ದಿನದ ಅಪರಾಧಗಳ ಪಕ್ಷಿನೋಟ 22ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 21.07.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 22.07.2016 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 21.07.2016 ರಂದು ದೂರುದಾರರಾದ ಶ್ರೀ. ಜೋಸೈ ಬಿನ್‌ ವೇಲಾಯುದನ್‌, ವೇಮಗಲ್‌ ಕೋಲಾರ ರವರು ನೀಡಿದ ದೂರಿನಲ್ಲಿ, ದೂರುದಾರರು ಮಿತ್ಸುಬಿಷಿ ಕಂಪನಿಯನ್ನು ವೆಮಗಲ್ ಬಳಿ ಸ್ಥಾಪಿಸಿದ್ದು,  ಸದರಿ ಕಂಪನಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಲುವಾಗಿ ಕಂಪನಿಯಿಂದ ಕಾಲೇಜಿನ ಪ್ಲೇಸ್ಮೆಂಟ್  ಅಧಿಕಾರಿಯ ಕೋರಿಕೆ ಮೇರೆಗೆ  ಕೆಜಿಎಫ್  ನ ಸರ್ಕಾರಿ ಐಟಿಐ ಕಾಲೇಜಿಗೆ ಆಗಮಿಸಿ, ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಾಲೇಜಿನ ವಿಧ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನೀಡುತ್ತಿದ್ದ ಸಂಧರ್ಭದಲ್ಲಿ ಕೋಲಾರ ಜಿಲ್ಲಾ ಪಂಚಾಯ್ತಿ ಸದಸ್ಯರಾದ ವೆಂಕಟೇಶ್ ಮತ್ತು ಇತರೆ ಸುಮಾರು 100 ಜನರು ಅಕ್ರಮ ಗುಂಪು ಕಟ್ಟಿಕೊಂಡು ಕಾಲೇಜಿನ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿ ಕೆಟ್ಟ ಮಾತುಗಳಿಂದ ಬೈದು, ಹಲ್ಲೆ ಮಾಡಿ, ಪ್ರಾಣ ಬೆದರಿಕೆ  ಹಾಕಿರುತ್ತಾರೆ.

-ಮೋಸ :ಇಲ್ಲ

-ಹಲ್ಲೆ :02

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:21.07.2016 ರಂದು ದೂರುದಾರರಾದ ಶ್ರೀಮತಿ ಭಾರತಿ ಕೋಂ. ಚಂದ್ರಮೌಳಿ ಕರಡಗೂರು ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರಿಗೂ ಮತ್ತು ಅದೇ ಗ್ರಾಮದ ಶ್ರೀನಿವಾಸರೆಡ್ಡಿ ರವರಿಗೂ ಮನೆಯ ಪಕ್ಕದ ದಾರಿ ವಿಚಾರದಲ್ಲಿ ತಕರಾರುಗಳಿದ್ದು, ದಿನಾಂಕ:19.07.2016 ರಂದು ರಾತ್ರಿ 8.00 ಗಂಟೆಯ ಸಮಯದಲ್ಲಿ ದೂರುದಾರರು ಮನೆಯ ಬಳಿ ಇರುವಾಗ ಆರೋಪಿಗಳಾದ ಪ್ರಭಾಕರ್, ನೀಲಮ್ಮ, ಪರಮೇಶ್ವರಿ, ಗಂಗೋಜಮ್ಮ ರವರುಗಳು ದೂರುದಾರರ ಮನೆಯ ಬಳಿ ಬಂದು ಗಲಾಟೆ ಮಾಡಿ , ಕೈಗಳಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:21.07.2016 ರಂದು ದೂರುದಾರರಾದ ಶ್ರೀಮತಿ. ಗಂಗೋಜಮ್ಮಕೋಂ. ಚಿಕ್ಕವೆಂಕಟರಾಮರೆಡ್ಡಿ, ಕರಡಗೂರು ಗ್ರಾಮ ರವರು ನೀಡಿದ ದೂರಿನಲ್ಲಿ    ದೂರುದಾರರಿಗೂ ಮತ್ತು ಅದೇ ಗ್ರಾಮದ ಚಂದ್ರಮೌಳಿ ರವರಿಗೂ ಮನೆಯ ಪಕ್ಕದ ಖಾಲಿಜಾಗ ವಿಚಾರದಲ್ಲಿ ತಕರಾರುಗಳಿದ್ದು, ದಿನಾಂಕ:19.07.2016 ರಂದು ರಾತ್ರಿ 8.00 ಗಂಟೆಯ ಸಮಯದಲ್ಲಿ ದೂರುದಾರರು ಮನೆಯ ಬಳಿ ಕುಳಿತ್ತಿದ್ದಾಗ,  ಆರೋಪಿಗಳಾದ ಚಂದ್ರಮೌಳಿ, ಭಾರತಿ, ಹೇಮ ರವರುಗಳು ದೂರುದಾರರ  ಮನೆಯ ಬಳಿ  ಬಂದು ಕೆಟ್ಟ ಮಾತುಗಳಿಂದ ಬೈದು,  ಗಲಾಟೆ ಮಾಡಿ , ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

-ಅಪಹರಣ :ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :02

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.07.2016 ರಂದು ದೂರುದಾರರಾದ ಶ್ರೀ. ಸೈಯದ್‌ ಬಾಬು ಬಿನ್‌ ಸೈಯದ್‌ ಬಾಬ, ಲೂರ್ದ್‌‌ನಗರ ಆಂಡ್ರಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗಳಾದ ಕುಮಾರಿ ರಮೀಝಾ  20 ವರ್ಷ ರವರು ಕೆಜಿಎಫ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯಾ ಬಿ.ಎ ತರಗತಿ ಓದುತ್ತಿದ್ದವಳು ದಿನಾಂಕ:21.07.2016 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಬೆಳಗ್ಗೆ 11.00 ಗಂಟೆಗೆ  ಮನೆಯಿಂದ ಹೋದವಳು ಮತ್ತೆ ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.07.2016 ರಂದು ದೂರುದಾರರಾದ ಶ್ರೀಮತಿ ಸರಳಕುಮಾರಿ ಕೋಂ ಸೋಮೇಗೌಡ ಕಮ್ಮಸಂದ್ರ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗಳಾದ ಕುಮಾರಿ ಕುಶಲ ವಯಸ್ಸು 20 ವರ್ಷ, ರವರು ದಿನಾಂಕ:11.07.2016 ರಂದು ಮಧ್ಯಾಹ್ನ 4.00 ಗಂಟೆ ಸಮಯದಲ್ಲಿ ಆರೋಗ್ಯ ಸರಿಯಿಲ್ಲದ ಕಾರಣ ಬೇತಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರುವುದಾಗಿ ತಿಳಿಸಿ ಮನೆಯಿಂದ ಹೋದವಳು ಇದುವರೆವಿಗೂ ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s