ದಿನದ ಅಪರಾಧಗಳ ಪಕ್ಷಿನೋಟ 21 ನೇ ಜುಲೈ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 21.07.2016 ರಂದು  ಬೆಳಿಗ್ಗೆ  10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. 

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : 02

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 21.07.2016 ರಂದು ದೂರುದಾರರಾದ ಶ್ರೀಮತಿ ಸಾವಿತ್ರಮ್ಮ ಕೋಂ ಬಾಲಪ್ಪ, ಮುದುಗೂಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದೂರುದಾರರು ಮುದುಗುಳಿ ಗ್ರಾಮದಲ್ಲಿ ಪೆಟ್ಟಿಗೆ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಅಂಗಡಿಯ ಪಕ್ಕದಲ್ಲಿ ಅರಳಿ ಮರದಲ್ಲಿ ಆರೋಪಿಗಳಾದ ಆರುಣಾ, ಶಂಕರಪ್ಪ ಮತ್ತು ನಾಗರಾಜು ಎಂಬುವರು ಸೊಪ್ಪನ್ನು ಕೀಳುತ್ತಿದ್ದಾಗ, ದೂರುದಾರರು ಸೊಪ್ಪು ಕೀಳಬೇಡ ಎಂತ ಹೇಳಿದ್ದಕ್ಕೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಿನಾಂಕ 13.07.2016 ರಂದು ರಾತ್ರಿ ಸುಮಾರು 12-00 ಗಂಟೆಯಲ್ಲಿ ಆರೋಪಿಗಳು ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟು ಸುಟ್ಟುಹಾಕಿರುತ್ತಾರೆ. ಪೆಟ್ಟಿಗೆ ಅಂಗಡಿಯಲ್ಲಿದ್ದ ಸುಮಾರು 10,000/- ರೂಗಳ ಬೆಲೆ ಬಾಳುವ ಅಂಗಡಿ ಸರಕು, ಮತ್ತು 50,000/- ರೂಗಳು ನಗದು ಹಣ ಸುಟ್ಟು ಹೋಗಿರುತ್ತೆ. ಇದರಿಂದ ದೂರುದಾರರಿಗೆ ಸುಮಾರು 60,000/- ರೂಗಳ ನಷ್ಟ ಉಂಟುಮಾಡಿರುತ್ತಾರೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮರಳು ಸಾಗಾಣೆ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:21.07.2016 ರಂದು ಮಧ್ಯಾಹ್ನ 01.00 ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀ. ಸಿ.ಎನ್ ಮಂಜುನಾಥ್ ಸಹಾಯಕ ಕಮೀಷನರ್ ಕೋಲಾರ ವಿಭಾಗ ಕೋಲಾರ ರವರ ದಿನಾಂಕ 21.07.2016 ರಂದು ಬೆಳಗಿನ ಜಾವ ಕೋಲಾರ ಬೇತಮಂಗಲ ಮುಖ್ಯ ರಸ್ತೆಯಲ್ಲಿ ಜಯಮಂಗಲ ಗೇಟ್ ಬಳಿ ಅಕ್ರಮ ಮರಳು ತಪಾಸಣೆ ಕಾರ್ಯದಲ್ಲಿದ್ದಾಗ, ಬೇತಮಂಗಲ ಕಡೆಯಿಂದ ಲಾರಿ ಸಂ.ಎಪಿ-24-ಟಿಎ-5949 ರಲ್ಲಿ ಚಾಲಕನು ವಾಹನದಲ್ಲಿ ಅಕ್ರಮ ಮರಳು ತುಂಬಿಕೊಂಡು ಬರುತ್ತಿದ್ದ ವಾಹನವನ್ನು ನಿಲ್ಲಿಸಿ ಲಾರಿ ಮತ್ತು ಚಾಲಕನನ್ನು ಪೊಲೀಸ್ ಠಾಣೆಗೆ ಕರೆ ತಂದು ಕಾನೂನು ಕ್ರಮ ಜರುಗಿಸಲಾಗಿರುತ್ತದೆ.

-ಅಸ್ವಾಭಾವಿಕ ಮರಣ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:21.07.2016  ರಂದು ದೂರುದಾರರಾದ ಶ್ರೀಮತಿ ಜಗದಾ ಕೋಂ ಸತ್ತೀಶ್‌ ಕುಮಾರ್‌,  ಇ. ಟಿ. ಬ್ಲಾಕ್‌, ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ ದಿನಾಂಕ:17.07.2016 ರಂದು ದೂರುದಾರರ ಗಂಡನಾದ ಶ್ರೀ. ಸತೀಶ್ ಕುಮಾರ್, 44 ವರ್ಷ ರವರು ಮದ್ಯಪಾನ ಸೇವಿಸಿ ಮನೆಗೆ ಬಂದು ಸೀಮೆಎಣ್ಣೆಯ ದೀಪವನ್ನು  ಹಚ್ಚಿ ಸೆಲ್ಪ್ ಮೇಲೆ ಇಟ್ಟಿದ್ದು, ಆಕಸ್ಮಿಕವಾಗಿ ದೀಪ ಸತೀಶ್ ಕುಮಾರ್ ರವರ ತಲೆಯ ಮೇಲೆ ಬಿದ್ದು ಬೆಂಕಿ ತಗುಲಿ ಸುಟ್ಟಗಾಯಗಳಾಗಿರುತ್ತದೆ.  ಇವರನ್ನು ಚಿಕಿತ್ಸೆಗಾಗಿ ರಾಬರ್ಟ್ ಸನ್ ಪೇಟೆ ಜನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದು, ದಿನಾಂಕ:21.07.2016 ರಂದು ಬೆಳಿಗ್ಗೆ 5-30 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸತೀಶ್ ಕುಮಾರ್ 44 ವರ್ಷ ರವರು ಮೃತಪಟ್ಟಿರುತ್ತಾರ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s