ದಿನದ ಅಪರಾಧಗಳ ಪಕ್ಷಿನೋಟ 24ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 24.07.2016 ರಂದು ಬೆಳ್ಳಿಗ್ಗೆ  10.00 ಗಂಟೆಯಿಂದ ದಿನಾಂಕ 24.07.2016 ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ-ಕೆ.ಜಿ.ಎಫ್‌ ರೈಲ್ವೆ ಹಳಿ, ಪಲವತ್ತಿಮ್ಮನಹಳ್ಳಿ ಬಳಿ ನಡೆದಿರುತ್ತದೆ. ದೂರುದಾರರಾದ ಶ್ರೀ. ಪಳನಿ, ಪಲವತ್ತಿಮ್ಮನಹಳ್ಳಿ ವಾಸಿರುವರು ದಿನಾಂಕ: 24.07.2016 ರಂದು ಬೆಳಿಗ್ಗೆ ಸುಮಾರು 6.00 ಗಂಟೆಯಲ್ಲಿ ಕೇರಿಯ ಜನ ಬಹಿರ್‍ ದೆಸೆಗೆ ಹೋದಾಗ ರೈಲ್ವೇ ಟ್ರಾಕ್ ಪಕ್ಕದಲ್ಲಿರುವ ಪೊದೆಯಲ್ಲಿ ಒಂದು ಹೆಂಗಸ್ಸು ಸತ್ತು ಬಿದ್ದಿರುತ್ತಾಳೆಂದು ಹೇಳಿಕೊಳ್ಳುತ್ತಿದ್ದನ್ನು ಕೇಳಿಸಿಕೊಂಡು ದೂರುದಾರರು ಹೋಗಿ ನೋಡಲಾಗಿ ಕೆ,ಜಿ,ಎಫ್ಗೆ ಹೋಗುವ ರೈಲ್ವೇ ಟ್ರಾಕ್ ಪಕ್ಕದಲ್ಲಿರುವ ಪೊದೆಯಲ್ಲಿ ಸುಮಾರು 30-35 ವರ್ಷ ವಯಸ್ಸಿನ ಒಬ್ಬ ಹೆಂಗಸು ಅಂಗಾತವಾಗಿ ಬಿದ್ದಿದ್ದು, ಕತ್ತಿನ ಬಳಿ ನೇಣಿನಿಂದ ಬಿಗಿದು ಸಾಯಿಸಿರುವಂತಹ ಕಪ್ಪಾಗಿರುವ ಗುರ್ತು ಕಂಡು ಬರುತ್ತಿದ್ದು ದಿನಾಂಕ:23.07.2016 ರಂದು ರಾತ್ರಿ ಈಕೆಯನ್ನು ಯಾರೂ ವ್ಯಕ್ತಿಗಳು ಕರೆದುಕೊಂಡು ಬಂದು ಯಾವುದೂ ಕಾರಣಕ್ಕೆ ಕತ್ತನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿರುವಂತೆ ಕಂಡು ಬಂದಿರುತ್ತದೆಂತ ದೂರು.

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ :ಇಲ್ಲ

-ಮೋಸ :ಇಲ್ಲ

-ಹಲ್ಲೆ :ಇಲ್ಲ

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೋಳಿ ಜೂಜಾಟಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:24.07.2016 ರಂದು ಬೆಳಿಗ್ಗೆ 7.30 ಗಂಟೆಯಲ್ಲಿ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ಸರಹದ್ದು ಸಾರ್ವಜನಿಕ ಸ್ಥಳವಾದ ಸ್ವಾಮಿನಾಥಪುರಂ ಬಡಾವಣೆಗೆ ಹೊಂದಿಕೊಂಡಿರುವ ಮುಳ್ಳಿನ ಪೊದೆಗಳಲ್ಲಿ ಕಾನೂನು ಬಾಹಿರವಾಗಿ ಕೋಳಿ ಪಂದ್ಯ(Cock Fight) ಜೂಜಾಟ ನಡೆಯುತ್ತಿರುವುದಾಗಿ, ಶ್ರೀ. ಜಗಧೀಸ್‌, ಸಿ.ಪಿ.ಐ. ರಾಬರ್ಟ್‌‌ನಸ್‌ಪೇಟೆ ವೃತ್ತ ರವರಿಗೆ ಮಾಹಿತಿ ಬಂದಿದ್ದು, ಸದರಿ ಕೋಳಿ ಪಂದ್ಯ ಜೂಜಾಟ ನಡೆಯುತ್ತಿರುವ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ನಡೆಸಿ, ಜೂಜಾಟ ಆಡುತ್ತಿರುವರ ವಿರುದ್ದ ಕಾನೂನು ರೀತ್ಯ ಪ್ರಕರಣ ದಾಖಲಿಸಿರುತ್ತಾರೆ.

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s