ದಿನದ ಅಪರಾಧಗಳ ಪಕ್ಷಿನೋಟ21 ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 20.07.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 21.07.2016 ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆಗೆ ಪ್ರಯತ್ನ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 20.07.2016 ರಂದು ದೂರುದಾರರಾದ ಶ್ರೀಮತಿ ಭುವನೇಶ್ವರಿ ಕೊಂ ಕೇಶವ, ದೊಡ್ಡೂರು ಕರಪನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರಳು ಆರೋಪಿ ಶಾಂತಮ್ಮ ಬಳಿ ರೂ 5000/-ಗಳನ್ನು ಕೈಸಾಲ ತೆಗೆದುಕೊಂಡಿದ್ದು, ದಿನಾಂಕ:20.07.2016 ರಂದು ಆರೋಪಿ ಶಾಂತಮ್ಮ 42 ವರ್ಷ, ದೊಡ್ಡೂರು ಕರಪನಹಳ್ಳಿ ಗ್ರಾಮದವರು, ದೂರುದಾರರ ಮನೆಯ ಬಳಿ ಹೋಗಿ ಸಾಲದ ಹಣವನ್ನು ಕೊಡುವಂತೆ ಕೇಳಿ ಜಗಳ ಕಾದು, ದೂರುದಾರಳನ್ನು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು, ಸ್ವೌವ್ ಮೇಲೆ ಪಾತ್ರೆಯಲ್ಲಿ ಬಿಸಿಯಾಗಿದ್ದ ನೀರನ್ನು, ಎತ್ತಿ ದೂರುದಾರಳನ್ನು ಸಾಯಿಸುವುದಾಗಿ ಹೇಳಿ ಮೈಮೇಲೆ ಸುರಿದು ಕೊಲೆ ಪ್ರಯತ್ನ ಮಾಡಿರುತ್ತಾರೆ. ದೂರುದಾರಳ ತೋಳಿನ ಮೇಲೆ, ಎದೆಯ ಬಲಭಾಗ ಮತ್ತು ಹೊಟ್ಟೆಯ ಮೇಲೆ, ಸುಟ್ಟಗಾಯಗಳಾಗಿರುತ್ತದೆ.

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ : ಇಲ್ಲ

-ಅಪಹರಣ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹುಡುಗಿಯನ್ನು ಅಪಹರಣ ಮಾಡಿಕೊಂಡು ಹೋಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 20.07.2016 ರಂದು ದೂರುದಾರರಾದ ಶ್ರೀ. ಬಾಲಾಜಿ ಸಿಂಗ್‌ ಬಿನ್‌ ರಾಮಸಿಂಗ್‌, ಹುಣಸನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 18.07.2016 ರಂದು ಬೆಳಿಗ್ಗೆ 10.00 ಗಂಟೆಗೆ ದೂರುದಾರರ ಮಗಳು (ಹೆಸರು ಬದಲಾಯಿಸಿದೆ) 14 ವರ್ಷ, ರವರು ಸಿಮೇಎಣ್ಣೆ ತರಲು ಮನೆಯಿಂದ ಹೊರಗೆ ಹೋಗಿದ್ದು, ಸಂಜೆಯವರಿಗೂ ಮನೆಗೆ ವಾಪಸ್ಸು ಬಾರದೆ ಇದ್ದುದ್ದರಿಂದ, ದೂರುದಾರರ ನೆಂಟರ ಮನೆಗಳಲ್ಲಿ ಇತರೆ ಕಡೆಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗದೆ ಇದ್ದು. ನಂತರ ದೂರುದಾರರ ಮಗಳನ್ನು ಹುಣಸನಹಳ್ಳಿ ಗ್ರಾಮದ  ಆರೋಪಿ ಅನಿಲ್‌ ಕುಮಾರ್‍ ಎಂಬುವರು ಅಪಹರಣಮಾಡಿಕೊಂಡು ಹೋಗಿರುವುದಾಗಿ ತಿಳಿದುಬಂದಿರುತ್ತದೆಂದು ದೂರಿನಲ್ಲಿ ತಿಳಿಸಿರುತ್ತಾರೆ.

