ದಿನದ ಅಪರಾಧಗಳ ಪಕ್ಷಿನೋಟ 19 ನೇ ಜುಲೈ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:18.07.2016 ರಂದು  ಬೆಳಿಗ್ಗೆ  10.00 ಗಂಟೆಯಿಂದ ಸಂಜೆ 05.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. 

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ: 19.07.2016 ರಂದು ದೂರುದಾರರಾದ ಶ್ರೀ. ಸುಬ್ರಮಣ್ಯಂ ಬಿನ್‌ ರಾಮಚಂದ್ರಪ್ಪ, 3 ನೇ ಕ್ರಾಸ್‌, ರಾಬರ್ಟ್‌‌ಸನ್‌ಪೇಟೆ ರವರು  ನೀಡಿದ ದೂರಿನಲ್ಲಿ ದಿನಾಂಕ:18.07.2016 ರಂದು ರಾತ್ರಿ 9.15 ಗಂಟೆಯಿಂದ ದಿನಾಂಕ 19.07.2016 ರಂದು ಬೆಳಿಗ್ಗೆ 06.30 ಗಂಟೆಯ ಮಧ್ಯೆ  ಯಾರೋ ಕಳ್ಳರು ಕಿಂಗ್ ಜಾರ್ಜ್ ಕಾಂಪೌಂಡಿನಲ್ಲಿರುವ ಶ್ರೀ. ಶಕ್ತಿ ಮಾರಿಯಮ್ಮ ದೇವಾಲಯದ ಮುಖ್ಯ ದ್ವಾರದ ಕಬ್ಬಿಣದ ಗ್ರಿಲ್ ಬಾಗಿಲಿಗೆ ಹಾಕಿದ್ದ ಬೀಗವನ್ನು ಕಿತ್ತು, ದೇವಾಲಯದ ಒಳಗೆ ಪ್ರವೇಶಿಸಿ ದೇವಾಲಯದಲ್ಲಿದ್ದ, ಕಬ್ಬಿಣದ ಹುಂಡಿಯ ಬೀಗವನ್ನು ಹೊಡೆದು, ಹುಂಡಿಯಲ್ಲಿದ್ದ ಸುಮಾರು 01 ಲಕ್ಷದಿಂದ 01 ಲಕ್ಷ 20 ಸಾವಿರ ರೂ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 19.07.2016 ರಂದು ದೂರುದಾರರಾದ ಶ್ರೀ. ನಾರಾಯಣಸ್ವಾಮಿ,  ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಡ ಶಾಲೆ ಎನ್‌.ಜಿ. ಹುಲ್ಕೂರು ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:16.07.2016 ರಂದು ಬೆಳಗ್ಗೆ 11.30 ಗಂಟೆಗೆ ಶಾಲಾ ಮಕ್ಕಳಿಗೆ ಬಿಸಿಯೂಟ ಹಾಕಿ, ಅಡಿಗೆ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ:18.07.2016 ರಂದು ಬೆಳಗ್ಗೆ 9.30 ಗಂಟೆಗೆ ಬಂದು ಅಡಿಗೆ ಕೊಠಡಿಯ ಬೀಗ ತೆಗೆಯಲು ಹೋದಾಗ ಯಾರೋ ಕಳ್ಳರು ಬೀಗವನ್ನು ಹೊಡೆದುಹಾಕಿ ಕೊಠಡಿಯಲ್ಲಿದ್ದ 3 ಗ್ಯಾಸ್ ಸಿಲೆಂಡರ್ ನ್ನು ಕಳ್ಳವು ಮಾಡಿಕೊಂಡು ಹೋಗಿರುತ್ತಾರೆ.

-ಸಾಮಾನ್ಯ ಕಳುವು :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:19.07.2016 ರಂದು ದೂರುದಾರರಾದ ಶ್ರೀ. ಶಬೀರ್‌, ಬಿನ್‌. ಖಲೀಲ್‌ ಸಾಬ್ ನಂ. 37, ಗುಲ್ಲಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ದಿನಾಂಕ:04.04.2016 ರಂದು ರಾತ್ರಿ ದೂರುದಾರರು ಅವರ  ಆಟೋ ಸಂಖ್ಯೆ ಕೆಎ02-ಬಿ-3842 ರಲ್ಲಿ ಕಾಮಸಮುದ್ರಂ ನಿಂದ ಬಂಗಾರಪೇಟೆಯ ದೇಶಿಹಳ್ಳಿ ಗ್ರಾಮಕ್ಕೆ ಬಂದು ಅವರ ಆಟೋವನ್ನು ದೇಶಿಹಳ್ಳಿಯ ಖಲೀಲ್ ಸಾಬ್ ಎಂಬುವರ ಅಂಗಡಿಯ ಮುಂಬಾಗದಲ್ಲಿ ನಿಲ್ಲಿಸಿ, ಅವರ ಮನೆಗೆ ಹೋಗಿ ಮರುದಿನ ಬೆಳಗ್ಗೆ ಸುಮಾರು 05.00 ಗಂಟೆಯಲ್ಲಿ ಬಂದು ನೋಡಲಾಗಿ,  ನಿಲ್ಲಿಸಿದ್ದ ಆಟೋವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅದರ ಅಂದಾಜು ಬೆಲೆ ಸುಮಾರು ರೂ 30,000/-ಗಳಾಗಿರುತ್ತದೆ.

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s