನಿವೆಂಕಟಪ್ಪ, ಕದರಿನಾತಂ ರವರು ನೀಡಿದ ದೂರಿನಲ್ಲಿ ದೂರುದಾರರ ಮಗನಾದ ವೆಂಕಟೇಶ್ ರವರು ಅವರ ಕುರಿಗಳನ್ನು ಕಾಡಿನಲ್ಲಿ ಮೇಯಿಸಲು ಹೋಗುತ್ತಿದ್ದಾಗ, ಆರೋಪಿಗಳಾದ  ಬೈರೋಜಿರಾವ್, ಮತ್ತು ಮಾನೀಬಯಿ ರವರು  ಏಕಾಏಕಿ ವೆಂಕಟೇಶ್ ರವರೊಂದಿಗೆ ಜಗಳ ಕಾದು, ಕುರಿಗಳನ್ನು ಏಕೆ ನಮ್ಮ ಜಮೀನಿನಲ್ಲಿ ಮೇಯಿಸಿದ್ದು, ಎಂದು ಕೇಳಿ ಕೆಟ್ಟ ಮತುಗಳಿಂದ ಬೈದು ಕಲ್ಲಿನಿಂದ ಮತ್ತು ದೊಣ್ಣೆಯಿಂದ ವೆಂಕಟೇಶ್ ರವರಿಗೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ. .

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:27.07.2016 ರಂದು  ದೂರುದಾರಾದ ಶ್ರೀಮತಿ ಸುಮಿತ್ರಾ ಕೋಂ. ಮಂಜುನಾಥ ಕಳವಂಚಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 12.06.2013 ರಂದು ಆರೋಪಿ ಮಂಜುನಾಥ ರವರೊಂದಿಗೆ ಮದುವೆ ಮಾಡಿಕೊಂಡಿದ್ದು, ಮದುವೆಯ ಕಾಲದಲ್ಲಿ 10 ಸವರನ್ ಬಂಗಾರದ ವಡವೆಗಳು, ಬ್ರಾಸ್‌‌ಲೈಟ್, ಚೈನ್‌ ಇತ್ಯಾದಿಗಳನ್ನು ವಧು-ವರರಿಗೆ ಹಾಕಿದ್ದು, ಮದುವೆಯಾದಾಗಿನಿಂದಲೂ ಆರೋಪಿಗಳಾದ ಮಂಜುನಾಥ, ಮುರುಗಪ್ಪ, ಸಾಲಮ್ಮ ಮತ್ತು ವಿನಯ್ ಕುಮಾರ್ ರವರು ದೂರುದಾರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಾ ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬರುವಂತೆ ಪೀಡಿಸಿ  ಜಗಳ ಕಾದು, ಸಾಯಿಸುವುದಾಗಿ ಬೆದರಿಕೆ ಹಾಕಿ ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ದ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s