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :02

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 20.07.2016 ರಂದು ದೂರೂದಾರರಾದ ಶ್ರೀ. ರವಿರಾಜ್‌ ಬಿನ್‌ ಶ್ರೀರಾಮುಲು, ಶಂಕರಾತ್ರಿಹಳ್ಳಿ, ಚಿತ್ತೂರು ರವರು ನೀಡಿದ ದೂರಿನಲ್ಲಿ . ದಿನಾಂಕ 20.07.2016 ರಂದು ಬೇತಮಂಗಲದಲ್ಲಿರುವ ಕೋಳಿ ಫಾರಂಗಳನ್ನು ನೋಡಿಕೊಂಡು ಬರಲು ವಿಕೋಟೆ ಬೇತಮಂಗಲ ಮುಖ್ತರಸ್ತೆಯ ಕದರಿಗಾನಕುಪ್ಪಂ ತಿರುವಿನ ಬಳಿ ಅವರ ಹಿರೋಹೋಂಡ ಸ್ಪೆಲೆಂಡರ್ ಪ್ರೋ ದ್ವಿಚಕ್ರವಾಹನ ಸಂ. ಎಪಿ-03-ಬಿಎನ್-9094 ರನ್ನು ಚಾಲಾಯಿಸಿಕೊಂಡು ಬರುತ್ತಿದ್ದಾಗ, ಬೇತಮಂಗಲ ಕಡೆಯಿಂದ ಬರುತ್ತಿದ್ದ, ಹಿರೋಂಹೋಂಡಾ ಸ್ಪೆಲೆಂಡರ್ ಪ್ಲಾಸ್ ದ್ವಿಚಕ್ರವಾಹನ ಸಂ. ಕೆಎ-07-ಆರ್-80 ರ ಸವಾರ ಆತನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ದೂರುದಾರರ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ರಸ್ತೆಯ ಮೇಲೆ ಬಿದ್ದು ರಕ್ತಗಾಯಗಳಾಗಿರುತ್ತದೆ.

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 20.07.2016 ರಂದು ದೂರುದಾರರಾದ ಶ್ರೀಮತಿ ಕಲೈವಾಣಿ ಕೋಂ ಸುಬ್ರಮಣಿ, ಇ.ಟಿ ಬ್ಲಾಕ್‌ ಉರಿಗಾಂ ರವರು ನೀಡಿದ ದೂರಿನಲ್ಲಿ ದಿನಾಂಕ 18.07.2016 ರಂದು ರಾತ್ರಿ ಸುಮಾರು 7.30 ಗಂಟೆಗೆ ದೂರುದಾರರ ಗಂಡ ಸುಬ್ರಮಣಿ ರವರು ಕೆ.ಜಿ.ಎಫ್ ಕಡೆಯಿಂದ ಆಟೋದಲ್ಲಿ ಬಂದು, ಬೆಮೆಲ್ ಐ.ಟಿ.ಐ ಮುಂಭಾಗ ಆಟೋ ಇಳಿದು ರಸ್ತೆ ದಾಟುತ್ತಿದ್ದಾಗ, ಆರೋಪಿ ಐಜಾಕ್‌ ರವರು ದ್ವಿಚಕ್ರವಾಹನವನ್ನು ಬಂಗಾರಪೇಟೆ ಕಡೆಯಿಂದ ಕೆ.ಜಿ.ಎಫ್ ಕಡೆಗೆ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಸುಬ್ರಮಣಿ ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ತಲೆಗೆ ರಕ್ತಗಾಯವಾಗಿರುತ್ತದೆ.  ಆರೋಪಿಯು ದ್ವಿಚಕ್ರವಾಹನವನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 20.07.2016 ರಂದು ದೂರುದಾರರಾದ ಶ್ರೀ. ಮಹೇಂದ್ರ ಅಲಿಯಾಸ್‌ ಬಾಬು ಬಿನ್‌ ವೆಂಕಟೇಗೌಡ ಪಟೇಲ್‌ ಸ್ಟ್ರೀಟ್‌ ಉರಿಗಾಂಪೇಟೆ ರವರು ನೀಡಿದ  ದೂರಿನಲ್ಲಿ ದಿನಾಂಕ:19.07.2016 ರಂದು ಉರಿಗಾಂಪೇಟೆಯಿಂದ ಯರ್ರನಾಗನಹಳ್ಳಿ ರಸ್ತೆಯಲ್ಲಿ ಬರುತ್ತಿದ್ದಾಗ, ರಸ್ತೆಯ ಪಕ್ಕದಲ್ಲಿರುವ  ನೀಲಗಿರಿ ತೋಪಿನಲ್ಲಿ ಯಾವುದೋ ಒಂದು ಹೆಂಗಸಿನ ದೇಹ ಕಾಣಿಸಿದ್ದು,  ಹತ್ತಿರ ಹೋಗಿ ನೋಡಲಾಗಿ ಸುಮಾರು 80 ರಿಂದ 90 ವರ್ಷ ವಯಸ್ಸುಳ್ಳ, ಭಿಕ್ಷುಕಿಯಂತೆ ಇರುವ ಅನಾಮಧೇಯ ಹೆಂಗಸಿನ ಶವವಾಗಿದ್ದು, ಸದರಿ ಅನಾಮಧೇಯ ಹೆಂಗಸು ವೃದ್ದಾಪ್ಯದಿಂದ ಹಾಗೂ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾರೆಂದು ತಿಳಿದು ಬಂದಿರುತ್ತದೆ. ಸದರಿ ಶವವನ್ನು ರಾಬರ್ಟ್‌‌ಸನ್‌ಪೇಟೆ ಜನರಲ್‌ ಅಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s