ದಿನದ ಅಪರಾಧಗಳ ಪಕ್ಷಿನೋಟ 16ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 15.07.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 16.07.2016 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ :ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.07.2016 ರಂದು ದೂರುದಾರರಾದ ಶ್ರೀಮತಿ ಸರಣ್ಯ ಕೋಂ ಮಂಜುನಾಥ, ವಿಜಯ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ 10.07.2013 ರಂದು ಆರೋಪಿ ಮಂಜುನಾಥ ಕೆ.ಆರ್‌ ನಗರ ಮೈಸೂರು ರವರೊಂದಿಗೆ ಮದುವೆಯಾಗಿದ್ದು, ಮದುವೆ ಸಮಯದಲ್ಲಿ ಒಂದು ಬಂಗಾರದ ಚೈನ್ 20 ಗ್ರಾಂ, ಚಿನ್ನ 40 ಗ್ರಾಂ, ರೂ 50,000/-ಗಳನ್ನು  ವರದಕ್ಷಣೆಯಾಗಿ ನೀಡಿರುತ್ತಾರೆ.  ಮದುವೆಯಾದ ಒಂದು ತಿಂಗಳ ನಂತರ ದೂರುದಾರರಿಗೆ 2 ಲಕ್ಷ ರೂಗಳನ್ನು ತೆಗೆದುಕೊಂಡು ಬರಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳವನ್ನು  ನೀಡಿರುತ್ತಾರೆ. ನಂತರ ದಿನಾಂಕ 05.06.2016 ರಂದು ಆರೋಪಿಗಳಾದ ಮಂಜುನಾಥ್, ಸಂಬಂದಿಕರಾದ ನಾಗರಾಜು,ರೋಜಾ, ಆಶಾ, ನೇತ್ರಾವತಿ ರವರುಗಳು ದೂರುದಾರರ ಮನೆಯ ಬಳಿ ಬಂದು ಗಲಾಟೆ ಮಾಡಿ ಕೈಗಳಿಂದ ಹೊಡೆದು ನೀನು ಹಣ ತೆಗೆದುಕೊಂಡು ಬರದಿದ್ದರೆ ಸಾಯಿಸದೇ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.07.2016 ರಂದು  ಬಂಗಾರಪೇಟೆ- ನಾಯಕರಹಳ್ಳಿ ಮುಖ್ಯ ರಸ್ತೆಯ ಮಧ್ಯೆ ಇರುವ ಮಾರುತಿನಗರ ಸಮೀಪ  ನಾಗರಾಜಪ್ಪ 45 ವರ್ಷ,  ಮಾರುತಿ ನಗರ ಬಂಗಾರಪೇಟೆ ರವರು ಅವರ ದ್ವಿಚಕ್ರ ವಾಹನದ ಸಂಖ್ಯೆ ಕೆಎ-08-ಯು-4695 ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಎದುರುಗಡೆಯಿಂದ  ಗಂಗರಾಜು, ಮಾವಳ್ಳಿ ಗ್ರಾಮದ ವಾಸಿ ರವರು ಅವರ ಅಪ್ಪಾಚಿ ದ್ವಿಚಕ್ರ ವಾಹನದ ಸಂಖ್ಯೆ ಕೆಎ-07-ಆರ್-8909 ವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾಗರಾಜಪ್ಪ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಯಲ್ಲಿ ಬಿದ್ದು, ನಾಗರಾಜಪ್ಪ ರವರಿಗೆ ತೀರ್ವ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೋಲಾರದ ಆರ್‌ಎಲ್‌ ಜಾಲಪ್ಪ ಅಸ್ಪತ್ರೆಗೆ ಹೋಗುವಷ್ಟರಲ್ಲಿ ಮೃತಪಟ್ಟಿರುತ್ತಾರೆ. ಆರೋಪಿ ಗಂಗಾರಾಜು ರವರಿಗೂ ಸಹ ರಕ್ತಗಾಯಗಳಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s